100 ಗ್ರಾಂ ಹೆಚ್ಚುವರಿ ತೂಕದಿಂದ ಸ್ಪರ್ಧೆಯಿಂದಲೇ ಅನರ್ಹಗೊಂಡ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಸಲ್ಲಿಸಿರುವ ಮೇಲ್ಮನವಿಯ ತೀರ್ಪು ಆ. 16 ರಂದು ಪ್ರಕಟವಾಗಲಿದೆ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ(CAS) ತಿಳಿಸಿದೆ.
ಮಹಿಳಾ ಕುಸ್ತಿ ವಿಭಾಗದಲ್ಲಿ ತನ್ನ ಅನರ್ಹತೆ ಪ್ರಶ್ನಿಸಿ, ಮತ್ತು ಕನಿಷ್ಠ ಬೆಳ್ಳಿ ಪದಕಕ್ಕೆ ಪರಿಗಣಿಸುವುದೂ ಸೇರಿದಂತೆ, ಒಲಿಂಪಿಕ್ಸ್ ನಲ್ಲಿ ನಗರದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಕೋರಿ ಕುಸ್ತಿ ಪಟು ವಿನೇಶ್ ಪೋಗಟ್ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯ ಕುರಿತ ವಿಚಾರಣೆ ನಡೆಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ(CAS) ವಾದ ಪ್ರತಿವಾದಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿತ್ತು. ಅದೇ ರೀತಿ ಇಂದು ತೀರ್ಪು ಪ್ರಕಟಿಸುವುದಾಗಿ ಹೇಳಲಾಗಿತ್ತು.
ಮೂರನೇ ಬಾರಿಗೆ CAS ತನ್ನ ತೀರ್ಪನ್ನು ಮುಂದೂಡಿದೆ. ಇಂದು ಕಾಯ್ದಿರಿಸಿದ ತೀರ್ಪನ್ನು ಆಗಸ್ಟ್ 16ರಂದು ಪ್ರಕಟಿಸಲಿದೆ ಎಂದು ತಿಳಿಸಲಾಗಿದೆ.