Wednesday, July 9, 2025

ಸತ್ಯ | ನ್ಯಾಯ |ಧರ್ಮ

ಹೈದರಾಬಾದ್-ಅರಸೀಕೆರೆ ನಡುವೆ ವಾರಕ್ಕೆ 4 ವಿಶೇಷ ರೈಲುಗಳನ್ನ ಆರಂಭಿಸಲು ಇಲಾಖೆ ನಿರ್ಧಾರ

ಅರಸೀಕೆರೆ : ಪ್ರಯಾಣಿಕರಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ದಕ್ಷಿಣ ರೈಲ್ವೆ (indian Railway) ಅನೇಕ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ. ಒಂದೇ ರೈಲಿಗೆ ಹೆಚ್ಚಿನ ಜನ ಕಾಯುವುದನ್ನ ಕಡಿಮೆ ಮಾಡಲು ವಿಶೇಷ ರೈಲುಗಳನ್ನ ಸಹ ಬಿಡುತ್ತಿದ್ದು, ಇದೀಗ ಸಿಕಂದರಾಬಾದ್ – ಅರಸೀಕೆರೆ (Sikhandarabad̲ Arasikere) ಮತ್ತು ಹೈದರಾಬಾದ್-ಅರಸೀಕೆರೆ (Hyderbad ̲ Arasikere) ನಡುವೆ ವಾರಕ್ಕೊಮ್ಮೆ ವಿಶೇಷ ರೈಲುಗಳನ್ನ ಆರಂಭಿಸಲು ಇಲಾಖೆ ನಿರ್ಧಾರ ಮಾಡಿದೆ.

 ರೈಲಿನ ವೇಳಾಪಟ್ಟಿ ಹೀಗಿದೆ
ರೈಲ್ವೆ ಇಲಾಖೆ ನೀಡಿರುವ ಹೇಳಿಕೆ ಪ್ರಕಾರ ಸಿಕಂದರಾಬಾದ್ – ಅರಸೀಕೆರೆಯ ವಿಶೇಷ ರೈಲು ಪ್ರತಿ ಭಾನುವಾರ ಸಂಜೆ 6:05ಕ್ಕೆ ಸಿಕಂದರಾಬಾದ್‌ನಿಂದ ಹೊರಡುತ್ತದೆ. ಮರುದಿನ ಮಧ್ಯಾಹ್ನ 12:45ಕ್ಕೆ ಅರಸೀಕೆರೆ ಬರಲಿದೆ. ಹಾಗೆಯೇ, ಅರಸೀಕೆರೆಯಿಂದ ಸಿಕಂದರಾಬಾದ್‌ಗೆ ವಾಪಾಸ್‌ ಹೋಗುವ ರೈಲು ಸೋಮವಾರ ಮಧ್ಯಾಹ್ನ 2:00 ಗಂಟೆಗೆ ಅರಸೀಕೆರೆಯಿಂದ ಹೊರಟು ಮರುದಿನ ಬೆಳಿಗ್ಗೆ 7:45ಕ್ಕೆ ಸಿಕಂದರಾಬಾದ್‌ಗೆ ಹೋಗುತ್ತದೆ.

ಹಾಗೆಯೇ, ಹೈದರಾಬಾದ್‌ ಅರಸೀಕೆರೆ ವಿಶೇಷ ರೈಲು ಸಹ ಪ್ರತಿ ಮಂಗಳವಾರ ರಾತ್ರಿ 7:20ಕ್ಕೆ ಹೈದರಾಬಾದ್‌ನಿಂದ ಹೊರಟು ಮರುದಿನ ಮಧ್ಯಾಹ್ನ 12:45ಕ್ಕೆ ಅರಸೀಕೆರೆ ತಲುಪುತ್ತದೆ. ಅದರಂತೆ ವಾಪಾಸ್‌ ಹೋಗುವ ರೈಲು ಪ್ರತಿ ಬುಧವಾರ ಮಧ್ಯಾಹ್ನ 2:00 ಗಂಟೆಗೆ ಅರಸೀಕೆರೆಯಿಂದ ಹೊರಟು,  ಮರುದಿನ ಬೆಳಗ್ಗೆ 7:50ಕ್ಕೆ ಹೈದರಾಬಾದ್ ತಲುಪಲಿದೆ ಎಂದು ಇಲಾಖೆ ತಿಳಿಸಿದೆ.

 ಅನೇಕ ಸ್ಥಳಗಳಲ್ಲಿ ನಿಲುಗಡೆ
ಈ 2 ವಿಶೇಷ ರೈಲುಗಳು ಪ್ರಯಾಣಿಕರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ವಿವಿಧ ಪ್ರದೇಶಗಳಲ್ಲಿ ನಿಲ್ಲುತ್ತದೆ. ಇದರಿಂದ ಅನೇಕ ಜನರಿಗೆ ಸಹಾಯವಾಗಲಿದ್ದು, ಉಳಿದ ಸಮಯದಲ್ಲಿ ಸಂಚರಿಸುವ ರೈಲುಗಳಿಗೆ ಜನ ತುಂಬುವುದು ಸಹ ಸ್ವಲ್ಪ ಕಡಿಮೆ ಆಗುತ್ತದೆ. ಇನ್ನು ಈ ವಿಶೇಷ ರೈಲಿನಲ್ಲಿ 2 AC ಟೂ ಟೈರ್, 6 AC ತ್ರೀ ಟೈರ್, 7 ಸ್ಲೀಪರ್ ಕ್ಲಾಸ್, ಸೆಕೆಂಡ್ ಕ್ಲಾಸ್ ಹೀಗೆ ಎಲ್ಲಾ ರೀತಿಯ ಬೋಗಿಗಳು ಇದ್ದು, ಯಾವುದೇ ಸಮಸ್ಯೆ ಇಲ್ಲದೇ ಪ್ರಯಾಣ ಮಾಡಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page