Sunday, June 23, 2024

ಸತ್ಯ | ನ್ಯಾಯ |ಧರ್ಮ

ದಿ ಡೆಂಡಲೈನ್ಸ್

ಸಾಮಾನ್ಯವಾಗಿ ವರ್ಕಿಂಗ್ ಮದರ್ಸ್ ತಮ್ಮ ಕೆರಿಯರ್ ಮತ್ತೆ ಕುಟುಂಬದ ವಿಚಾರದಲ್ಲಿ ಆಯ್ಕೆ ಮಾಡಿಕೊಳ್ಳಲು ತುಂಬಾ ಹೆಣಗಾಡ್ತಾರೆ. ಅವರು ಪರ್ಫೆಕ್ಟ್ ಎಂಪ್ಲಾಯಿ ಮತ್ತು ಪರ್ಫೆಕ್ಟ್ ತಾಯಿ ಆಗಿ ತಮ್ಮನ್ನ ತಾವು ಗುರುತಿಸಿಕೊಳ್ಳುವ process ನಲ್ಲಿ ತಮ್ಮ ಆಸೆ, ಸ್ವಂತಿಕೆ, ಪರ್ಸನಲ್ ಸ್ಪೇಸ್ ಇವನ್ನೆಲ್ಲ ತ್ಯಾಗ ಮಾಡ್ತಾರೆ– ಟೆಕ್ಕಿ ಡೈರೀಸ್‌ನಲ್ಲಿ ಕಾವ್ಯಶ್ರೀ

Women do not leave their jobs because they don’t want to work or because they are not committed to their careers. They leave because the demands of their job are not compatible with the demands of motherhood.

– Bell Hooks

“ಹಲೋ ಧ್ವನಿ, ನಾನು ಡಾ ರಾಘವ್, pleased to meet you” ಎಂದು ದೊಡ್ಡ ರೋಸ್ ಬೊಕೆಯನ್ನ ಕೊಡುತ್ತಾ ಕೈ ಕುಲುಕಿದವನನ್ನ ಮೇಲಿನಿಂದ ಕೆಳಗಾನ ನೋಡಿದಳು ಧ್ವನಿ.

ನೀಲಿ ಬಿಳಿ ಚೌಕಳಿ ಶರ್ಟು ಮತ್ತು matching navy blue ಪ್ಯಾಂಟು. ಥೇಟ್ ಹೈ ಸ್ಕೂಲ್ ಯೂನಿಫಾರ್ಮ್.

ಜೇಬಲ್ಲಿ ಪಿಯರ್ ಕರ್ಡಾನ್ ಪೆನ್. Rayban sunglass. ಕೈ ನಲ್ಲಿ Tissot watch. Uff!

“Thank you” ಅಂತ ಸ್ವಲ್ಪ hesitant ಆಗೇ ಬೊಕೆ ಇಸ್ಕೊಂಡ್ಲು. 

“ಅಯ್ಯೋ ಇದನ್ನ ಕೈಲಿ ಹಿಡ್ಕೊಂಡು ಮಾಲ್ ಸುತ್ತ ಹೆಂಗಪ್ಪ ಓಡಾಡ್ಲಿ! ನಮ್ ಊರ್ ಕಡೆ ಹುಡುಗ್ರು ಇನ್ನ ಫಿಲ್ಮಿ ಆಗಿ ಆಡೋದಂತು ಬಿಡಲ್ಲ” ಅಂತ ಮನಸಲ್ಲೇ ಬೈಕೊಂಡಿದ್ದಂತು ನಿಜ.  

ಸರಿ ತನ್ನ ಮಾಮೂಲಿ ಡೆವಿಲ್ಸ್ ಓನ್ ಫ್ರಾಪೆ ಆರ್ಡರ್ ಮಾಡಿದ್ಲು. ಅವ್ನು ತಾನು ಕಾಫಿ ಟೀ ಏನು ಕುಡಿಯಲ್ಲ ಟೀ ಟೊಟ್ಲರ್ ಅಂತ ಹೇಳಿ ಸುಮ್ನೆ ಆದ.

ಕಾಫಿ ಕುಡೀತ ಕುಡಿತ ಇಬ್ಬರ ಇಂಟ್ರೋ ಎಕ್ಸ್ಚೇಂಜ್ ಆಯ್ತು.

ಅವನು ತನ್ನ ಬ್ಯಾಗ್ ನಿಂದ ಒಂದು ಪ್ರಿಂಟೆಡ್ ಬಯೋಡೇಟಾ ತೆಗೆದು ಇವ್ಳ ಕೈಗೆ ಕೊಟ್ಟ.

ಧ್ವನಿ ಏನಿದು ಅನ್ನುವಂತೆ ಮಿಕ ಮಿಕ ಅಂತ ನೊಡ್ತಿದ್ಲು. ಅದಕ್ಕೆ ಅವನು “ನೀವು ತುಂಬಾ ಹೊತ್ತು ಸ್ಕ್ರೀನ್ ನೋಡ್ತಾ ಕೆಲ್ಸ ಮಾಡ್ತೀರಾ ಅಲ್ವಾ so ನನ್ ಬಯೋಡೇಟಾ ಓದುವಾಗ ಇನ್ನೂ ಹೆಚ್ಚು strain ಮಾಡ್ಕೊಳೋದು ಬೇಡ ಅಂತ ಅಷ್ಟೇ”.

ಥೋ ಡಾಕ್ಟರ್ ಅಂದ್ರೆ ಅರ್ಜುನ್ ರೆಡ್ಡಿ ತರ ಇರ್ತಾನೆ ಅಂತ ಬೇರೆ ತರ ಬಯ್ಯೋಕೆ prepare ಆಗಿ ಬಂದಿದ್ದ ಧ್ವನಿ ಗೆ ಅನ್ನಿಯನ್ ಸಿನೆಮಾದ ರಾಮು ತರದವನು ಸಿಗ್ತಾನೆ ಅಂತ expect ಮಾಡಿರಲಿಲ್ಲ! 

