Thursday, February 13, 2025

ಸತ್ಯ | ನ್ಯಾಯ |ಧರ್ಮ

ಮೈಕ್ರೋ ಫೈನಾನ್ಸ್​ ಅಟ್ಟಹಾಸಕ್ಕೆ ಕೊನೆಗೂ ಲಗಾಮು ಹಾಕಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಮೈಕ್ರೋ ಫೈನಾನ್ಸ್​ ಆಟಾಟೋಪಕ್ಕೆ ಕೊನೆಗೂ ಬ್ರೇಕ್ ಬೀಳೋ ಕಾಲ ಸನಿಹವಾಗಿದೆ. ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ ಪಡೆಯೋದ್ರದಲ್ಲಿ ಹಿನ್ನಡೆ ಅನುಭವಿಸಿದ್ದ ರಾಜ್ಯ ಸರ್ಕಾರ ಕೊನೆಗೂ ಎರಡನೇ ಪ್ರಯತ್ನದಲ್ಲಿ ಫಲ ಕಂಡಿದೆ. ಹೊಸ ಕಾನೂನು ಜಾರಿಗೆ ಬಂದಿದೆ.

ಮೈಕ್ರೋ ಫೈನಾನ್ಸ್​ ಅಟ್ಟಹಾಸಕ್ಕೆ ಕೊನೆಗೂ ಲಗಾಮು

ಕರ್ನಾಟದಲ್ಲಿ ಮೈಕ್ರೋ ಫೈನಾನ್ಸ್​ ಅಟ್ಟಹಾಸಕ್ಕೆ ಕೊನೆಗೂ ಲಗಾಮು ಬಿದ್ದಿದೆ. ಮೈಕ್ರೋ ಫೈನಾನ್ಸ್ ವಿರುದ್ಧದ ಸರ್ಕಾರದ ಅಸ್ತ್ರ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್​​ ಅಂಕಿತ ಹಾಕಿದ್ದಾರೆ. 2ನೇ ಬಾರಿಗೆ ರಾಜ್ಯಪಾಲರಿಗೆ ಸುಗ್ರೀವಾಜ್ಞೆಕರಡು ಕಳುಹಿಸಿ 6 ಅಂಶಗಳ ವಿವರಣೆ ಜೊತೆ ಸ್ಪಷ್ಟನೆ ನೀಡಿದ್ದ ಸರ್ಕಾರ ಕೊನೆಗೂ ರಾಜ್ಯಪಾಲರ ಸಹಿ ಪಡೆಯೋದ್ರಲ್ಲಿ ಸಕ್ಸಸ್​ ಆಗಿದೆ. ಅಂಕಿತದ ಜೊತೆಗೆ ಸರ್ಕಾರಕ್ಕೆ ರಾಜ್ಯಪಾಲರು ಹಲವು ಸಲಹೆಗಳನ್ನು ನೀಡಿದ್ದು, ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ಸೂಚನೆ ನೀಡಿದ್ದಾರೆ.

ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಎಂದ ಸಿಎಂ

ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿರೋ ಬಗ್ಗೆ ಟ್ವೀಟ್​ ಮಾಡಿರೋ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಮೈಕ್ರೋ ಫೈನಾನ್ಸ್‌ಗಳ ನಿಯಮ ಬಾಹಿರ ಸಾಲ ವಸೂಲಿ, ಕಿರುಕುಳಗಳ ವಿರುದ್ಧ ಜನರಿಗೆ ರಕ್ಷಣೆ ನೀಡಲಿದೆ. ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಹೆದರಿ ಯಾರೊಬ್ಬರೂ ದುಡುಕಿನ ನಿರ್ಧಾರ ಕೈಗೊಳ್ಳದಿರಿ. ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಎಂದು ಹೇಳಿದ್ದಾರೆ. ಒಟ್ನಲ್ಲಿ ಮೈಕ್ರೋ ಫೈನಾನ್ಸ್​ಗಳ ಕಿರುಕುಳಕ್ಕೆ ಮೂಗುದಾರ ಹಾಕುವ ಸರ್ಕಾರದ ಹೆಜ್ಜೆ ಫಲಪ್ರದವಾಗಿದೆ..ಇನ್ನಾದ್ರೂ ಸಾವು-ನೋವು ಕಡಿಮೆಯಾಗುತ್ತಾ ಕಾದುನೋಡಬೇಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page