Monday, July 28, 2025

ಸತ್ಯ | ನ್ಯಾಯ |ಧರ್ಮ

ಡಾಲರ್ ಎದುರು ಸರ್ವಕಾಲಿಕ ಕುಸಿತ ಕಂಡ ರೂಪಾಯಿ!

ದಿನದಿಂದ ದಿನ ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿಯುತ್ತಲೇ ಇದೆ. ಡಾಲರ್‌ ಎದುರು ರೂಪಾಯಿ 82.6825ರೂ ತಲುಪಿದ್ದು, ಸಾರ್ವಕಾಲಿಕ ಕುಸಿತವನ್ನು ದಾಖಲಿಸುತ್ತಿದೆ.

ರುಪಾಯಿ ಅಪಮೌಲ್ಯ ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಪ್ರತಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ 82.30 ರು ದಾಟಿತ್ತು, ಇಂದು ಇನ್ನಷ್ಟು ಕುಸಿತ ಕಾಣುತ್ತಿದೆ.

ಇಂದು ಬೆಳಗಿನ ವಹಿವಾಟಿನಲ್ಲಿ BSE ಸೆನ್ಸೆಕ್ಸ್ 650 ಪಾಯಿಂಟ್‌ಗಳು ಕುಸಿದಿದೆ. ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 50 200ಕ್ಕೆ ಕುಸಿದಿದೆ. ಈ ಮೂಲಕ ಟೆಕ್ ಮಹೀಂದ್ರಾ, ಇನ್ಫೋಸಿಸ್ ಮತ್ತು ಟಿಸಿಎಸ್ ಷೇರಿ‌ನಲ್ಲಿ ಭಾರಿ ನಷ್ಟು ಅನುಭವಿಸಿದೆ.

ದೇಶದಲ್ಲಿ ಹಣದುಬ್ಬರ ವ್ಯಾಪಿಸಿದ್ದು, ರೂಪಾಯಿ ಮೌಲ್ಯ ಮತ್ತಷ್ಟು ಕುಸಿದರೆ ದೇಶ ಆರ್ಥಿಕವಾಗಿ ತತ್ತರಿಸುವ ದಿನಗಳ ಸಮೀಪಸಬಹುದು ಎನ್ನಲಾಗಿದೆ.

ಇದನ್ನೂ ನೋಡಿ: ರಶ್ಮಿಕಾ ಮಂದಣ್ಣ ಅವರಂತೆಯೇ ಇರುವ ಮತ್ತೊಬ್ಬ ನಟಿ
ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಆದ ಚಾಪನ್ನ ಮೂಡಿಸುತ್ತಿರುವ ಈ ನಟಿ ಯಾರು?
ತಿಳಿಯಲು ಈ ಲಿಂಕ್ ಒತ್ತಿ

ಪೀಪಲ್ ಟಿವಿ ಯೂಟ್ಯೂಬ್ ಚಾನಲ್ ಅನ್ನು SUBSCRIBE ಮಾಡಿ ಶೇರ್ ಮಾಡಿ

https://www.facebook.com/peepaltvkannada/videos/663302108474134

Related Articles

ಇತ್ತೀಚಿನ ಸುದ್ದಿಗಳು

You cannot copy content of this page