ಧ್ವನಿಯ ಅಕ್ಕ ನಯನ ಒಬ್ಬ ಹುಡುಗನ್ನ ನೋಡಿದ್ದಳು. ಹುಡುಗ ಡಾಕ್ಟರ್. ಅಕ್ಕನ ಕಾಟ ತಾಳೋಕೆ ಆಗ್ದೆ ಇವ್ಳು ಮೀಟ್ ಆಗ್ತೀನಿ ಅಂತ ಫೀನಿಕ್ಸ್ ಮಾರ್ಕೆಟ್ ಸಿಟಿ ನಲ್ಲಿ ಇರೋ ccd ನಲ್ಲಿ ಸಿಗೋಕೆ ಪ್ಲಾನ್ ಆಗಿದೆ.

ಸರಿ ಸಂಜೆ ನಾಲ್ಕು ಗಂಟೆಗೆ ಇವ್ಳು ಬೇಗ ಲಾಗ್ ಔಟ್ ಆಗಿ ಹೋಗಿದಾಳೆ. ನೋಡಿದ್ರೆ ಅವ್ಳಿಗಿನ್ನ ಮೊದಲೇ ಡಾಕ್ಟರ್ ಮಹಾಶಯ ಬಂದು ಸಿಸಿಡಿ ನಲ್ಲಿ ಕಾಯ್ತಾ ಇದ್ದ.

Uff ಹಿಂದಿನ ದಿನ ಫೋನ್ ನಲ್ಲಿ ಮಾತಾಡೋವಾಗ ಇವನಿಗೆ ಮೊದಲು ನಾವು ಭೇಟಿ ಆಗೋಣ ಮನೇಲಿ ಎಲ್ರ ಮುಂದೆ ಬೆದರು ಬೊಂಬೆ ತರ ರೆಡಿ ಆಗಿ ನಿಲ್ಲೋಕೆ ಇಷ್ಟ ಇಲ್ಲ ಅಂತ ಅರ್ತ ಮಾಡ್ಸೋ ಹೊತ್ತಿಗೆ ಸಾಕಾಗಿತ್ತು.

ಅವನು “ಏನಾದ್ರೂ ಇದ್ರೆ ಇಲ್ಲೇ ಮಾತಾಡೋಣವಾ?”

ಧ್ವನಿ “ನಾನು in person meet ಮಾಡೋಕೆ ಇಷ್ಟ ಪಡ್ತೀನಿ. Such that we can discuss our expectations”

ಅವನು ” ಅಯ್ಯೋ ನಾನು dowry ಎಲ್ಲ expect ಮಾಡಲ್ಲ ಕಣ್ರೀ!”

ಧ್ವನಿ ಮನಸಲ್ಲೇ “ಥೋ ಇವ್ನು ಇರೋದೇ ಹಿಂಗ ಇಲ್ಲ ಹಿಂಗ್ ಆಕ್ಟ್ ಮಾಡ್ತಾ ಇದಾನ?”

“ಅಲ್ಲಾ ರೀ expectations ಅಂದ್ರೆ as a partner ನಮ್ ನಮ್ expectations ತಿಳ್ಕೊಬೇಕಲ !”

ಅವನು “ಸರಿ ಬಿಡಿ ನೀವ್ ಪ್ಲೇಸ್ ಹೇಳಿ ಅಲ್ಲಿಗೆ ಬರ್ತೀನಿ ನಾನು”.

———-

ಇನ್ನೇನ್ ಮಾಡೋದು ಅಂತ ಧ್ವನಿ ಅವ್ನ ಬಯೋಡೇಟಾ ಓದೋಕೆ ಶುರು ಮಾಡಿದ್ಲು. Resume ತರ ಇತ್ತು. ಅದ್ರಲ್ಲಿ ಅವ್ನ ಫೋಟೋ, ಕ್ವಾಲಿಫಿಕೇಷನ್, ಫ್ಯಾಮಿಲಿ ವಿವರ, ಆಸ್ತಿ ವಿವರ, ಅವನ ಜೀವನ ಸಂಗಾತಿ ಆದವಳ ಬಗ್ಗೆ expectation ಗಳ ಬಗ್ಗೆ ಇತ್ತು.

ಆ expectation ಬೇರೆ ಏನೂ ಇರ್ಲಿಲ್ಲ ಈ man child ಅನ್ನು ಸಂಭಾಳಿಸುವ ಪುಟ್ಟ ಅಮ್ಮ ಬೇಕಿತ್ತು ಅಷ್ಟೇ.

ಅವ್ಳು ಆ ಬಯೋಡೇಟಾ ನ ಪಕ್ಕಕ್ಕೆ ಇಟ್ಟು “ನಮ್ ನಮ್ಮ priorities ಬಗ್ಗೆ ಮಾತಾಡೋಣ್ವಾ?” ಅಂತ ಕೇಳಿದ್ಳು.

ಅದಕ್ಕೆ ರಾಘವ “sure ಆದ್ರೆ ಅದಕ್ಕೂ ಮುಂಚೆ ನೀವು ನಿಮ್ ಬ್ಲಡ್ ಗ್ರೂಪ್ ಯಾವ್ದು ಅಂತ ಹೇಳ್ತೀರಾ? ನಿಮ್ಮ ಬಯೋಡೇಟಾ ನಲ್ಲಿ ಅದು ಮಿಸ್ ಆಗಿತ್ತು”

ಧ್ವನಿ – “O – ಯಾಕೆ?”

ರಾಘವ – “ಓ ಹೌದಾ! ನಂದು A+”

ಧ್ವನಿ – “ಏನಾದ್ರೂ ಪ್ರಾಬ್ಲಮ್ ಆ?”

ರಾಘವ – “ಹೌದು ಅದು ಏನಂದ್ರೆ, 

Blood ನಲ್ಲಿ Rh factor ಅಂತ ಇರುತ್ತೆ ಅದು ಒಂದು ರೆಡ್ ಬ್ಲಡ್ ಸೆಲ್ ಗಳ ಮೇಲೆ ಇರೋ ಪ್ರೋಟಿನ್ ಅಂಶ. ನಿಮ್ಮ ಬ್ಲಡ್ ಸೆಲ್ ನ ಮೇಲೆ ಪ್ರೋಟಿನ್ ಇದ್ರೆ ಅದು ಪಾಸಿಟಿವ್ ಅಂತ, ಇಲ್ಲ ಅಂದ್ರೆ ನೆಗಟಿವ್ ಅಂತ ಅರ್ಥ.

