Friday, June 14, 2024

ಸತ್ಯ | ನ್ಯಾಯ |ಧರ್ಮ

ಆ ಐಟಿ ಹುಡುಗಿ…

ಆಫೀಸಿನಿಂದ ಒಂದು ತಿಂಗಳು ದೆಹಲಿ ಗೆ ಹೋಗಬೇಕಿತ್ತು. ಹೊರಟಿದ್ದೆ. ಮದುವೆ ಆದ ಮೇಲೂ ಹೀಗೆ ಮಾಡ್ತೀಯ ಅಂದ. Ofcourse.. what’s wrong in that ಎಂದೆ…ಹೊರಜಗತ್ತಿಗೆ ಅಷ್ಟಾಗಿ ತಿಳಿಯದ ಟೆಕ್ಕಿಗಳ ಬದುಕಿನ ಸಿಹಿಕಹಿಗಳ ಅನಾವರಣ ಮಾಡಿದ್ದಾರೆ ʼಟೆಕ್ಕಿ ಡೈರೀಸ್‌ʼ ನಲ್ಲಿ ಎಂಜಿನೀಯರ್‌ ಕಾವ್ಯಶ್ರೀ.  

I will not have my life narrowed down. I will not bow down to somebody else’s whim or to someone else’s ignorance.”

~Bell Hooks 

“ಶುಕ್ರವಾರ ಬಂತೂ ಅಂದ್ರೆ ಸಾಕು ಸಾರ್ MG road ನಲ್ಲೇ ಸಾಯ್ತಾ ಇರ್ತಾವೆ.

ಸಂಬಳ ಸರಿಗ್ ಬರುತ್ತೆ, ಕರ್ಗುಸ್ಕೊ ಬೇಕಲ್ಲ..”

ನನ್ನ ನೋಡಲು ಬಂದಿದ್ದ ವರ ಮಹಾಶಯ ಸೂಪರ್ ಕಾಪ್ ಅಂದು ಸೋಫಾದ ಮೇಲೆ ಅಪ್ಪಾಜಿ ಮತ್ತಿತರ ಹಿರಿಯರ ಮುಂದೆ ಕಾಲು ಮೇಲೆ ಕಾಲು ಹಾಕಿಕೊಂಡು ಹೀಗೆ ಮಾತಾಡ್ತಾ ಇದ್ದ….

ಅವ್ನು ಹೇಳ್ತಾ ಇದ್ದಿದ್ದು ನಮ್ಮ ಬಗ್ಗೆಯೇ… ಅದೇ… ಐಟಿ ಪೀಪಲ್ ಗಳು..

ಎದ್ದೋಗಿ ಅವ್ನ ತಲೆ ಮೇಲೆ ಗುಂಡು ಕಲ್ಲು ಎಸೆದು ಬಿಡ್ಲಾ ಅಂತ ಅನಿಸಿತ್ತು…

ಅಪ್ಪಾಜಿ ಸುಮ್ಮನೆ ಕೇಳ್ತಾ ಇದ್ರು.. ನಾನಿನ್ನೂ ಆಗಷ್ಟೇ ಐದನೇ ಸೆಮಿಸ್ಟರ್ ಮುಗಿಸಿದ್ದೆ. ಅಷ್ಟು ಬೇಗನೆ ಮದುವೆ ಮಾಡುವ ಯಾವುದೇ ಮನಸ್ಸು ಮನೆಯವರಿಗೆ ಇರಲಿಲ್ಲ.  ಅದೇ ಧೈರ್ಯದ ಮೇಲೆ ಅವನ ಮುಂದೆ ನಿಂತು ಹೇಳಿದ್ದೆ-

“Atleast ನಾವು ದೊಡ್ಡೋರ ಮುಂದೆ ಹೀಗೇ ಕಾಲು ಮೇಲೆ ಕಾಲು ಹಾಕೊಂಡು ಕೂತು head long ಆಗಿ ಮಾತಾಡಲ್ಲ. ಅಷ್ಟು ಸಭ್ಯತೆ ಅಂತೂ ಇದೆ. ಹಾಗೆ ಭಾನುವಾರ ಹೇಳ್ದೆ ಕೇಳ್ದೆ ಒಬ್ರ ಮನೆಗೆ ಬಂದು ಕೂರಲ್ಲ” ಅಂತ.

ಅಣ್ಣ ಮುಸಿ ಮುಸಿ ನಕ್ಕಿದ್ದ ಅವತ್ತು.

ಅತಿ ಹೆಚ್ಚು ಸ್ಟೀರಿಯೋಟೈಪ್ ಗೆ ಒಳಗಾದವರು ನಾವುಗಳು.

ನಿಮಗೇನ್ರಿ ಸೋಮವಾರದಿಂದ ಶುಕ್ರವಾರದ ವರೆಗೂ ಅಷ್ಟೇ ಕೆಲ್ಸ. ಆಮೇಲೆ full ಮಜಾ ಅಲ್ವಾ…!!!

ನಿಮ್ಗೇನ್ ಬಿಡ್ರೀ…. ಲಕ್ಷ ಲಕ್ಷ ಎಣಿಸ್ತಿರ.

ನಿಮ್ ಐಟಿ ನಲ್ಲಿ ಡೈವೋರ್ಸ್ ಜಾಸ್ತಿ ಅಲ್ವಾ?

Live-in relationship ಗಳು ಮಾಮೂಲು ಅಲ್ವಾ???

ಹೌದು ನಾವು IT ಗಳವ್ರು… ನಮ್ಗೆ tech park ಏ ಪ್ರಪಂಚ. ಬಾವಿ ಕಪ್ಪೆಗಳು, ಕಷ್ಟ ಗೊತ್ತಿಲ್ಲದವರು…

ಇನ್ನೂ ಏನೇನೋ….

ಇವರಿಗೇನು ಗೊತ್ತು, ಎಲ್ಲಿಂದಲೋ ಬಂದು ಇಲ್ಲಿ ನೆಲೆ ಕಂಡುಕೊಂಡು ಪ್ರತಿ ದಿನ ಹೋರಾಡುವ ನಮ್ಮಂಥವರ ಕತೆ?

ದಿನಕ್ಕೆ 10 ಗಂಟೆ ಮೆಂಟಲ್ ಸ್ಟ್ರೆಸ್ ಗೆ ಒಳಗಾಗಿ ರಾತ್ರಿ ಕಣ್ಣು ಮುಚ್ಚಲು ಕಷ್ಟ ಪಡುವವರು ಎಷ್ಟೋ ಜನ…

ಅವತ್ತು ಪಕ್ಕದ ಮನೆ ಆಂಟಿಯೊಟ್ಟಿಗೆ ಮಾತಾಡುತ್ತಿದ್ದೆ.  ನಿನ್ನ ನೋಡಿದ್ರೆ ಎಂಜಿನಿಯರ್ ಅನ್ಸೋದೆ ಇಲ್ಲ ನೋಡಮ್ಮಿ ಅಂತ ಶುರು ಮಾಡಿದ್ದರು ಆ ಆಂಟಿ. ಅವ್ರ ಪ್ರಕಾರ ಎಂಜಿನಿಯರ್ ಹುಡುಗಿ ಅಂದ್ರೆ ಹೇಗೆ ಇರ್ತಾಳೆ ಅಂತ ತಿಳ್ಕೊಬೇಕಿತ್ತು ನಾನು. ಕೆಟ್ಟ ಕುತೂಹಲದಿಂದ ಮತ್ ಹೆಂಗ್ ಕಾಣಿಸ್ತಿನಿ ಆಂಟಿ ಅಂದೆ.

“ಆ 6 ನೆ ಫ್ಲಾಟ್ ಹುಡುಗಿ, ದಿನಾ ಒಬ್ಬೊಬ್ಬನ್ bike ನಲ್ಲಿ ಬರ್ತಾಳೆ. ಒಂದೊಂದ್ ಸಲ ಯಾರ್ ಯಾರದೋ ಕಾರ್ ನಲ್ಲಿ ಬರ್ತಾಳೆ. ಶುಕ್ರವಾರ ಆದ್ರೆ ಸಾಕು ಹೊರಗಡೆ ಸುತ್ತಾಡೋಕೆ ಹೋಗ್ತಾಳೆ. ಅವ್ಳ ಮನೇಲಿ ಹೇಳೋರು ಕೇಳೋರು ಯಾರು ಇಲ್ಲ ನೋಡು….”

ಇಲ್ಲಿಂದ ಶುರು ಆಗಿದ್ದು, ಹೇಗೆ ತನ್ನ ಗೆಳತಿಯ ಮೈದುನನ ಹೆಂಡತಿಯ ತಂಗಿ ಮಗನಿಗೆ ಎಂಜಿನಿಯರ್ ಸೊಸೆ ತಂದು ಅವ್ಳು ಹೇಗೆ ವರ್ಷ ಕಳೆಯುವೊತ್ತಿಗೆ ಡೈವೋರ್ಸ್ ತಗೊಂಡ್ಳು ಅಂತ ಹೇಳ್ಕೊಂಡು ಕೂತಿದ್ರು. ಇದ್ಯಾಕೋ ಅತಿ ಆಯ್ತು ಅಂತ ಅನ್ನಿಸ್ತು.

