Monday, August 11, 2025

ಸತ್ಯ | ನ್ಯಾಯ |ಧರ್ಮ

ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ರಾಹುಲ್‌ ಗಾಂಧಿಯನ್ನು ಟಾರ್ಗೆಟ್‌ ಮಾಡಿದ ಚುನಾವಣಾ ಆಯೋಗ!

ಆಗಸ್ಟ್ 8, 2025ರಂದು, ಭಾರತದ ಚುನಾವಣಾ ಆಯೋಗ (ECI) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಒಂದು ಒತ್ತಾಯವನ್ನು ನೀಡಿತು. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ “ವ್ಯಾಪಕ ಮತದಾನ ಕಳ್ಳತನ” ಎಂದು ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಆರೋಪಗಳನ್ನು ಕಾನೂನಿನ ಪ್ರಕಾರ ಪ್ರಮಾಣದ ಮೂಲಕ ಸಲ್ಲಿಸಿ, ಅಥವಾ “ಸಾರ್ವಜನಿಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಿ,” ಎಂದು ಆಯೋಗವು ಅವರಿಗೆ ಸವಾಲು ಹಾಕಿತು.

ಆದರೆ ಇದು ಕೇವಲ ರಾಜಕೀಯ ವಾಗ್ವಾದವಲ್ಲ. ಇದು ಚುನಾವಣಾ ಆಯೋಗದ ಒಂದು ದಶಕದ ದಾಖಲಿತ ವೈಫಲ್ಯಗಳ ಫಲವಾಗಿದೆ.

ಮಹದೇವಪುರದಲ್ಲಿ, ಚುನಾವಣಾ ಆಯೋಗವು ವರ್ಷಗಳಿಂದ ತನ್ನದೇ ಆದ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಿದೆ, ಆದರೂ ಕ್ಷೇತ್ರದ ಮತದಾರರ ಪಟ್ಟಿಯು ಅಸಾಮಾನ್ಯ ಮತ್ತು ಅಸಂಭವ ದರದಲ್ಲಿ ಬೆಳೆಯುತ್ತಿತ್ತು. ಆಯೋಗದ ದತ್ತಾಂಶ, ಸುದ್ದಿ ವರದಿಗಳು ಮತ್ತು ಹಿಂದಿನ ಹಗರಣಗಳು, ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸುವ ಏಕೈಕ ಜವಾಬ್ದಾರಿಯನ್ನು ಹೊಂದಿರುವ ಸಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು, ಬಿಕ್ಕಟ್ಟನ್ನು ಬೆಳೆಯಲು ಅವಕಾಶ ನೀಡಿತ್ತು ಮತ್ತು ಈಗ ಅದನ್ನು ಬಹಿರಂಗವಾಗಿ ನಿರಾಕರಿಸುತ್ತಿದೆ.

ಮಹದೇವಪುರದ ಕಥೆ ಚುನಾವಣಾ ಆಯೋಗದ ಸ್ವಂತ ಕೈಪಿಡಿಯಿಂದ ಆರಂಭವಾಗುತ್ತದೆ. ಈ ಕೈಪಿಡಿ ಒಂದು ಪರಿಷ್ಕರಣೆಯ ಸಂದರ್ಭದಲ್ಲಿ ಮತದಾರರ ಸಂಖ್ಯೆಯ ಶೇ.4ಕ್ಕಿಂತ ಹೆಚ್ಚು ನಿವ್ವಳ ಸೇರ್ಪಡೆಯಾದರೆ “ಹೆಚ್ಚುವರಿ ಹಂತಗಳ ದೃಢೀಕರಣವನ್ನು” ಮಾಡಬೇಕೆಂದು ಹೇಳುತ್ತದೆ. ಈ ಶೇ.4 ರ ಗಡಿಯು ಸಿಂಗಲ್‌ ರಿವಿಷನ್‌ ಸೈಕಲ್‌ಗೆ ಆಯೋಗದ ಎಚ್ಚರಿಕೆಯ ಗಂಟೆಯಾಗಿದೆ.