Suppose husband rh factor negative ಇದ್ದು wife rh factor positive ಇದ್ರೇ ಅಥವಾ ಅವಳದ್ದು ನೆಗಟಿವ್ ಇದ್ರೆ ಮತ್ತು ಮೊದಲ ಮಗುದು rh factor positive ಅಥವಾ ನೆಗಟಿವ್ ಇದ್ರೆ  ಏನು ತೊಂದ್ರೆ ಆಗಲ್ಲ.

ಅದೇ wife rh factor positive ಇದ್ರೇ ಮಗು ಮತ್ತು husband rh factor matter ಆಗಲ್ಲ.

ಆದ್ರೆ ಏನಾದ್ರೂ husband rh factor positive ಇದ್ದು wife rh factor negative ಆಗಿ ಮೊದಲ ಮಗು rh factor positive ಬಂದ್ರೆ ಎರಡನೇ ಮಗೂಗೆ ತುಂಬಾ ತೊಂದ್ರೆ ಆಗುತ್ತೆ.”

ಧ್ವನಿ – ” ಏನ್ ಹೇಳಬೇಕು ಅಂತ ಇದೀರಾ?”

ರಾಘವ – ” ನಂಗೆ ಒಂದೇ ಮಗು ಸಾಕು ಅಂತ ಅನ್ಸುತ್ತೆ ಹೇಗಿದ್ರೂ ನಮ್ದು ಜಾಯಿಂಟ್ ಫ್ಯಾಮಿಲಿ ನಮ್ ಅಣ್ಣ ಮಕ್ಳು ಜೊತೆ ಆರಾಮಾಗಿ ಆಡ್ಕೊಂಡು ಇರುತ್ತೆ ಆ ಮಗು.”

ಧ್ವನಿ – “ಅಲ್ಲ ರಿ ಏನ್ ನೀವು 1st meet ನಲ್ಲೇ ಮಗು ಬಗ್ಗೆ ಮಾತಾಡ್ತಾ ಇದೀರಾ? 1st of all ನಂಗೆ ಮದುವೆ ಇಷ್ಟು ಬೇಗ ಬೇಡವಾಗಿತ್ತು. ಅಕ್ಕ force ಮಾಡಿದ್ಲು ಅಂತ ನಿಮ್ಮನ್ನ ಮೀಟ್ ಮಾಡೋಕೆ ಬಂದೆ. ನೀವ್ ನೋಡಿದ್ರೆ ಆಗ್ಲೇ ಮಗು ಬಗ್ಗೆ ಮಾತಾಡ್ತಾ ಇದೀರಾ! ನಂಗೆ ಇನ್ನೂ ಕೆರಿಯರ್ ನಲ್ಲಿ ಮುಂದೆ ಬರೋಕೆ ಪ್ಲಾನ್ ಇದೆ.”

ರಾಘವ – “ನಾವು ತುಂಬಾ ರಿಚ್ ಫ್ಯಾಮಿಲಿ ಇಂದ ಬಂದಿರೋದು, ನಮ್ಗೆ ನೀವು ದುಡಿಯೋದೇನು ಬೇಕಿಲ್ಲ. ನಗ್ತಾ ನಗ್ತಾ ಎಲ್ಲರ ಜೊತೆ ಮಾತಾಡ್ಕೊಂಡು ಇದ್ರೆ ಸಾಕು ಅಷ್ಟೇ. 

ನೀವು ಮುಂದೆ ಮಾಸ್ಟರ್ಸ್ ಮಾಡ್ಬೇಕು ಅಂತ ಇದ್ರೆ ಹೇಳಿ ಕಳಿಸ್ತಿವಿ. ಇಲ್ಲ ನಿಮ್ ಪ್ಯಾಶನ್ ಅಂತ ಇರುತ್ತಲ mostly ನಿಮ್ ಐಟಿ ಅವ್ರಿಗೆ ಅದೊಂದು ಇರುತ್ತೆ ಅಲ್ವಾ ಪೈಂಟಿಂಗ್, crafts, photography  ಏನಾದ್ರೂ pursue ಮಾಡ್ಬೇಕು ಅಂತ ಇದ್ರೆ ಮಾಡಿ vlogging ಮಾತ್ರ ಬೇಡ ನಮ್ದು reputed ಫ್ಯಾಮಿಲಿ… “

ಹೀಗೆ ಅವ್ನ ಮಾತು ಸಾಗ್ತಾ ಇತ್ತು.

ಅದನ್ನ ಅರ್ಧಕ್ಕೆ ಕತ್ತರಿಸುತ್ತ ಧ್ವನಿ 

” If you want a girl who wants to be a home maker then why searching a girl who is working? And who are you to help me in my higher studies I am self made I will do if I wish to. I don’t think it will work between us. Will inform my sister about this not to proceed further.”

ಹೀಗೆ ಹೇಳಿ ಹೊರಡೋಕೆ ಮೇಲೆದ್ದಳು. ಆಗ ಅವನು ” ಏನ್ ಇಂಗ್ಲಿಷ್ ನವರಿಗೆ ಹುಟ್ಟಿರೋ ತರ ಆಡ್ತಿದ್ಯ.. ಏನೋ ಕಷ್ಟ ಪಟ್ಟು ಮೇಲೆ ಬಂದಿರೋ ಹುಡ್ಗಿ ಅಂತ ನಾವೇ ಎಲ್ಲ ಕೊಟ್ಟು ಮದುವೆ ಮಾಡ್ಕೊಳೋಣ ಅಂತ ಬಂದ್ರೆ ಇಷ್ಟೊಂದು attitude ತೋರಿಸ್ತಾ ಇದ್ಯಲ. ಹಿಂಗೇ ಆದ್ರೆ ನಿನ್ ಹತ್ರ ಯಾವನು ಸುಳಿಯಲ್ಲ. ನೀವ್ ಐಟಿ ಹುಡುಗೀರ್ಗೆ ಜಾಸ್ತಿ salary ಕೊಟ್ಟು ಅಲ್ಪನಿಗೆ ಐಸಿರಿ ಬಂದ್ರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ ಅನ್ನೋ ತರ ಆಗಿದೆ.

ನಮ್ ಅತ್ತಿಗೆ MBA from IIM ಗೊತ್ತಾ ಇಲ್ವಾ.. ಆರಾಮಾಗಿ ಮಕ್ಳುನ್ನ ನೋಡ್ಕೊಂಡು ಇದ್ದಾರೆ. ನಿನ್ net worth double ನಾವು tax ಕಟ್ತಿವಿ ಗೊತ್ತಾ?ಏನೋ ನಮ್ ಊರ್ ಕಡೆ ಹುಡುಗಿ ಇನ್ನೋಸೆಂಟ್ ಇರ್ತಾಳೆ ಅಂತ ಅಂದುಕೊಂಡರೆ. ನಿನ್ನೆ ರಾತ್ರಿ ಪರ್ಸನಲ್ ಆಗಿ ಮೀಟ್ ಮಾಡ್ಬೇಕು ಅಂತ ಅಂದಾಗಲೇ ಅರ್ತ ಮಾಡ್ಕೋಬೇಕಿತ್ತು ನಾನು”

ಧ್ವನಿ – “ನಿಮ್ ಅತ್ತಿಗೆ ಹೋಂ ಮೇಕರ್ ಆಗಿ ಇದಾರೆ ಅಂತ ನಾನು ಹಾಗೆ ಇರ್ಬೇಕು ಅಂತ ಏನಿಲ್ಲ. I want to be financially independent. ಅಂದಹಾಗೆ ಅದೇನೋ ಹೇಳ್ದೆ ಅಲ್ವಾ ಅರ್ಧ ರಾತ್ರಿ ನಲ್ಲಿ ಕೊಡೆ ಹಿಡಿದ ಹಾಗೆ ಅಂತ ನನ್ self esteem ನಿಮ್ಗೆ ಹಾಗ್ ಅನ್ಸಿದ್ರೆ that’s your stupidity and ಇನ್ನೊಂದ್ ಏನೋ ಹೇಳಿದ್ದೆ ಅಲ್ವಾ ಯಾವನು ಸುಳಿಯಲ್ಲ ಅಂತ ನಿಮ್ ತರ mysoginist ಗಳು ಇದ್ರೆ ನಂಗೆ ಮದುವೆ ಬೇಕಾಗೇ ಇಲ್ಲ. ಹಾಗೆ ನನ್ net worth ಬಗ್ಗೆ ಮಾತಾಡ್ದೆ ಅಲ್ವಾ.. ರಾತ್ರಿ ಕಳೆದು ಬೆಳಕರಿಯೋ ಹೊತ್ತಿಗೆ ಐಟಿ ರೇಡ್ ಆಗಿ, ಕ್ವಾರಿ ಗಳ ಒತ್ತುವರಿ ಆಗಿ ಎಲ್ಲ ಕಳಕೊಂಡು ಮತ್ತೆ zero ಆದೋರನ್ನ ನೋಡ್ತಾ ಬೆಳೆದೋಳು ನಾನು.  ಪಬ್ಲಿಕ್ ನಲ್ಲಿ ನಾನ್ issue ಮಾಡೋಕೆ ಮೊದ್ಲು ಜಾಗ ಖಾಲಿ ಮಾಡು” 

ಹೀಗೆ ಹೇಳಿ ಅವ್ಳ ಪಾಲಿನ ಕಾಫಿಯ ದುಡ್ಡನ್ನ ಟೇಬಲ್ ಮೇಲೆ ಇಟ್ಟು ಹೊರ ನಡೆದಳು ಧ್ವನಿ.

——

ಧ್ವನಿ ಅವತ್ತು ಸಂಜೆ ಎಮರ್ಜೆನ್ಸಿ ಮೀಟಿಂಗ್ ಗೆ ಕರೆದಿದ್ಳು.

ಅರೆ ಈ ಹುಡ್ಗಿ ಇವತ್ತು ಡೇಟ್ ನಲ್ಲಿ ಇರ್ಬೇಕಿತ್ತಲ!

“ಇವಳೇನೋ ಎಡವಟ್ಟು ಮಾಡಿರಬೇಕು ಕಣ್ರೋ” ಅಂದ್ಲು ನೇಹಾ.

ಹಿಂದಿನ ರಾತ್ರಿ ಧ್ವನಿ ಫುಲ್ ರೊಚ್ಚಿಗೆದ್ದು ಅವ್ರಕ್ಕ ನಯನಾ ಮೇಲೆ ಕೂಗಾಡ್ತ ಇದ್ಳಂತೆ.

“ಅದೂ ಸರಿ ಆ ಹುಡ್ಗಿ ಅದ್ಯಾವಾಗ ಕೂಲ್ ಆಗಿರ್ತಾಳೆ ಹೇಳು” ಎಂದಳು ಆಕಾಂಕ್ಷ.

“ಈ ಹುಡುಗಿ ಏನ್ ಕಡಿಮೆ ಇದ್ಲಾ? Join ಆಗಿದ್ ಹೊಸದರಲ್ಲಿ! ಚೋರ ಗುರುವಿಗೆ ಚಂಡಾಲ ಶಿಷ್ಯೆ” ಅಂತ ನೇಹಾ ನನ್ ತಲೆ ಮೇಲೆ ಪ್ರೀತಿ ಇಂದ ಮೊಟುಕಿದ್ಲು.

“ನಡೀರಿ ಅಕ್ಕ ಬಾಂಡ್ ಏನ್ ಮಾಡ್ಕೊಂಡ್ ಬಂದವಳೋ ನೋಡಣ” ಅಂತ ಹೇಳಿ ಎಲ್ರೂ ಅವ್ಳ ಫ್ಲ್ಯಾಟ್ ಗೆ ಹೋಗೋಕೆ ರೆಡಿ ಆಗ್ತಾ ಇದ್ವಿ.

ಆಗಲೇ ಸುನೈನಾಳಿಂದ ನನಗೆ ಕಾಲ್ ಬಂದಿದ್ದು.

“Can you please come down to the rest room?”

ಈಗೇನಾಯ್ತು ಸೆಂಥಿಲ್ ನ ಟೀಮ್ ನಲ್ಲಿ ಹಾರ್ಡ್ ಲಾಕ್ ಆಗಿ ಒಂದು ವಾರ ಆಯ್ತಲ ಅಂತ ಎದ್ದು ಹೋದೆ.

ಅಲ್ಲಿ ಸುಜಾತ tissue ನಲ್ಲಿ ತನ್ನ ಮುಖವನ್ನ wipe ಮಾಡ್ಕೋತಾ ಇದ್ರು. ಕಾಜಲ್ ಎಲ್ಲ ಮುಖದ ತುಂಬಾ ಹರಡಿತ್ತು.