ಅಂದ ಹಾಗೆ 6 ನೆ ನಂಬರ್ ನ ಫ್ಲಾಟ್ ನ ಹುಡುಗಿ ಬಳಸ್ತ ಇದ್ದಿದ್ದು Uber ನ ಬೈಕ್ ಟ್ಯಾಕ್ಸಿ. ಕೆಲವೊಮ್ಮೆ ಕಾರ್ ಪೂಲಿಂಗ್. 

ಎಷ್ಟೋ ಜನ ಹುಡುಗಿಯರು ವಾರಾಂತ್ಯದಲ್ಲಿ freelance ಮಾಡ್ತಾರೆ. ಅವತ್ಯಾಕೊ ಆಂಟಿ ಜೊತೆ ವಾದ ಮಾಡುವ ಮನಸ್ಸಿರಲಿಲ್ಲ.

ಫೋನ್ ನೋಡಿಕೊಂಡೆ ಅವನು ಅಲ್ಲಿಗಾಗಲೆ ಹತ್ತು ಬಾರಿ ಕರೆ ಮಾಡಿದ್ದ. ಮಾತಾಡಲು ಇನ್ನೇನೂ ಉಳಿದಿರಲಿಲ್ಲ.

ಅಮ್ಮ ನೋಡಿದ್ದ ಹುಡುಗ. ಒಳ್ಳೆಯವನು, ಯಾವುದೇ ಚಟ ಇರ್ಲಿಲ್ಲ(?). ನಮ್ಮೂರಿಗೆ ಕಳಶ ಅಂತ ಏನ್ ಊರಿನ ಜನ ಹೇಳಿದ್ದೇ ಹೇಳಿದ್ದು. ಅಪ್ಪನ ಮಾತಿಗೆ ಕಟ್ಟು ಬಿದ್ದು engagement ಗೆ ಒಪ್ಪಿದ್ದೆ. 

ಅವ್ನಿಗೆ ನಾನು ಇದ್ದ ಪಿಜಿಯಿಂದ ಹಿಡಿದು ಕೆಲಸ ಮಾಡುತ್ತಿದ್ದ ಕಂಪನಿಯ ವರೆಗೂ ಎಲ್ಲದರಲ್ಲೂ ತಕರಾರು. ಒಂದು ವಾರ ಹೇಗೋ ತಡ್ಕೊಂಡ್ ಇದ್ದೆ. ಆಫೀಸಿನಿಂದ ಒಂದು ತಿಂಗಳು ದೆಹಲಿ ಗೆ ಹೋಗಬೇಕಿತ್ತು. ಹೊರಟಿದ್ದೆ. ಮದುವೆ ಆದ ಮೇಲೂ ಹೀಗೆ ಮಾಡ್ತೀಯ ಅಂದ. Ofcourse.. what’s wrong in that ಎಂದೆ. ನಿನ್ನ ಗೂಳಿ ತರ ಬೆಳ್ಸಿದಾರೆ ನಿಮ್ ಅಪ್ಪ ಅಮ್ಮ ಅಂದ. ಗೂಳಿ ಗಂಡು ಎಂದೆ ವ್ಯಂಗ್ಯವಾಗಿ. ಮತ್ತೂ ಉರಿದು ಬಿದ್ದಿದ್ದ.

ದೆಹಲಿಯಲ್ಲಿ ಇದ್ದಷ್ಟು ದಿನ ಅವ್ನ ಕಾಟಗಳು, ಕೇಳುತ್ತಿದ್ದ ಪ್ರಶ್ನೆಗಳು ಸಿಟ್ಟು ಬರಿಸಿದ್ದವು. ಎಲ್ಲ ಮುಗಿದ ಮೇಲೆ ಒಂದು ಸಂಜೆ ಬೆಂಗಳೂರಿನಲ್ಲಿ ಆಫೀಸ್ ನಿಂದ ಡಿನ್ನರ್ ಪಾರ್ಟಿ ಇತ್ತು. 

ಹೋಗಬೇಡ ಎಂದ.

ನೀನ್ಯಾರು ಎಂದೆ.

ನಿನ್ fiance ಅಂದ.. ನಿಂಗೆ ನನ್ನ ತಡಿಯೋ ಹಕ್ಕು ನಾನು ಕೊಟ್ಟಿಲ್ಲ ಎಂದೆ.

ಹಾಕಿದ್ದ ಬಟ್ಟೆಯ ಬಗ್ಗೆ ಗಲಾಟೆ ತೆಗೆದು ಅಮ್ಮನ ವರೆಗೂ ತಗೊಂಡು ಹೋಗಿದ್ದ.

ಅಮ್ಮ ಹೇಳಿದ್ರು ಅವ್ನಿಗೆ “ನನ್ ಮಗಳನ್ನ ಹೇಗ್ ಬೆಳುಸ್ಬೇಕು ಅಂತ ನಮಗೆ ಗೊತ್ತು ಮಿತಿಯಲ್ಲಿರು” ಅಂತ

ಫ್ರೆಂಡ್ಸ್ ಒಟ್ಟಿಗಿದ್ದ status ಪಟಕ್ಕೆ reply ಕೊಟ್ಟಿದ್ದ

You bitch ಎಂದು.

