Monday, December 22, 2025

ಸತ್ಯ | ನ್ಯಾಯ |ಧರ್ಮ

ಎಲೆಕ್ಟರೋಲ್‌ ಬಾಂಡ್‌ ನಿಂತರೂ ನಿಲ್ಲದ ಹಣ ಮಳೆ: ಬಿಜೆಪಿ ಈಗ ದೇಶದ ಅತ್ಯಂತ ಶ್ರೀಮಂತ ಪಕ್ಷ

ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಹೊರತಾಗಿಯೂ, ವಿವಿಧ ಎಲೆಕ್ಟೋರಲ್ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಲಭಿಸುತ್ತಿರುವ ದೇಣಿಗೆಗಳು ಏನೇನೂ ಕಡಿಮೆಯಾಗಿಲ್ಲ.

ದೇಣಿಗೆ ಮೊತ್ತ ಮೂರು ಪಟ್ಟು ಹೆಚ್ಚಾಗಿ 2024-25ರಲ್ಲಿ ರೂ. 3,811 ಕೋಟಿಗೆ ತಲುಪಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಅತ್ಯಧಿಕವಾಗಿ ರೂ. 3,112 ಕೋಟಿ ದೇಣಿಗೆ ಲಭಿಸಿದೆ. ಒಂಬತ್ತು ಎಲೆಕ್ಟೋರಲ್ ಟ್ರಸ್ಟ್‌ಗಳು ನೀಡಿದ ಒಟ್ಟು ದೇಣಿಗೆಗಳಲ್ಲಿ ಇದು ಐದನೇ ನಾಲ್ಕು ಭಾಗಕ್ಕಿಂತಲೂ (ಶೇ. 82) ಹೆಚ್ಚು. ವಿವಿಧ ಟ್ರಸ್ಟ್‌ಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಗಳ ಪ್ರಕಾರ, ಕಾಂಗ್ರೆಸ್‌ ಪಕ್ಷಕ್ಕೆ ಲಭಿಸಿದ ದೇಣಿಗೆ ಕೇವಲ ರೂ. 299 ಕೋಟಿ ಮಾತ್ರ.

ಒಟ್ಟು ದೇಣಿಗೆಗಳಲ್ಲಿ ಇದು ಕೇವಲ ಶೇ. 8 ರಷ್ಟು ಮಾತ್ರ. ಉಳಿದ ರೂ. 400 ಕೋಟಿಗಳನ್ನು (ಶೇ. 10) ಇತರ ಪಕ್ಷಗಳು ಪಡೆದಿವೆ. 2023-24ರಲ್ಲಿ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಲಭಿಸಿದ್ದ ದೇಣಿಗೆ ರೂ. 1,218 ಕೋಟಿಗಳಷ್ಟಿತ್ತು. ಅದು ಆ ಮರು ವರ್ಷಕ್ಕೇ ಮೂರು ಪಟ್ಟು ಹೆಚ್ಚಾಗಿದೆ.

ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಗಳಲ್ಲಿ ಹೆಚ್ಚಿನ ಪಾಲು ಎಲೆಕ್ಟೋರಲ್ ಟ್ರಸ್ಟ್‌ಗಳ ಮೂಲಕವೇ ತಲುಪುತ್ತದೆ. ಬಿಜೆಪಿಗೆ ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡಿರುವುದು ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್. ಇದರಿಂದ ಬಿಜೆಪಿಗೆ ರೂ. 2,668 ಕೋಟಿ ಲಭಿಸಿದೆ. ಇದೇ ಟ್ರಸ್ಟ್‌ನಿಂದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಪ್ ಮತ್ತು ತೆಲುಗು ದೇಶಂನಂತಹ ಪಕ್ಷಗಳಿಗೆ ಅಲ್ಪ ಮೊತ್ತದ ದೇಣಿಗೆಗಳು ಲಭಿಸಿವೆ. ಪ್ರೋಗ್ರೆಸಿವ್ ಎಲೆಕ್ಟೋರಲ್ ಟ್ರಸ್ಟ್ ಸುಮಾರು ರೂ. 915 ಕೋಟಿ ದೇಣಿಗೆ ನೀಡಿದ್ದು, ಇದರಲ್ಲಿಯೂ ಶೇ. 81 ರಷ್ಟು ಪಾಲು ಬಿಜೆಪಿಯದ್ದೇ ಆಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page