ಏನಾಯ್ತು ಅಂತ ಸುನೈನಾಳ ಕಡೆ ಹುಬ್ಬೇರಿಸಿದೆ.

ಅದಕ್ಕೆ ಸುನೈನಾ “ಸುಜಾತ is putting down her papers” ಎಂದಳು.

ಅರೆ ಇದೇನಾಯ್ತು ಸುಜಾತಾಗೆ ಇನ್ನೇನು assistant director ಆಗುವ ಚಾನ್ಸ್ ಇದೆ ಅಲ್ವಾ ಅಂತ ಅಂದ್ಕೊಂಡು “what happened ಸುಜಾತ?” ಎಂದೆ ಅದಕ್ಕೆ ಸುಜಾತ ಏನು ಮಾತಾಡಲಿಲ್ಲ.

ಸುಮ್ಮನೆ ಕೆಳಗೆ ನೋಡುತ್ತಾ ನಿಂತಿದ್ದರು.

ಆಕಾಂಕ್ಷ ಮತ್ತು ನೇಹಾರನ್ನ ಕರೆದೆ.

ಆಕಾಂಕ್ಷ ಬಂದು ಸುಜಾತ ರನ್ನ ಸಂತೈಸಿಕೊಂಡು ಎಲ್ಲರೂ ಕೆಫೆಟೇರಿಯಾ ಗೆ ಹೊರಟೆವು. ಕಾರಣ 

ಮೇಲ್ನೋಟಕ್ಕೆ ಅರ್ಥ ಆಗೋಗಿತ್ತು.

ಸುಜಾತಾ ಯಾವತ್ತೂ ಈವಿಲ್ ಆಗಿರಲಿಲ್ಲ. As a mother if I can do it everyone can do it ಎನ್ನುವ ಧೋರಣೆ ಇತ್ತಷ್ಟೆ. ತುಂಬಾ hardworking. ಅವಳ ಲೆವೆಲ್ ನ manager ಗಳ ಪೈಕಿ outstanding ಆಗಿ ನಿಲ್ಲುವಷ್ಟು potential ಇರುವವಳು.

ಅವಳ ಮಗಳಿಗೆ ಹತ್ತು ವರ್ಷ. 

ಆಗಿದ್ದಿಷ್ಟು ಸುಜಾತ ಎಂದಿನಂತೆ ರಾತ್ರಿ ಹನ್ನೊಂದಾದರೂ ಕೆಲಸ ಮಾಡ್ತಾ ಇದ್ದಾಗ ಅವ್ರ ಮಗಳು ಬಂದು ಅಮ್ಮ ಹಸಿವೆ ಆಗಿದೆ ಅಂತ ಬಂದಾಗ ಸಮಯ ಹನ್ನೊಂದುವರೆ. 

ಅವಳ ಮಗಳು ಆರ್ವಿ ಯನ್ನ ನೋಡಿಕೊಳ್ಳಲು ಅವಳ ದಾದಿ (ಅಜ್ಜಿ) ಇದ್ದಾರೆ. ಅದೇ ಕಾರಣಕ್ಕೆ ಸುಜಾತ ಯಾವಾಗ್ಲೂ ತನ್ನ ಕೆಲಸ ಹಾಗೂ ಕೆರಿಯರ್ ನ ಕಡೆ ಅಷ್ಟು dedicate ಆಗಿ ಇರೋಕೆ ಸಾಧ್ಯ ಆಗಿದ್ದು. ಅಂದು ಅವರ ಅತ್ತೆ ಬಂಧುಗಳ ಮನೆಯಲ್ಲಿ ನಡೆಯುತ್ತಿದ್ದ ಒಂದು ಸಮಾರಂಭದ ನಿಮಿತ್ತ ತಮ್ಮ ಊರಿಗೆ ಹೋಗಿದ್ದಾರೆ.

ಆಗಲೇ ಸುಜಾತಾ ಗೆ ತಾನು ತಾಯಿ ಆಗಿ ಎಷ್ಟು ಫೇಲ್ ಆಗಿದೀನಿ ಅನ್ನೋ realization ಹಾಗು guilt ಕಾಡೋಕೆ ಶುರು ಆಗಿದ್ದು. ಈ ಮಧ್ಯೆ ಆರ್ವೀಗೆ ಜ್ವರ ಬಂದು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು. ಆಗ ಸುಜಾತ ಗೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವಾಗಿಲ್ಲ. ಕೆಲವು deliverable ಗಳಲ್ಲಿ ಹಿಂದೆ ಉಳಿದಿದ್ದರು.

ಇವರ ಅನುಪಸ್ಥಿತಿಯ ಕಾರಣ ಎರಡು ಡೀಲ್ ಮಿಸ್ ಆಗಿತ್ತು. ಇದೆ ಕಾರಣಕ್ಕೆ ಅಂದು ಒಂದೇ ದಿನ ಎಂಟು escalation ಗಳು ಇವರ ಮೇಲೆ ಬಂದಿದ್ದವು.

ಕಾರ್ಪೊರೇಟ್ ನ ಕರಾಳ ಮುಖಗಳಲ್ಲಿ ಇದು ಒಂದು.

ಎಲ್ಲರೂ ಬಾಲ್ ಅನ್ನು ಬೇರೆಯವರ ಕೋರ್ಟ್ ನಲ್ಲಿ ಬಿಸಾಡಲು ನೋಡುವವರೇ. ಒಂದು ಫೇಲ್ಯೂರ್ ಆದಾಗ ಅದನ್ನ ಇತರರ ಮೇಲೆ ಹೊರಿಸೋದರಲ್ಲಿ ಚಾಣಾಕ್ಷರು.

ನಾನು – ಸುಜಾತ, you are a wonderful manager. And a great human being.

ಅದು ಹೇಗೆ ನಿಮ್ಮನ್ನ ನೀವು ತಾಯಿಯಾಗಿ ಫೇಲ್ ಆಗಿದೀನಿ ಅಂತ ಅಂದುಕೊಂಡ್ರಿ? ಈ ರೀತಿಯ escalation ಗಳು ನಿಮಗೇನು ಹೊಸತಲ್ಲ ಅಲ್ವಾ? You did it well.”

