Thursday, September 11, 2025

ಸತ್ಯ | ನ್ಯಾಯ |ಧರ್ಮ

ಠಾಕೂರ್ ಅನುಕೂಲಚಂದ್ರರನ್ನು ‘ಪರಮಾತ್ಮ’ ಎಂದು ಘೋಷಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಸತ್ಸಂಗದ ಸ್ಥಾಪಕ ಠಾಕೂರ್ ಅನುಕುಲಚಂದ್ರ ಅವರನ್ನು ‘ಪರಮಾತ್ಮ’ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು ಭಾರತವು ಜಾತ್ಯತೀತ ದೇಶವಾಗಿದೆ ಮತ್ತು ಪಿಐಎಲ್ ಗಳ ಮೂಲಕ ಇಂತಹ ಪ್ರಾರ್ಥನೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆದ್ದರಿಂದ, ʼತಪ್ಪಾಗಿ ಗ್ರಹಿಸಲಾದʼ ಮನವಿಯನ್ನು ಸಲ್ಲಿಸಿದ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್‌ ₹ 1 ಲಕ್ಷ ದಂಡವನ್ನು ವಿಧಿಸಿದೆ.

“ಹಮ್ ಯೇ ಲೆಕ್ಚರ್ ನಹೀ ಸುನ್ನೆ ಆಯೇ ಹೈ. ಹಮ್ ಸೆಕ್ಯುಲರ್ ದೇಶ್ ಹೈ. ಪಿಐಎಲ್ ಕಾ ಕೋಯಿ ಮತ್ಲಬ್ ಹೋತಾ ಹೈ. (ಇಲ್ಲಿ ಉಪನ್ಯಾಸ ಕೇಳಲು ಅಲ್ಲ, ನಮ್ಮದು ಜಾತ್ಯಾತೀತ ದೇಶ. ಪಿಐಎಲ್ ಗೆ ಒಂದು ಅರ್ಥವಿದೆ) ಎಂದು ನ್ಯಾಯಮೂರ್ತಿ ಶಾ ಹೇಳಿದರು.

ಈ ಅರ್ಜಿಯನ್ನು ಉಪೇಂದ್ರ ನಾಥ್ ದಲೈ ಎಂಬುವವರು ಸಲ್ಲಿಸಿದ್ದರು. ಅರ್ಜಿದಾರರು ಠಾಕೂರ್ ಅನುಕೂಲಚಂದ್ರ ಅವರನ್ನು ತಮ್ಮ ದೇವರೆಂದು ಪರಿಗಣಿಸಲು ಸ್ವತಂತ್ರರಾಗಿದ್ದರೂ, ಅದನ್ನು ಇತರರ ಮೇಲೆ ಹೇರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ʼಭಾರತವು ಜಾತ್ಯತೀತ ದೇಶವಾಗಿದೆ ಮತ್ತು ಪಿಐಎಲ್‌ನಲ್ಲಿ ಇಂತಹ ಪ್ರಾರ್ಥನೆಗಳನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿಯನ್ನು ವಜಾ ಮಾಡಲಾಗಿದೆ’ ಎಂದು ನ್ಯಾಯಾಲಯ ಆದೇಶಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page