Friday, April 18, 2025

ಸತ್ಯ | ನ್ಯಾಯ |ಧರ್ಮ

ಇವು ನನ್ನ ಮಕ್ಕಳಲ್ಲ ಎಂದ ಪತಿ: ಅವಳಿ ಶಿಶುಗಳ ಕತ್ತು ಸೀಳಿದ ಪತ್ನಿ

ಜಮ್ಮು ಕಾಶ್ಮೀರ (ಪೂಂಚ್‌): ಇವು ನನ್ನ ಮಕ್ಕಳಲ್ಲ ಎಂದು ಪತ್ನಿ ಹೇಳಿದ್ದಕ್ಕೆ ನವಜಾತ ಅವಳಿ ಶಿಶುಗಳನ್ನು ಹೆತ್ತ ತಾಯಿಯೇ ಕತ್ತು ಸೀಳಿ ಕೊಲೆ ಮಾಡಿರುವ ಅಮಾನುವೀಯ ಘಟನೆ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ.

ಸೌದಿ ಅರೇಬಿಯಾದಲ್ಲಿ ಸುಧೀರ್ಘ ಕಾಲದಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೂರು ತಿಂಗಳ ಹಿಂದೆ ಸ್ವದೇಶಕ್ಕೆ ಮರಳಿದ್ದಾಗ ಅವನ ಹೆಂಡತಿ ಗರ್ಭಿಣಿಯಾಗಿದ್ದಳು.ಇದು ಗಂಡ ಆಗಾಗ ಜಗಳ ಮಾಡುತ್ತಲೇ ಇದ್ದ. ದಿನನಿತ್ಯದ ಜಗಳಗಳ ನಡುವೆ ಕೆಲವೇ ದಿನಗಳಲ್ಲಿ ಅವಳಿ ಶಿಶುಗಳಿಗೆ ಜನ್ಮ ನೀಡಿದಳು. ಕೊನೆಗೆ ದಾರಿ ಕಾಣದೇ ಆ ವ್ಯಕ್ತಿ ಪೊಲೀಸ್ ಠಾಣೆಗೆ ತೆರಳಿ ಈ ಮಕ್ಕಳು ಅಕ್ರಮ ಸಂಬಂಧದಿಂದ ಹುಟ್ಟಿವೆ ಎಂದು ದೂರು ನೀಡಿದ್ದ.

ಇದು ಗೊತ್ತಾಗಿ ಭಯಗೊಂಡ ಮಹಿಳೆ, ಪಕ್ಕದ ಹೊಲಕ್ಕೆ ಮಕ್ಕಳನ್ನು ಎತ್ತಿಕೊಂಡು ಹೋಗಿ ಕತ್ತು ಸೀಳಿ ಹತ್ಯೆ ಮಾಡಿದಳು ಎಂದು ಪೊಲೀಸರು ಹೇಳಿದ್ದಾರೆ.

ಈ ವ್ಯಕ್ತಿಯೇ ಭಯಾನಕ ಹತ್ಯೆ ಮಾಡಿರಬೇಕು ಎಂದು ಸ್ಥಳೀಯರು ಮೊದಲು ಶಂಕಿಸಿದ್ದರು. ಆದರೆ ಪೊಲೀಸರು ಪತ್ನಿಯನ್ನು ಪ್ರಶ್ನಿಸಿದಾಗ ಆಕೆ ತಪ್ಪೊಪ್ಪಿಕೊಂಡಳು. ಮಹಿಳೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

“ಅವಳಿ ಹೆಣ್ಣುಮಕ್ಕಳನ್ನು ಕೊಂದವಳು ತಾಯಿ. ಈ ಅಪರಾಧದ ಬಗ್ಗೆ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ” ಎಂದು ಪೂಂಚ್ ಎಸ್ಎಸ್ ಪಿ ಯೊಗುಲ್ ಮನ್ಹಾಸ್ ಹೇಳಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭೀತಿ ಮೂಡಿಸಿದ್ದು, ತಾಯಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page