Friday, June 14, 2024

ಸತ್ಯ | ನ್ಯಾಯ |ಧರ್ಮ

ಸುವರ್ಣ ನ್ಯೂಸ್‌ ಅಜಿತ್‌ ಹನುಮಕ್ಕನವರ್‌ ವಿರುದ್ಧ ಜಾಮೀನುರಹಿತ ವಾರಂಟ್

ಮೈಸೂರು: ಸೋಷಿಯಲ್‌ ಡೆಮಾಕ್ರಾಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ವಿರುದ್ಧ ಮಾನಹಾನಕಾರಿ ವರದಿ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್‌ ಹನುಮಕ್ಕನವರ್‌ ವಿರುದ್ಧ ಇಲ್ಲಿನ ಸಿವಿಲ್‌ ನ್ಯಾಯಾಲಯವು ಜಾಮೀನುರಹಿತ ವಾರಂಟ್‌ ಹೊರಡಿಸಿದೆ.

ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಖುದ್ದು ಹಾಜರಾತಿಗೆ ವಿನಾಯಿತಿ ಕೋರಿ ಸಿಆರ್‌ಪಿಸಿ 205ರ ಅಡಿಯಲ್ಲಿ ಅಜಿತ್‌ ಹನುಮಕ್ಕನವರ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಗಳ ಸಮುಚ್ಛಯದ ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ.

ಎಸ್‌ಡಿಪಿಐ ಪಕ್ಷದ ವಿರುದ್ಧ ಅಜಿತ್‌ ಹನುಮಕ್ಕನವರ್‌ ಸಂಪಾದಕರಾಗಿರುವ ಸುವರ್ಣ ನ್ಯೂಸ್‌ನಲ್ಲಿ ಮಾನಹಾನಕಾರಿ ವರದಿಗಳನ್ನು ಪ್ರಕಟಿಸಿಲಾಗಿದೆ ಎಂದು ಆರೋಪಿಸಿ ಆ ಪಕ್ಷದ ಮುಖಂಡರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆಯನ್ನು ಡಿಸೆಂಬರ್‌ 8ಕ್ಕೆ ಮುಂದೂಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು