Thursday, July 31, 2025

ಸತ್ಯ | ನ್ಯಾಯ |ಧರ್ಮ

ಮನುಕುಲದ ಬೇಲಿ

ಏಕೋ ಗೊತ್ತಿಲ್ಲ

ಅಂತರಾಳದ  ತಳಮಳ,

ಕಾಣುವ ಗೋಡೆಗೆ

ನೆರಳ ಭಯ..

ಜಾತಿ ಒಗ್ಗಟ್ಟುಗಳ ಪಕ್ಷಕೆ

ಮಿಕ’  ಹೌ  ಹಾರಿ ಸಾಯುತಿದೆ.

ಗುಡಿಸುವ ಸ್ವಚ್ಚ ಹಾದಿಗೆ

ಊರ ಬಿಡುವ ತವಕ…

ನೋಡಿದರೆ ಚರ್ಚು, ಮಸೀದಿ,

ಮಂದಿರಗಳೆಲ್ಲವು

ಬಿರುಕು ಬಿಟ್ಟ ಒಣ ಗೋಡೆಗಳಾಗಿವೆ….

ವಂದೇ ಮಾತರಂ ನೆಲದಿ

ರುಂಡ ಚಂಡಾಡುತಿವೆ,

ಇಕ್ಕಟ್ಟ ಉಲ್ಬಣದ ಕಾವು

ಮೇಲೆದ್ದು ಜಿಗಿಯುತಿದೆ…

ಭರತ ದೇವಿ ರೋಧಿಸಿ

ಅರಚುತ್ತಿದ್ದಾಳೆ…

ಬೆಳಕ ಬೀರುವ ಹೊತ್ತಿಗೆಗಳು

ಸೀಮೆ ಸುಣ್ಣದಿ ಕುದಿಯುತಿವೆ.

ಬಾಯಿ ಮಾತಿನ ಮೇಜ 

ಮೇಲಿನ ಪುಂಡರ ಗೋಷ್ಠಿಗೆ

ಕಲಾಮು ಹವೆಯಿಲ್ಲದ

ಟೈರು ಗಾಲಿಯಲಿ

ಸೋತಿದೆ…

ಒಂದೊಂದು ಮನೆಯ ಬಾಗಿಲಿಗೂ

ಒಂದೊಂದು ಜಾತಿಯ

ಕೈ ಬಡಿತ

ಆಶಾಂತಿಯ ಗೈದಿದೆ…

ಇನ್ನೆಲ್ಲಿ ಮನುಕುಲದ 

ಒಗ್ಗಟ್ಟು ಬೇಲಿ?.

ಕಲ್ಮಶವಿಲ್ಲದ ಸುಮವೊಂದು

ತಪಗೈಯ್ಯುತಿದೆ

ಸಮಾನತೆಯ ಬೀಜ 

ಮೊಳಗಲೆಂದು….

ಡಾ. ಕೃಷ್ಣವೇಣಿ ಆರ್‌ ಗೌಡ, ವಿಜಯನಗರ

Related Articles

ಇತ್ತೀಚಿನ ಸುದ್ದಿಗಳು

You cannot copy content of this page