ಡಾ.ಹರೀಶ್‌ ಬರೆದಿರುವ ʼಸಿದ್ದರಾಮಯ್ಯ-75ʼ ಪುಸ್ತಕ ಲೋಕಾರ್ಪಣೆ

ಮೈಸೂರು : ಮಂಗಳವಾರದಂದು, ವಿಚಾರವಾದಿ ಬಳಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಭಾಗವಿಹಿಸಿ, ಡಾ.ಹರೀಶ್‌ ಅವರು ಬರೆದಿರುವ ʼಸಿದ್ಧರಾಮಯ್ಯ-75ʼ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ.

ಡಾ.ಹರೀಶ್‌ ಅವರು ಸಿದ್ದರಾಮಯ್ಯ-75 ಎಂಬ ಪುಸ್ತಕವನ್ನು ಬರೆದಿದ್ದು ಇಂದು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಲುವಾಗಿ ವಿಚಾರವಾದಿ ಕಾರ್ಯಕ್ರಮವನ್ನು ಆಯೋಜಿಸಿ ವಿಪಕ್ಷ ನಾಯಕ ಸಿದ್ಧರಾಮ್ಯಯ್ಯನವರನ್ನು ಮುಖ್ಯ ಅಥಿತಿಯಾಗಿ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮೈಸೂರಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ʼಸಿದ್ಧರಾಮಯ್ಯ-75ʼ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್, ಮಾಜಿ ಸಚಿವ ಮಹದೇವಪ್ಪ, ವಿಚಾರವಾದಿಗಳಾದ ಪ. ಮಲ್ಲೇಶ್, ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು, ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ ಮತ್ತಿತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು