Wednesday, June 19, 2024

ಸತ್ಯ | ನ್ಯಾಯ |ಧರ್ಮ

ಗಿನ್ನೀಸ್‌ ದಾಖಲೆ ಬರೆದಿದ್ದ ಕೋಳಿ ನಿಧನ

ಒಂದು ಕೋಳಿಯ ಜೀವಿತಾವಧಿಯ ಕಾಲ ಎಷ್ಟಿರಬಹುದು? ಐದರಿಂದ ಹತ್ತು ವರ್ಷ ಎಂದಿಟ್ಟುಕೊಳ್ಳೋಣ. ಆದರೆ ಪೀನಟ್‌ ಎಂಬ ಕೋಳಿ ಇಪ್ಪತ್ತು ವರ್ಷ ಬದುಕುಳಿದು ಗಿನ್ನೀಸ್‌ ದಾಖಲೆ ಸೇರಿಕೊಂಡಿತ್ತು. ಎಂಬುದನ್ನ ತಿಳಿದರೆ ನಿಮಗೆ ಅಚ್ಚರಿಯಾಗತ್ತಲ್ಲವೇ? ಆದರೆ ಈ ಸುದ್ದಿ ನಿಜ ನೋಡಿ.

ಅಮೆರಿಕದ ಮಿಚಿಗನ್ ನಗರದ ದಂಪತಿ ಕೋಳಿಗಳನ್ನು ಸೇರಿದಂತೆ ಹಲವು ಪ್ರಾಣಿಗಳನ್ನು ತಮ್ಮ ಜಮೀನಿನಲ್ಲಿ ಸಾಕಿಕೊಂಡಿದ್ದಾರೆ. ಇದರಲ್ಲಿ ʼಪೀನಟ್ʼ ಎಂಬ ಹೆಸರಿನ ಕೋಳಿ ವಿಶ್ವದ ಅತ್ಯಂತ ಹಳೆಯ ಕೋಳಿ ಎಂಬ ಗಿನ್ನೆಸ್ ದಾಖಲೆಯನ್ನು ಪಡೆದುಕೊಂಡಿತ್ತು.

ಈ ಹಿಂದೆ ಕೋಳಿಯ ಮಾಲೀಕ ಮಾರ್ಸಿ ಪಾರ್ಕರ್ ಡಾರ್ವಿನ್ ಈ ಕೋಳಿಯ ಜನನದ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡುತ್ತಾ ಹೀಗೆ ಹೇಳುತ್ತಾರೆ “ಪೀನಟ್ ಮೊಟ್ಟೆಯಾಗಿ ಇರುವಾಗಲೇ ತಾಯಿಕೋಳಿ ಬಿಟ್ಟು ಹೋಗಿತ್ತು. ಮೊಟ್ಟೆ ಕೊಳೆತಿರಬಹುದು ಎಂದು ತಿಳಿದು ಬಿಸಾಡಲು ಮನಸ್ಸು ಮಾಡಿದ್ದೆವು. ಬಿಸಾಡುವಾಗ ಮೊಟ್ಟೆಯೊಳಗೆ ಸದ್ದು ಕೇಳಿ, ಮೊಟ್ಟೆಯ ಚಿಪ್ಪನ್ನ ಬಿಡಿಸಿದಾಗ ಮರಿಯು ಜೀವಂತವಾಗಿರುವುದು ತಿಳಿಯಿತು. ನಂತರ ಮರಿಯನ್ನು ತಾಯಿ ಕೋಳಿ ಹತ್ತಿರ ಬಿಟ್ಟೆವು ಆದರೆ ತಾಯಿ ಕೋಳಿ ಇದನ್ನು ಸೇರಲಿಲ್ಲ. ನಂತರ ನಾವೇ ಈ ಕೋಳಿಯನ್ನೂ ನೋಡಿದೆವು. ಹುಟ್ಟಿದಾಗಿನಿಂದಲೂ ಚಿಕ್ಕದಾಗಿದ್ದ ಕಾರಣ ಈ ಕೋಳಿಗೆ ಪೀನಟ್ ಎಂದು ಹೆಸರಿಟ್ಟಿದ್ದೇವೆ” ಎಂದು.

ನಿರಂತರ ಸುದ್ದಿಗಳಿಗೆ ನಮ್ಮ ವಾಟ್ಸಾಪ್ ಗುಂಪನ್ನು ಸೇರಿ : ಪೀಪಲ್ ಮೀಡಿಯಾ

21 ವರ್ಷ 238 ದಿನಗಳ ಕಾಲ ಬದುಕಿದ್ದ ಪೀನಟ್ ಕಳೆದ ಕ್ರಿಸ್ಮಸ್‌ ದಿನದಂದು ತನ್ನ ಜೀವನವನ್ನ ಕೊನೆಗೊಳಿಸಿದೆ.
ಈ ಬಗ್ಗೆ ಸುದ್ದಿ ಹಂಚಿಕೊಂಡ ಡಾರ್ವಿನ್‌ ಬಹಳ ದುಃಖದಿಂದ ಪೀನಟ್‌ ಕೊನೆಯುಸಿರು ಬಿಟ್ಟ ನಂತರ ಅದರ ಬಹು ಕಾಲದ ಸಂಗಾತಿಯಾಗಿದ್ದ ಬೆನ್ನಿ ಕೂಡ ನಿಧನವಾದ ಬಗ್ಗೆ ತಮ್ಮ ಬ್ಲಾಗ್‌ ನಲ್ಲಿ ಹಂಚಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು