Home ಬೆಂಗಳೂರು ಭಾರತೀಯ ಜನತಾ ಪಾರ್ಟಿ ಈಗ ಬ್ರಿಟಿಷ್ ಜನತಾ ಪಾರ್ಟಿಯಂತೆ ವರ್ತಿಸುತ್ತಿದೆ – ಮಧು ಬಂಗಾರಪ್ಪ 

ಭಾರತೀಯ ಜನತಾ ಪಾರ್ಟಿ ಈಗ ಬ್ರಿಟಿಷ್ ಜನತಾ ಪಾರ್ಟಿಯಂತೆ ವರ್ತಿಸುತ್ತಿದೆ – ಮಧು ಬಂಗಾರಪ್ಪ 

ಬೆಂಗಳೂರು: ನೀಟ್ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ವಿಚಾರವಾಗಿ ಮಾಜಿ ಸಚಿವ ಮಧು ಬಂಗಾರಪ್ಪ ಅವರು ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಕೇಂದ್ರ ಸರ್ಕಾರದ ವಿರುದ್ಧ ಯುವಕರ ಹೋರಾಟ ತೀವ್ರಗೊಳ್ಳುತ್ತಿದೆ ಎಂದು ಹೇಳಿದರು. ಬಿಜೆಪಿಯವರ ಧೋರಣೆ ಬ್ರಿಟಿಷರ ಆಡಳಿತದಂತಿದೆ ಎಂದು ಆರೋಪಿಸಿ, “ಭಾರತೀಯ ಜನತಾ ಪಾರ್ಟಿ ಈಗ ಬ್ರಿಟಿಷ್ ಜನತಾ ಪಾರ್ಟಿಯಂತೆ ವರ್ತಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಸ್ವಾರ್ಥಕ್ಕಾಗಿ ದೇಶದಲ್ಲಿ “ಒಡೆದು ಆಳುವ ನೀತಿ” ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಈ ರೀತಿಯ ರಾಜಕೀಯ ನಿಲ್ಲಬೇಕು ಎಂದು ಆಗ್ರಹಿಸಿದರು.

You cannot copy content of this page

Exit mobile version