Friday, August 16, 2024

ಸತ್ಯ | ನ್ಯಾಯ |ಧರ್ಮ

ಸಾಯಲೆಂದು ನದಿಗೆ ಹಾರಿದ ಪತ್ನಿ ಬದುಕುಳಿದಳು: ಆದರೆ, ಪತ್ನಿ ರಕ್ಷಣೆಗಾಗಿ ಹಾರಿದ ಪತಿ ಮತ್ತು ಸಂಬಂಧಿ ಹೆಣವಾದರು!

ಕಲಬುರಗಿ: ಕುಟುಂಬದ ಜಗಳದ ಹಿನ್ನೆಲೆಯಲ್ಲಿ ಬೇಸರಗೊಂಡು ಪತ್ನಿ ನದಿಗೆ ಹಾರುತ್ತಾಳೆ. ಆಕೆಯನ್ನು ಬದುಕಿಸಲು ಪತ್ನಿ ಮತ್ತು ಆತನ ಸಹೋಧರ ಸಂಬಂಧಿ ಕೂಡ ನದಿಗೆ ಹಾರುತ್ತಾರೆ. ಆದರೆ, ಪತ್ನಿಯನ್ನು ಮೀನುಗಾರರು ರಕ್ಷಣೆ ಮಾಡುತ್ತಾರೆ. ನದಿಯ ರಭಸಕ್ಕೆ ಸಿಕ್ಕು ಪತಿ ಮತ್ತು ಸಹೋಧರ ಸಂಬಂಧಿ ಸಾವೀಗೀಡಾಗುತ್ತಾರೆ. ಇಂಥ ಹೃದಯ ವಿದ್ರಾವಕ ಘಟನೆ ಅಫಜಲಪುರ ತಾಲೂಕಿನಲ್ಲಿ ನಡೆದಿದೆ.

ಕೌಟುಂಬಿಕ ಕಲಹದ ಹಿನ್ನೆಲೆ ದೇವಣಗಾಂವ ಸೇತುವೆ ಮೇಲಿಂದ ಸೊನ್ನ ಭೀಮಾ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಲು ನದಿಗೆ ಹಾರಿದ ಆಕೆಯ ಪತಿ ಹಾಗೂ ಸಹೋದರ ಸಂಬಂಧಿ ಇಬ್ಬರ ಶವ ಬುಧವಾರ ನಸುಕಿನ ಜಾವ ಭೀಮಾ ನದಿಯ ಸೊನ್ನ ಗ್ರಾಮದ ಬಳಿ ಪತ್ತೆಯಾಗಿವೆ.

ಮೃತರನ್ನು ಅಫಜಲಪುರ ತಾಲೂಕಿನ ಶಿವಕುಮಾರ ಕಣ್ಣಿ (36) ಮತ್ತು ರಾಜು ಅಂಕಲಗಿ (39) ಎಂದು ಗುರುತಿಸಲಾಗಿದೆ.

ಅಫಜಲಪುರ ಪಟ್ಟಣದ ನಿವಾಸಿ ಲಕ್ಮೀ ಶಿವಕುಮಾರ ಕಣ್ಣಿ ಎಂಬವರು ಸೋಮವಾರ ಸಂಜೆ ಸೇತುವೆ ಮೇಲಿಂದ ಭೀಮಾ‌ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರ ರಕ್ಷಣೆಗೆ ಗಂಡ ಶಿವಕುಮಾರ ಕಣ್ಣಿ (36) ಹಾಗೂ ಲಕ್ಷೀ ತಂಗಿಯ ಪತಿ ರಾಜ್ ಕುಮಾರ್ ಅಂಕಲಗಿ ಅಂಕಲಗಿ (39) ನದಿಗೆ ಧುಮುಕಿದ್ದಾರೆ. ಆದರೆ ಮಹಿಳೆಯನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದರು. ಆದರೆ, ಶಿವಕುಮಾರ ರಾಜು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಅಗ್ನಿಶಾಮಕ ಸಿಬ್ಬಂದಿ ಸಂಜೆವರೆಗೂ ರಕ್ಷಣಾ ಕಾರ್ಯಚರಣೆ ನಡೆಸಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಬುಧವಾರ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ನಡೆಸಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page