“ಕಡೆಯ ಮಳೆ”

ಮಳೆಯ ಕುರಿತಾದ ಹಳ್ಳಿಯ ಹಿರಿಯರ ಆತಂಕದ ಮಾತುಗಳ ಚಹರೆ.. ಕವಿತೆಯ ರೂಪದಲ್ಲಿ.. ಗೀತಾ ನಾರಾಯಣ್ ಅವರ ಬರಹದಲ್ಲಿ

ಗವಾಕ್ಷೆ ಮುಚ್ಕಂಬರ್ರಿ ಎಲ್ಲಾವ್ನು; ಮಾಡ್ವಾಗೆಯ್ತೆ!!
ಅತ್ತುದ್ಮಳೆ ಎತ್ಲುದಾದ್ರು ಬರುತ್ತೆ, ಉಬ್ಬೆ ಮಳೆ ಉಬ್ಬುಬ್ಕಂಡೊಯ್ಯದು ಮದ್ಲೆಲ್ಲ……
ಮನೆತುಂಬ ಮಳೆಮಾತು….
ದೂರದ ಅರಸ ಮಾತ್ರ ಝುಂ ಅಂದಿಲ್ಲ ಹದವೂ ಇಲ್ಲ ಬೆಂದೂ ಇಲ್ಲ
ಬೆಚ್ಚಗೆ ಅರಮನೆಯ ಕಿಟಕಿ ಬಾಗಿಲು ಬದ್ರ ಮಾಡಿಕೊಂಡು ಕುಂತೌವ್ನೆ
ಇವನೇನು ಪಾತಾಳಲೋಕದ ದೊರೆಯೇ? ಒಲ್ಮಾಳೆಲ್ಲ ಒಣ್ಗಿ ಬಿತ್ತಿದ್ ಕಾಳು ಕಡ್ಡಿ ಸಿಗ್ರಕನ ಒಂದನಿ ಇಲ್ಲ
ಜನೊಂದ್ ಜನ್ವೆಲ್ಲ ಅಂಗ್ಲಾಸಿರು ಮಳ್ರಾಯ ನಮ್ಮಪ್ಪ ಕಣ್ಬಿಟ್ಟಿಲ್ಲ….
ಬಿತ್ಕಂಡ್ಬಂದರು ರೆಪ್ಪೆ ಮ್ಯಾಲ್ ರೆಪ್ಪೆ ಹಾಕಿಲ್ಲ….
ಬೆಂಗಾಡಾತು ಭೂಮೆಲ್ಲ
ಆ ನನ್ಮಕ್ಳಿಗೆಂಗನ ಕೂಳ್ ಸೇರುತ್ತೋ ಕಾಣೆ?? ಜನ್ಗುಳ್ ಬಂಗ ಬಡ್ತನ ಕೇಳ್ದಂಗೆ ಮೆರಿತಾವ್ರಲ್ಲ……
ಈ ತಡ ಓಟ್ಕೇಳಕ್ ಬರ್ಲಿ
ಹಳೇ ಪರ್ಕೆ ತಾಂಡು ನೆತ್ತಿ ತಿವುದ್ರೆ ಅರಾಸಾಗುತ್ತೆ….
ಅನ್ನೋಡು ಊರೂರಾಗ್ಳುಡುಗ್ರೆಲ್ಲ ಅನ್ನ ನೀರು ಬಿಟ್ಟು ಮೋಸ್ಗಾರುನ್ನ ಉಗೀತಾವ್ರಂತೆ ಬಡುಗ್ಲು ಕಡೆ ಪ್ಯಾಟೆಗೆ?!
ಏ ತಗಿ ಏಟುಗುದ್ರು ತಾನೇ ಬುದ್ಬಂದತೆ ಓಟುಬಿಟ್ಟರ್ಗೆ….
ಎಣ್ಣುಡುಗ್ರುನ್ನೆಲ್ಲ ಜೈಲಕಾಕೆವ್ರಂತಲ್ಲ; ಎಂಗಾನ ಕೈಬಂತಮ್ಮ ಬಾಳ್ ಬದ್ಕ ಅರೇದ್ ಮಕ್ಳುನ್ನ ಮುಟ್ಟಕೆ?!!
ಥೂ ಬಾಂಚಾದ್ ನನ್ಮಕ್ಳು
ಹೆಂಡ್ರು ಮಕ್ಳು ಇದ್ರೆ ಗ್ಯಾನ್ವಾಗದು….ಇದ್ರು ತಾನೇ ಏನ್ಬಂತು ತಗಾ!!!! ಅವ್ರು ಇವ್ರ್ದು ಬಾಸಾಕ್ಕೆಂಡು ತಿಂದ್ ತೇಗ ಜನ್ಕೆ ಮಳೋದ್ರೆನು? ಬೆಳೋದ್ರೇನು ಮಕ್ಳು ಮರಿ ಬೀದಿಗ್ಬಿದ್ರೇನು?
ಇಮಾನ್ದಗೆ ಓಡಾಡ್ಕಂಡು ಬೆಳ್ಳುಗ್ಬಟ್ಟೆ ಇಕ್ಕೆಂಡ್ರೇನ್ಬಂತು ಭಾಗ್ಯ?
ಊರೂರೆ ಉಗುದ್ರು ಗೆದ್ನನ್ಮಕ್ಳಿಗೆ ಬುದ್ಬರಲ್ಲ….
ಅಳ್ಳಳ್ಳೆಗು ಎಂಡ ಅಂಚಕ್ಬತ್ತರಲ್ಲ ಅವಗ ಈ ನೆಕ್ಜೋರ್ಲುಗುಳು ಕಳ್ಬಿರ್ಯಂಗ್ ಕುಡ್ದು ಬೀದೆಗ್ಬೀಳ್ತವೆ; ಈಗ್ನೋಡು ಓಟ್ಗುಳ್ನೆ ಕಿತ್ತೌರಂತೆ?ಇವ್ರ್ಮಕ್ಕೆ ಮಣ್ಣಾಕ….
ಮ್ಯಾಲೊಬ್ಬಿದ್ರೆ ಹಾಳಾಗ್ಬೆಂಕ್ಬಿದ್ದು ಹೋಗ್ಲಿ ಇಂತರೆಲ್ಲನ…….
ಸದ್ದಿಕೆ ಇಂಗಾರನ ಕಣ್ಬಿಡ್ತು
ಈತಡ ದೋಣಿಬಾವೆಗೊಂದನಿನನ ನೀರ್ಬಿದ್ದಿಲ್ಲ…
ಕೆರೆಕುಂಟೆನನ ತುಂಬಿರೆ ದನಕರನನ ಬದಿಕ್ಕೆಮ್ತವೆ……
ಕಡೆಮಳ್ಗುಳನ ಬರ್ಲಪ್ಪ ಬಗ್ವಂತ……ಇಂಗಾರ್ನಗೆ ಬ್ಯಾಸಿಗ್ನಗಾದಂಗಾತು…..
ಎತ್ತೆತ್ಲೋ ಮಳೊಯ್ತಾಯ್ತಂತೆ!
ದೇಶ ತಣ್ಗಾಗ್ಲಿ..

Related Articles

ಇತ್ತೀಚಿನ ಸುದ್ದಿಗಳು