ಮಹದೇವಪುರದಲ್ಲಿ, ದತ್ತಾಂಶವು ಈ ಎಚ್ಚರಿಕೆಯ ಗಂಟೆ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಬಡಿಯುತ್ತಿತ್ತು ಎಂಬುದನ್ನು ತೋರಿಸುತ್ತದೆ. ಅಧಿಕೃತ ಮತದಾರ ದತ್ತಾಂಶವು ತೀವ್ರವಾದ ಬೆಳವಣಿಗೆಯನ್ನು ಬಹಿರಂಗಪಡಿಸುತ್ತದೆ. ಆಯೋಗವು ಸ್ವಂತ ಮಾನದಂಡದ ಅಡಿಯಲ್ಲಿ ನಿರಂತರ ವಿಶೇಷ ಪರಿಶೀಲನೆಯನ್ನು ಮಾಡಬೇಕಿತ್ತು.

ವಿವರಣೆ:

  • ಪ್ರತಿ ಐದು ವರ್ಷಗಳ ಗುಂಪಿನಲ್ಲಿ, ಸರಾಸರಿ ವಾರ್ಷಿಕ ಬೆಳವಣಿಗೆ ದರವು ಶೇ.5.5 ರಿಂದ ಶೇ.6.8 ರವರೆಗೆ ಇತ್ತು, ಇದರಿಂದ ಆಯೋಗದ ಶೇ.4 ರ ಗಡಿಯನ್ನು ಹಲವಾರು ಬಾರಿ ಉಲ್ಲಂಘಿಸಲಾಗಿದೆ ಎಂಬುದು ಖಚಿತವಾಗಿದೆ.
  • ಒಂದು ವರ್ಷದಲ್ಲಿ, ಮತದಾರರ ಸಂಖ್ಯೆ ಶೇ.8.54 ರಷ್ಟು ಏರಿಕೆಯಾಗಿದೆ. 2023 ರ ರಾಜ್ಯ ಚುನಾವಣೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಯ ನಡುವೆ, ಮತದಾರರ ಸಂಖ್ಯೆ ಶೇ.8.54 ರಷ್ಟು ಗಣನೀಯವಾಗಿ ಬೆಳೆಯಿತು. ಈ ಸಿಂಗಲ್‌ ರಿವಿಷನ್‌ ಸೈಕಲ್‌ ಆಯೋಗದ ಶೇ.4 ರ ಕೆಂಪು ಗೆರೆಯನ್ನು ಎರಡು ಪಟ್ಟು ಮೀರಿತು. ಆಯೋಗ ಸ್ವಯಂಚಾಲಿತ ಪರಿಶೀಲನೆಯನ್ನು ಆರಂಭಿಸಬೇಕಿತ್ತು.

ಇದು ನಗರವ್ಯಾಪಿ ಪ್ರವೃತ್ತಿಯಾಗಿರಲಿಲ್ಲ. 2008 ರಿಂದ 2024 ರವರೆಗೆ ಮಹದೇವಪುರದ ಶೇ.140 ರ ಬೆಳವಣಿಗೆಯು, ಅದೇ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಇತರ ಏಳು ವಿಧಾನಸಭಾ ಭಾಗಗಳ ಬೆಳವಣಿಗೆಯನ್ನು ಕುಗ್ಗಿಸಿತು. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಂತೆ, ಎರಡನೇ ವೇಗವಾಗಿ ಬೆಳೆಯುತ್ತಿರುವ ಭಾಗವಾದ ಸರ್ವಜ್ಞನಗರವು ಇದೇ ಅವಧಿಯಲ್ಲಿ ಕೇವಲ ಶೇ.26.5 ರಷ್ಟು ಬೆಳೆಯಿತು. ಉಳಿದ ಆರು ಭಾಗಗಳ ಬೆಳವಣಿಗೆ ಇದಕ್ಕಿಂತಲೂ ಕಡಿಮೆಯಾಗಿತ್ತು.

ಮಹದೇವಪುರದಲ್ಲಿ ಐಟಿ ಕಾರಿಡಾರ್‌ನಿಂದಾಗಿ ರಿಯಲ್ ಎಸ್ಟೇಟ್ ಮತ್ತು ಜನಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂಬುದು ನಿರಾಕರಿಸಲಾಗದ ಸತ್ಯ. ಆದರೆ, ಇಂತಹ ಜನಸಂಖ್ಯಾಶಾಸ್ತ್ರೀಯ ಬದಲಾವಣೆಗಳನ್ನು ನಿರ್ವಹಿಸಲು ಚುನಾವಣಾ ಆಯೋಗದ ನಿಯಮಗಳನ್ನು ರೂಪಿಸಲಾಗಿದೆ. ಅಸಾಧಾರಣ ಬೆಳವಣಿಗೆಯು ಅಧಿಕಾರಿಗಳನ್ನು ತಮ್ಮ ಕರ್ತವ್ಯ ಮಾಡುವುದರಿಂದ ವಿನಾಯಿತಿ ನೀಡುವುದಿಲ್ಲ; ಇದಕ್ಕೆ ವಿರುದ್ಧವಾಗಿ, ಇದು “additional layers of cross-verification” ಮಾಡಬೇಕೆಂದು ಒತ್ತಾಯಿಸುತ್ತದೆ, ಆದರೆ ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ತೋರುತ್ತದೆ.

ದತ್ತಾಂಶವು ಎರಡು ವಿಷಯಗಳನ್ನು ಸಾಬೀತುಪಡಿಸುತ್ತದೆ. ಮೊದಲನೆಯದಾಗಿ, ಮಹದೇವಪುರವು ಒಂದು ತೀವ್ರವಾದ ವಿಚಲನವಾಗಿತ್ತು. ಎರಡನೆಯದಾಗಿ, ಚುನಾವಣಾ ಆಯೋಗವು ತನ್ನದೇ ಆದ ನಿಯಮಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ತನಿಖೆ ನಡೆಸಬೇಕಿತ್ತು, ಆದರೂ ಅದು ಮತದಾರರ ಪಟ್ಟಿಯನ್ನು ಹತ್ತಿರದಲ್ಲೇ ಇದ್ದ ಮುಂದಿನ ದೊಡ್ಡ ಕ್ಷೇತ್ರಕ್ಕಿಂತ ಎರಡು ಪಟ್ಟು ದೊಡ್ಡದಾಗಲು ಅವಕಾಶ ನೀಡಿತು.

ಸಾರ್ವಜನಿಕ ಎಚ್ಚರಿಕೆಗಳು ಮತ್ತು ದಾಖಲಿತ ಹಗರಣಗಳು

ಎಚ್ಚರಿಕೆಗಳು ಕೇವಲ ದತ್ತಾಂಶದಲ್ಲಿ ಮಾತ್ರ ಇರಲಿಲ್ಲ. ಬೆಂಗಳೂರಿನ ನಾಗರಿಕರು ಮತ್ತು ಕಾರ್ಯಕರ್ತರು ವರ್ಷಗಳಿಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು, ಆದರೆ ಪ್ರತಿಕ್ರಿಯೆ ಮಾತ್ರ ನೀರಸವಾಗಿತ್ತು.

2017 ರಲ್ಲಿ, ವೈಟ್‌ಫೀಲ್ಡ್‌ನಲ್ಲಿ “ಮಿಲಿಯನ್ ವೋಟರ್ಸ್ ರೈಸಿಂಗ್” ಎಂಬ ನಾಗರಿಕರ ಸಂಘಟನೆಯೊಂದು ಆಳವಾದ ಸಮಸ್ಯೆಗಳನ್ನು ಕಂಡುಕೊಂಡಿತು. ದಿ ಹಿಂದೂ ವರದಿಯಂತೆ, ಶೇ.66 ರಷ್ಟು ಮತದಾರರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿತ್ತು. ಸಾರ್ವಜನಿಕರು ಆಕ್ರೋಶಿತರಾದರು, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಫಾರ್ಮ್‌ಗಳ ಮರುಪರಿಶೀಲನೆಗೆ ಆದೇಶಿಸಲು ಒತ್ತಾಯಿಸಿದರು. ಆದರೂ ಇದರಿಂದ ತೃಪ್ತರಾಗದ ನಾಗರಿಕರು ಈ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಬಾಗಿಲಿಗೆ ತಂದರು.

ನಂತರ, 2022 ರಲ್ಲಿ, ಚಿಲುಮೆ ವಿವಾದವು ಮತದಾರರ ಪಟ್ಟಿಯ ದುರ್ಬಳಕೆಯ ಒಂದು ಭಯಾನಕತೆಯನ್ನು ನಮ್ಮ ಮುಂದೆ ಇಟ್ಟಿತು. ದಿ ನ್ಯೂಸ್‌ಮಿನಿಟ್ ಮತ್ತು ಪ್ರತಿಧ್ವನಿ ನಡೆಸಿದ ತನಿಖಾ ವರದಿಯಲ್ಲಿ, ನಗರರಾಡಳಿತದಿಂದ ‘ಮತದಾರರ ಜಾಗೃತಿಯನ್ನು ಹೆಚ್ಚಿಸಲು’ ಅಧಿಕಾರ ಪಡೆದ ಚಿಲುಮೆ ಟ್ರಸ್ಟ್ ಎಂಬ ಎನ್‌ಜಿಒ ಮೇಲೆ, ಮತದಾರರ ವೈಯಕ್ತಿಕ ದತ್ತಾಂಶವನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ ಆರೋಪ ಮಾಡಲಾಗಿತ್ತು. ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವು, ಈ ಸಂಸ್ಥೆಯು ಈ ದತ್ತಾಂಶವನ್ನು ರಾಜಕೀಯ ಕ್ಲೈಂಟ್‌ಗಳಿಗಾಗಿ ಮತದಾರರನ್ನು ಪಟ್ಟಿಯಿಂದ ಅಳಿಸಲು ಬಳಸಿದೆ ಎಂದು ಆರೋಪಿಸಿತು.

ಸರ್ಕಾರಿ ತನಿಖೆಯು ನಂತರ ಚಿಲುಮೆ “ಕಾನೂನುಬಾಹಿರವಾಗಿ” ಮತದಾರರ ದತ್ತಾಂಶವನ್ನು ಸಂಗ್ರಹಿಸಿ ಖಾಸಗಿ ಸರ್ವರ್‌ಗಳಲ್ಲಿ ಸಂಗ್ರಹಿಸಿತು ಎಂದು ಒಪ್ಪಿಕೊಂಡಿತು, ಆದರೂ “ದುರ್ಬಳಕೆಯಾಗಿದೆ” ಎಂದು ತನಿಖೆ ಕಂಡುಹಿಡಿಯಲಿಲ್ಲ. ಮತದಾರರ ಜಾಗೃತಿಯ ಹೆಸರಿನಲ್ಲಿ ಅಧಿಕೃತ ಪ್ರಕ್ರಿಯೆಯನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ ಉಲ್ಲಂಘಿಸಲಾಗಿತ್ತು. ಮಹದೇವಪುರವು ಚಿಲುಮೆ ಸಂಸ್ಥೆ ಸಕ್ರಿಯವಾಗಿ ಕೆಲಸ ಮಾಡಿದ್ದ ಮೂರು ಕ್ಷೇತ್ರಗಳಲ್ಲಿ ಒಂದಾಗಿತ್ತು.

ಪ್ರಮಾಣ ಎಂಬ ವಿಡಂಬನೆ

ಇದು ಆಗಸ್ಟ್ 7, 2025 ರಂದು ರಾಹುಲ್ ಗಾಂಧಿಯವರು ನಡೆಸಿದ ಪತ್ರಿಕಾಗೋಷ್ಠಿಯ ಹಿನ್ನೆಲೆಯಾಗಿತ್ತು. ಅವರ 1,00,250 “ಕದ್ದ ಮತಗಳ” ಆರೋಪಕ್ಕೆ ವರ್ಷಗಳಿಂದ ಏರಿಳಿಯುತ್ತಿರುವ ಮತದಾರರ ಸಂಖ್ಯೆಗಳು, ನಿರ್ಲಕ್ಷಿತ ದೂರುಗಳು ಮತ್ತು ಸಾರ್ವಜನಿಕ ಹಗರಣಗಳು ಆಧಾರಿತವಾಗಿದ್ದವು.

ಚುನಾವಣಾ ಆಯೋಗದ ಪ್ರತಿಕ್ರಿಯೆ, ಆರೋಪವನ್ನು ಅಧಿಕೃತವಾಗಿ ಸಲ್ಲಿಸಲು ಒತ್ತಾಯಿಸುವುದು ವಿಡಂಬನೆಯಾಗಿದೆ. ವಿವರವಾದ ಆರೋಪಗಳನ್ನು ತನಿಖೆ ಮಾಡುವ ಬದಲು, ಆಯೋಗವು ಆಕ್ರಮಣಕಾರಿಯಾಗಿ ನಡೆದುಕೊಂಡಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕಾನೂನು ತಜ್ಞ ಅಭಿಷೇಕ್ ಮನು ಸಿಂಗ್ವಿ ದಿ ಹಿಂದೂಗೆ ತಿಳಿಸಿದಂತೆ, ಆಯೋಗವು ತಕ್ಷಣವೇ “ಸಂದೇಶವಾಹಕನನ್ನು ಗುರಿಯಾಗಿಸಿ ಸಂದೇಶವನ್ನು ನಿರ್ಲಕ್ಷಿಸಿತು – shooting the messenger and ignoring the message.”

ಆರೋಪವನ್ನು ಪ್ರಮಾಣೀಕರಿಸಲು ಒತ್ತಾಯಿಸುವುದು ಒಂದು ತಂತ್ರವಾಗಿದೆ. ಇದು ಆಯೋಗದ ಜವಾಬ್ದಾರಿಯಾದ ವ್ಯವಸ್ಥಿತ ಸಮಸ್ಯೆಯನ್ನು, ರಾಜಕಾರಣಿಯ ವೈಯಕ್ತಿಕ ವಿಶ್ವಾಸಾರ್ಹತೆಯ ಸಮಸ್ಯೆಯಾಗಿ ಬದಲಾಯಿಸುತ್ತದೆ. ಸಿಂಗ್ವಿ ಕಾನೂನು ದೋಷವನ್ನು ಎತ್ತಿ ತೋರಿಸಿದರು, ಈ ನಿಯಮವನ್ನು “ಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ” ಎಂದು ಕರೆದರು. ಪ್ರಮಾಣವು ನಿರ್ದಿಷ್ಟ, ವೈಯಕ್ತಿಕ ಚುನಾವಣಾ ವಿವಾದಗಳಿಗಾಗಿ ರೂಪಿಸಲಾಗಿದೆ ಮತ್ತು “ಒಂದು ಸಂಪೂರ್ಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಬೃಹತ್‌ ವಂಚನೆಯ ಆರೋಪಕ್ಕೆ ಯಾವುದೇ ಸಂಬಂಧವಿಲ್ಲ” ಎಂದು ಅವರು ವಾದಿಸಿದರು.

ಚುನಾವಣಾ ಆಯೋಗವು ವಿರೋಧ ಪಕ್ಷದ ನಾಯಕನ ಮೇಲೆ ಒಂದು ಲಕ್ಷಕ್ಕಿಂತ ಹೆಚ್ಚು ವೈಯಕ್ತಿಕ ಪ್ರಕರಣಗಳನ್ನು ಸ್ವತಃ ದೃಢೀಕರಿಸುವ ಅಸಾಧ್ಯ ಕಾನೂನು ಭಾರವನ್ನು ಹೇರಲು ಹೊರಟಿದೆ. ಆಯೋಗ ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡದೆ ಇಷ್ಟು ದೊಡ್ಡದಾಗಿ ಈ ಸಂಖ್ಯೆ ಬೆಳೆದಿದೆ. ಸಿಂಗ್ವಿ ಈ ಪರಿಸ್ಥಿತಿಯನ್ನು ಒಬ್ಬ ನಾಗರಿಕನು ಕಳ್ಳತನವನ್ನು ವರದಿ ಮಾಡಿದಾಗ, ಪೊಲೀಸರು ಕಳ್ಳರನ್ನು ನಿರ್ಲಕ್ಷಿಸಿ, ದೂರುದಾರನಿಗೆ ಪ್ರಮಾಣದ ಮೇಲೆ ಹೇಳಿಕೆಯನ್ನು ನೀಡಲು ಒತ್ತಾಯಿಸುವಂತೆ ಆಗಿದೆ ಎಂದು ಹೋಲಿಸಿದರು.

ಕೇಂದ್ರ ವಿಷಯ

ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸಲು ಸಂವಿಧಾನದಿಂದ ಬದ್ಧರಾದವರು ಚುನಾವಣಾ ಆಯೋಗದ ಅಧಿಕಾರಿಗಳೇ. ಮಹದೇವಪುರದಲ್ಲಿ, ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ತಮ್ಮದೇ ಆದ ದತ್ತಾಂಶ ಮತ್ತು ನಿಯಮಗಳ ಮೇಲೆ ಕಾರ್ಯನಿರ್ವಹಿಸಲು ಅವರು ವಿಫಲರಾದರು ಎಂಬುದಕ್ಕೆ ಸಾಕ್ಷಿಯಿದೆ. ಈಗ, ಅದೇ ಸಂಸ್ಥೆಯು ಒಂದು ಬೇರೆ ನಿಯಮವನ್ನು ಆಯುಧವಾಗಿ ಬಳಸಿಕೊಂಡು, ಸಮಸ್ಯೆಯನ್ನು ಮುನ್ನಲೆಗೆ ತಂದ ವ್ಯಕ್ತಿಯನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ. ಸಿಂಗ್ವಿ ಕೇಳಿದಂತೆ, “ಸಂವಿಧಾನಿಕ ಕಾವಲುಗಾರರು ತಮ್ಮ ಜವಾಬ್ದಾರಿಗಳನ್ನು ತ್ಯಜಿಸಿದಾಗ… ವಿರೋಧ ಪಕ್ಷವು ಕಾವಲುಗಾರರನ್ನು ಕಾಯದಿರೆ ಬೇರೆ ಯಾರುಕಾಯುತ್ತಾರೆ – When constitutional custodians… abdicate their responsibilities… Who will guard the guardians if not the opposition?”

ಮಹದೇವಪುರದ ಕಥೆಯು ಈಗ ಒಂದು ಕ್ಷೇತ್ರಕ್ಕೆ ಅಥವಾ ಒಬ್ಬ ರಾಜಕಾರಣಿಯ ಮೇಲಿನ ಆರೋಪಕ್ಕೆ ಸೀಮಿತವಾಗಿಲ್ಲ. ಇದು ಸಾಂಸ್ಥಿಕ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ, ಇದು ಚುನಾವಣಾ ಆಯೋಗವು ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆಯೇ ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page