ನಾನೆಂದಿದ್ದೆ, thank you… You know what that’s the great compliment one can give to a girl.

ಎಂದು…

“Huh? Shameless”

“Ofcourse, have you ever observed a bitch? (Female dog). When shez walking on the street atleast half a dozen of male dogs will be following her including the top breeds. And she’ll choose one boy and he stands out to be a stud… You know what the real escort here is a male dog and so do you” ಎಂದೆ… ಹೀಗೆ ಹೇಳಿ ಬ್ಲಾಕ್ ಮಾಡಿದ್ದೆ.

ಮರುದಿನ ಅಪ್ಪಾಜಿ ಕಡೆಯಿಂದ ಅವ್ನ ಮನೆಗೆ ನಾನು ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡ ಸುದ್ದಿ ಮುಟ್ಟಿತ್ತು.

ಆದ್ರೆ ಜನರ ಬಾಯಲ್ಲಿ ಬಂದ ಮಾತು ವಿಚಿತ್ರವಾಗಿತ್ತು. ಅದಿಕ್ಕೆ ಕಣ್ರೀ ಹುಡ್ಗೀರ್ನ ಜಾಸ್ತಿ ಓದಿಸ್ಬಾರ್ದು ಅನ್ನೋದು.. ಇವ್ನ ಜೊತೇನೆ ಬಾಳಕ್ಕೆ ಆಗಿಲ್ಲ ಅಂದ್ರೆ ಇನ್ಯಾರ್ ಜೊತೆ ಬಾಳ್ತಾಳೆ…. 

ಬಾಳೋಕೆ ಜೊತೆ ಯಾಕೆ ಬೇಕೂ???

ಹೌದು ನಾವು ಐಟಿ ಹುಡುಗಿಯರು. Teams call ಗಳಲ್ಲಿ ಕಷ್ಟ ಸುಖ ಮಾತಾಡಿಕೊಳ್ಳೋರು.

Halloween, Christmas, Deepavali, Thanks Giving, Pride, Eid, ಹೀಗೆ ಎಲ್ಲವನ್ನೂ ಸಂಭ್ರಮಿಸುವವರು….

ಅದೇಕೋ ನೋಡಿ ಬೇರೆ ಯಾವ ಎಂಜಿನಿಯರ್ ಗಳ ಮೇಲಿಲ್ಲದ ಅಸಹನೆ ಐಟಿ ಗಳವರ ಮೇಲೆ ಇದೆ. 

ಯೋಚಿಸುತ್ತಾ ಬೆಲ್ ಮಾಡಿದ್ದು ಆರನೇ ನಂಬರ್ ಫ್ಲ್ಯಾಟ್ ಗೆ. ಹಾಯ್ ಎಂದಳು ನೇಹಾ. What plans for weekend ಎಂದೆ… How about Red Rhino ಎಂದಳು.

Sure ಎಂದೆ…

Little black dress ಧರಿಸಿ ಕಾರ್ ಸ್ಟಾರ್ಟ್ ಮಾಡಿದ್ದೆ…

ಪಬ್ ನ ಒಳಗೆ ಹೋದಾಗ performer ಕೋಯಿ ಕಹೆ ಕೆಹತಾ ರಹೇ ಹಾಡು ಹಾಡುತ್ತಿದ್ದ. ಹೊರಗಿನ ಪ್ರಪಂಚದ ಅರಿವೆಯೇ ಇಲ್ಲದೆ ಕುಣಿಯುತ್ತಿದ್ದ ನಮ್ಮದೇ ಮಂದಿ…

ಹೌದಲ.. so called ಸಭ್ಯ ಪ್ರಪಂಚದ ಬಣ್ಣ ಬಣ್ಣದ ನಾಟಕದ ಬದುಕಿಗಿಂತ ಪಬ್ಬಿನ ಮಂದ ಬೆಳಕು, ಅವ್ರ ಪೂರ್ವಗ್ರಹ ಪೀಡಿತ ಸಕ್ಕರೆ ಮಿಶ್ರಿತ ಕೊಂಕು ಮಾತುಗಳಿಗಿಂತ ವೈನಿನ ಒಗರು ಎಷ್ಟೋ ಆಪ್ತವೆನ್ನಿಸಿದ್ದವು…..

ಕಾವ್ಯಶ್ರೀ

ದೊಡ್ಡಬಳ್ಳಾಪುರದ ಇವರು ಸಾಫ್ಟ್‌ವೇರ್ ಎಂಜಿನೀಯರ್‌

Related Articles

ಇತ್ತೀಚಿನ ಸುದ್ದಿಗಳು