ಸುನೈನಾ – ” ಹನ್ ಜಿ ಸುಜಾತಾ, you are an inspiring woman. Being a mother you didn’t give up on your aspirations “

ಆಕಾಂಕ್ಷ – ಸುಜಾತ you know about working mother’s policy ನ why didn’t you reach out to HR person?

ಬೇರೆ ಅವ್ರಿಗೆ ಗೈಡ್ ಮಾಡೋರಾಗಿ ನಾವೇ ಹೀಗೆ ನಮ್ಗೆ ಇರೋ ಅನುಕೂಲ ನ ಮಿಸ್ ಮಾಡ್ಕೋಳೋಕೆ ಆಗುತ್ತಾ?”

ನಾನು – “ಹಾ ಸುಜಾತ please reach out to HR ನಾ. Before taking these drastic measures. I am a daughter of working parents too. ನಾನು ಹುಷಾರು ತಪ್ಪಿದ್ದಾಗ ಕೂಡ ಅಮ್ಮ ಕೆಲಸಕ್ಕೆ ಹೋಗಬೇಕಿತ್ತು. ಕೆಲವು ಸಲ ದೂರದ ಊರುಗಳಿಗೆ ಹೋಗಬೇಕಿತ್ತು. I know how it feels.”

ನೇಹಾ – ” ನಾನು ನನ್ ಇಬ್ರೂ ಮಕ್ಕಳನ್ನ ದೆಹಲಿ ನಲ್ಲಿ ಬಿಟ್ಟು ಬಂದು  ಇಲ್ಲಿ ಇದೀನಿ. ಅವ್ರು ಹುಷಾರಿಲ್ಲದೆ ಇದ್ದಾಗಲೂ ವಿಡಿಯೋ ಕಾಲ್ ನಲ್ಲೆ ಅವ್ರನ್ನ ನೋಡಿ ಸಮಾಧಾನ ಮಾಡ್ಕೋ ಬೇಕು. Listen there is no such thing called perfect mother or perfect employee. We’re imperfectly perfect” 

ಇವೆಲ್ಲ ಬಾಯಿ ಮಾತಿಗೆ ಅಷ್ಟೇ ಚಂದ ಅಂತ ಹೇಳುತ್ತಿದ್ದ ನಮ್ಮೆಲ್ಲರಿಗೂ ಗೊತ್ತಿತ್ತು. 

ಹೆಣ್ಣು ಸಾಮಾಜಿಕವಾಗಿ, ಸಾಂಸಾರಿಕವಾಗಿ, ವ್ಯವಹಾರಿಕ ವಾಗಿ ಮತ್ತು ಉದ್ಯೋಗ ಕ್ಷೇತ್ರ ಗಳಲ್ಲಿ ಹೇಗೆ  ಸ್ಟೀರಿಯೋಟೈಪ್ ಗೆ ಒಳಗಾಗ್ತಾಳೆ,  work place ನಲ್ಲಿ working mothers ಹೇಗೆ marginalize ಆಗಿದ್ದಾರೆ ಅನ್ನೋದು ಎಲ್ರಿಗೂ ಗೊತ್ತಿರೋದೇ.

ಮನೆಯಲ್ಲಿ ಹೆಣ್ಣು ಒಬ್ಬ ಪರ್ಫೆಕ್ಟ್ ಮದರ್ ಆಗಿರಬೇಕು ಅಂತ ಹೇಗೆ ಪ್ರೆಶರ್ ಇರುತ್ತೋ ಅದೇ ತರ women empowerment ನ ಹೆಸರಲ್ಲಿ ಕಾರ್ಯಕ್ಷೇತ್ರ ಗಳಲ್ಲಿಯೂ ಹೆಣ್ಣು ತನ್ನ capability ಯನ್ನ ತೋರಿಸಲೇ ಬೇಕಾಗುತ್ತೆ.

ಈ ಮೂಲಕ ಅವರು ತಮ್ಮ male colleague ಗಿಂತ ಏನು ಕಡಿಮೆ ಇಲ್ಲ ಅನ್ನೋದನ್ನ  ಪ್ರತಿ ದಿನ prove ಮಾಡಲೇ ಬೇಕಾಗುತ್ತೆ. After all career growth always depends on performance!

ಸಾಮಾನ್ಯವಾಗಿ ವರ್ಕಿಂಗ್ ಮದರ್ಸ್ ತಮ್ಮ ಕೆರಿಯರ್ ಮತ್ತೆ ಕುಟುಂಬದ ವಿಚಾರದಲ್ಲಿ ಆಯ್ಕೆ ಮಾಡಿಕೊಳ್ಳಲು ತುಂಬಾ ಹೆಣಗಾಡ್ತಾರೆ. ಹಾಗೇ ಅವರು ತಾವು ತೆಗೆದುಕೊಂಡ ನಿರ್ಧಾರ ಮತ್ತು ಆಯ್ದುಕೊಂಡ ಆಯ್ಕೆಯ ವಿಚಾರವಾಗಿ ಯಾವತ್ತೂ guilt ನಲ್ಲಿ ಬದುಕುತ್ತಾರೆ.

ಒಬ್ಬ working mother ಯಾವತ್ತೂ ತನ್ನ ಜವಾಬ್ದಾರಿಗಳ ಆಚೆಗೆ ಚಿಂತಿಸಲು ಸಾಧ್ಯವೇ ಇರಲ್ಲ.  She is always on call, always on duty and always on job.

Working mother ಗಳ ವಿಚಾರದಲ್ಲಿ work life balance ಅನ್ನೋದು ಒಂದು myth. ಅವರ ವಿಚಾರಗಳಲ್ಲಿ perfect balance ಅನ್ನೋದು ಇಲ್ಲವೇ ಇಲ್ಲ. ನಮ್ಗೆ ಏನು best ಅನ್ಸುತ್ತೊ ಅದಷ್ಟೇ.

ಹೆಂಗಸರ ವಿಷಯಗಳಲ್ಲಿ ಅದರಲ್ಲೂ working mother ಗಳ ವಿಷಯದಲ್ಲಿ societal expectation ತುಂಬಾ ಇರುತ್ತೆ. They expect us to be able to “have it all” – ಒಂದು successful career, ಒಂದು happy family  ಹಾಗು fulfilling personal life. ಈ expectation working mother ಗಳ ಮೇಲೆ ಹೆಚ್ಚು burden ಕೊಟ್ಟಂತೆ ಆಗುತ್ತೆ. 

ಅವರು ಪರ್ಫೆಕ್ಟ್ ಎಂಪ್ಲಾಯಿ ಮತ್ತು ಪರ್ಫೆಕ್ಟ್ ತಾಯಿ ಆಗಿ ತಮ್ಮನ್ನ ತಾವು ಗುರುತಿಸಿಕೊಳ್ಳುವ process ನಲ್ಲಿ ತಮ್ಮ ಆಸೆ, ಸ್ವಂತಿಕೆ, ಪರ್ಸನಲ್ ಸ್ಪೇಸ್ ಇವನ್ನೆಲ್ಲ ತ್ಯಾಗ ಮಾಡ್ತಾರೆ.

ಕಾರ್ಯಕ್ಷೇತ್ರ ಗಳಲ್ಲಿ working mothers  ತಮ್ಮ ಗಳಿಕೆಯ ಸಾಮರ್ಥ್ಯ ಮತ್ತು ವೃತ್ತಿ ಜೀವನದಲ್ಲಿ ಮುನ್ನಡೆಯುವ ಸಾಮರ್ಥ್ಯ ಗಳ ಮೇಲೆ ತುಂಬಾ ಸಿದ್ಧಮಾದರಿಗಳನ್ನ, ಪೂರ್ವಾಗ್ರಹಗಳನ್ನ ಎದುರಿಸುತ್ತಾರೆ. 

ತುಂಬಾ ಕಾಮನ್ ಆಗಿರೋ ಸ್ಟೀರಿಯೋಟೈಪ್ ಅಂದರೆ, ವರ್ಕಿಂಗ್ ಮದರ್ಸ್ ತಮ್ಮ male peer ಗಳಿಗಿಂತ less committed ಆಗಿರುತ್ತಾರೆ ಮತ್ತು ತಮ್ಮ ಫ್ಯಾಮಿಲಿ ಗೆ ಮೊದಲ ಆದ್ಯತೆ ನೀಡುತ್ತಾರೆ ಅನ್ನೋದು.

ಇದೇ ಕಾರಣಕ್ಕೆ ಸುಮಾರು ಸಲ high profile project ಗಳು ಹಾಗೂ promotion ಗಳಲ್ಲಿ ಇವ್ರು ಎಷ್ಟೇ qualified ಆಗಿದ್ದರೂ ಇವರನ್ನ ಕಡೆಗಣಿಸಿ ಬೇರೆಯವರಿಗೆ ಪಾಸ್ ಕೊಡ್ತಾರೆ.

 ಮಾಯಾ ಏಂಜೆಲೋ ಹೀಗೆ ಹೇಳ್ತಾರೆ

“I’ve learned that you shouldn’t go through life with a catcher’s mitt on both hands; you need to be able to throw something back. Being a working mother means that you are rolling the dice every single day. You hope that you can make it all work, that you can be a good mother and a good employee, but sometimes it’s just not possible.”

So it’s ok to miss out few things.

ನಮ್ಮ ಆಯ್ಕೆ ಗಳ ವಿಚಾರದಲ್ಲಿ ಯಾವುದೇ guilt ಇರಬಾರದು. ಅದೇ ರೀತಿ ನಾವು ಹೆಣ್ಣು ಮಕ್ಕಳು ಯಾವುದೇ ರೀತಿಯ peer pressuring ಗೆ ಒಳಗಾಗದೆ ಆನು ಒಲಿದಂತೆ ಹಾಡುವೆ ಎನ್ನುವಂತೆ ಬದುಕಬೇಕು. 

ಸುಜಾತಾ ಗೆ ಸಮಾಧಾನ ಮಾಡಿ ಅಲ್ಲಿಂದ ಹೊರಟು ಧ್ವನಿಯ ಫ್ಲಾಟ್ ಗೆ ಬಂದೆವು. ಆದರೂ ಸುಜಾತ ಇದ್ದ ಪರಿಸ್ಥಿತಿ ನೋಡಿ ಅಯ್ಯೋ ಎನ್ನಿಸಿತ್ತು.

ಕಾರ್ಪೊರೇಟ್ ಗಳು ಬರೀ ಬಾಯಿ ಮಾತಿಗೆ inclusion ಮತ್ತು equality ಯ ಜಪ ಮಾಡದೆ ಕೆಲಸದಲ್ಲಿಯೂ ಒಂದು inclusive environment ಅನ್ನ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು.

ಇದೇ ರೀತಿ ನಮ್ಮ ಕುಟುಂಬದವರು ಸಹ ವರ್ಕಿಂಗ್ ಮದರ್ ಗಳ ಕೊಡುಗೆಗಳನ್ನ ಯಾವುದೇ ಪೂರ್ವಗ್ರಹ ಗಳಿಲ್ಲದೆ ಗೌರವಿಸುವುದು ಕೂಡ ಮುಖ್ಯ ಆಗುತ್ತೆ.

Society starts with family ಅಲ್ವಾ?

———-

ಧ್ವನಿ ಕುದೀತ ಇದ್ಳು “ಇವ್ಳ ತಲೆ ಮೇಲೆ ಒಂದ್ ಮೊಟ್ಟೆ ಹೊಡಿ ಆಮ್ಲೆಟ್ ಆಗಿಲ್ಲ ಅಂದ್ರೆ ನೋಡು ” ಎಂದೆ. “ಅದು ಹೆಂಗೆ ಹೇಳ್ತಾನೆ ನೋಡು ಹಿತಾ ಏನೋ ನಂಗೆ ಅವ್ನು ಬಾಳು ಕೊಟ್ಟು ಪರಮೇಶ್ವರ ಆಗೋ ತರ”

ಈಗಿನ ಕಾಲದಲ್ಲೂ ಈ ರಾಘವನ ರೀತಿಯ ಹುಡುಗರು ಇರ್ತಾರ ಅಂತ ಎಲ್ರೂ ಆಶ್ಚರ್ಯ ಪಡಬಹುದು. ಆದ್ರೆ ಸುಮಾರು ಜನ “ದೊಡ್ಡ ಮನೆಗಳವರು” ತಮ್ಮ ಸೊಸೆಯಂದಿರು ಶೋ ಕೇಸಿನ ಬೊಂಬೆ ಗಳಂತೆ ಅಲಂಕಾರ ಮಾಡ್ಕೊಂಡು ನಗ್ತಾ ಇರ್ಲಿ ಅನ್ನೋ expectation ಗಳಲ್ಲೆ ಇರ್ತಾರೆ. ಷಟ್ ಗುಣ ಸಂಪನ್ನೆಯರು ಬೇಕಷ್ಟೇ ಅವರಿಗೆ. ತುಂಬಾ ಜನ ಬಡ ಕುಟುಂಬದ ಸ್ಪುರದ್ರೂಪಿ, ವಿದ್ಯಾವಂತ ಹೆಣ್ಣು ಮಕ್ಕಳನ್ನು ಹೀಗೇ ಎಲ್ಲ ಕೊಟ್ಟು ಅವರೇ ಮದುವೆ ಮಾಡಿಕೊಂಡು ಬಂದು ಥೇಟ್ ಶೋ ಕೇಸ್ ನ ಗೊಂಬೆ ಗಳಂತೆ ಕೂರಿಸಿರ್ತಾರೆ. ಅವರು ವರ್ಷಕ್ಕೆ ಒಮ್ಮೆ ತಮ್ಮ ತವರು ಮನೆಗೆ ಬಂದಾಗ ಇತರೆ ದಾಯಾದಿಗಳಿಂದ ಈರ್ಶೆ ಗೆ ಬಲಿ ಆಗ್ತಾರೆ. ಒಂದು ರೀತಿ ಬಂಗಾರದ ಪಂಜರದಲ್ಲಿನ ಪಕ್ಷಿಗಳ ತರ ಇರುತ್ತೆ ಇವ್ರ ಬದುಕು.

“ಅಸಲಿಗೆ ನಿಂಗ್ಯಾಕೆ ಇಷ್ಟು ಬೇಗ ಮದುವೆ?” ಎಂದೆ.

ಧ್ವನಿ – “ದೊಡ್ಡಕ್ಕನಿಗೆ ನನ್ನ ಜವಾಬ್ದಾರಿ ಬೇಗ ಮುಗಿಸ್ಕೊಬೇಕೂ ಅಂತ”

ನಾನು – “ಅದ್ಯಾಕೆ?”

ಧ್ವನಿ – ” ಚಿತ್ರಕ್ಕ ಒಬ್ಬ ಹುಡುಗನ್ನ ತುಂಬಾ ಇಷ್ಟ ಪಟ್ಟಿದ್ದಳು ಆ ಹುಡುಗನೂ ಅಕ್ಕ ನ ಇಷ್ಟ ಪಟ್ಟಿದ್ದ.

ನಮ್ಮೆಲ್ಲರ ಜವಾಬ್ದಾರಿ ಇತ್ತು. ಅದಿಕ್ಕೆ ಅಕ್ಕ ಮದುವೆ ಆಗದೆ ಹಾಗೆ ಉಳ್ಕೊಂಡ್ಲು. ಜೊತೆಗೆ ಆ ಹುಡುಗ ಬೇರೆ ಕಮ್ಯುನಿಟಿ ಗೆ ಸೇರಿದವನು. ದೊಡ್ಡ ಮಗಳು ಬೇರೆ community ಹುಡುಗನ್ನ ಮದುವೆ ಆದ್ರೆ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಅಂತ ಎಲ್ಲಿ ಜನ ಮಾತಾಡ್ತಾ ನನ್ನ ಮತ್ತೆ ನನ್ನ ಎರಡನೇ ಅಕ್ಕ ನಯನಾಗೆ ಗಂಡುಗಳು ಸಿಗೋದೇ ಇಲ್ವೋ ಅಂತ ಹೇಳಿ ಚಿತ್ರಕ್ಕ ಹಾಗೆ ಉಳ್ಕೊಂಡ್ ಬಿಟ್ರು. ಅವ್ರು ಇಷ್ಟ ಪಟ್ಟ ಹುಡುಗ ಕೂಡ ಹಾಗೇ wait ಮಾಡ್ತಾ ಇದಾನೆ ಅದಿಕ್ಕೆ.”

ಆಕಾಂಕ್ಷ – “ನಿಂಗೆ ಏನ್ ಅನ್ಸುತ್ತೆ ಈಗ್ಲೇ ಮದುವೆ ಆಗ್ಬೇಕ? ನಿಮ್ ಕಮ್ಯುನಿಟಿ ನಲ್ಲೆ ಮದುವೆ ಆಗಬೇಕಾ? ಇಲ್ಲ ತಾನೆ?”

ಧ್ವನಿ – ” ನಂಗೆ ಮದುವೆ ಬಗ್ಗೆ ಇಂಟರೆಸ್ಟೇ ಇಲ್ಲ. ಅದ್ರಲ್ಲೂ ಇವತ್ತು ಈ ಹುಡುಗನ್ನ ಮೀಟ್ ಮಾಡಿದ್ದ ಮೇಲೆ ನಂಗೆ ಮದುವೆ ಬಗ್ಗೆ ನಂಬಿಕೆನೆ ಹೊರಟು ಹೋಯ್ತು ಆಕಾಂಕ್ಷ.”

ನಾನು – “ಮತ್ತೇನು ನೋಡೋದು. ನಡಿ ನಿಮ್ ಅಕ್ಕ ಜೊತೆ ಮಾತಾಡೇ ಬಿಡಣ. ಅಮರ ಪ್ರೇಮಿಗಳನ್ನ ಒಂದು ಮಾಡೋಣ” ಹೀಗೆ ಹೇಳ್ತಾ ಚಿತ್ರಾ ಪರಿಣಯದ ಪ್ಲಾನಿಂಗ್ ಶುರು ಮಾಡಿದೆವು.

ಕಾವ್ಯಶ್ರೀ

ದೊಡ್ಡಬಳ್ಳಾಪುರದ ಇವರು ಸಾಫ್ಟ್‌ವೇರ್ ಇಂಜಿನಿಯರ್

ಇದನ್ನೂ ಓದಿ /ಆ ಐಟಿ ಹುಡುಗಿ…
https://peepalmedia.com/that-it-girl/

Related Articles

ಇತ್ತೀಚಿನ ಸುದ್ದಿಗಳು