Wednesday, December 24, 2025

ಸತ್ಯ | ನ್ಯಾಯ |ಧರ್ಮ

ಕೋಮುವಾದವೆಂಬ ಹಗಲು ಕಂಡ ಬಾವಿಗೆ ಬೀಳುತ್ತಿರುವ ಯುವಜನತೆ

“..ಬಾಂಗ್ಲಾದೇಶದ ಯುವಕನ ಜೀವ ಕೂಡ ಕೇರಳದಲ್ಲಿ ಹತ್ಯೆಯಾದ ರಾಮ್ ನಯಾರ್ ಭಯರ್ ಜೀವ ಎರಡು ಒಂದೇ.. ಆದರೆ ದೂರದ ಬಾಂಗ್ಲಾದೇಶದ ಯುವಕನ ಮೇಲಿನ ಪ್ರೀತಿ ಈ ಎರಡು ಹಿಂದೂಗಳ ಮೇಲೆ ಯಾಕಿಲ್ಲ?..” ಅಬ್ಬಾಸ್ ಕಿಗ್ಗ ಅವರ ಬರಹದಲ್ಲಿ

ಘಟನೆ ೧.ಬಿಹಾರದ ನವಾದ ಜಿಲ್ಲೆಯ ಭಟ್ಟಾಪುರ ಗ್ರಾಮ.ಡಿಸೆಂಬರ್ 5.  ಮಹಮ್ಮದ್ ಅತಾಹರ್ ಹುಸೇನ್ ಎಂಬ ಬಟ್ಟೆ ವ್ಯಾಪಾರಿಗೆ ಆತನ ಮುಸ್ಲಿಂ ಗುರುತೇ ಮುಳುವಾಗಿತ್ತು.ಹೆಸರು ಕೇಳಿದ್ದರು ಮತಾಂಧರು! ಮುಸ್ಲಿಂ ಹೆಸರು. ಆದರೂ ಮಾರಣಾಂತಿಕ ಹಲ್ಲೆಗೂ ಮೊದಲು ಮತಾಂಧರಿಗೆ  ಮುಸ್ಲಿಂ ಎಂಬ ದೃಡಿಕರಣಕ್ಕೆ ಬಲವಾದ  ಸಾಕ್ಷಿ ಬೇಕಿತ್ತು ಅದಕ್ಕಾಗಿ ಪ್ಯಾಂಟ್ ಬಿಚ್ಚಿದ್ದರು!! ಬಿಸಿ ರಾಡ್ ನಿಂದ ಸುಡಲಾಯಿತು. ಕೈ ಬೆರಳುಗಳನ್ನು ಕತ್ತರಿಸಲಾಯಿತು. ಡಿಸೆಂಬರ್ 12ರಂದಯ ಅತಹರ್   ಕೊನೆಯುಸಿರು ಎಳೆದಿದ್ದ. ಮೂರು ಮಕ್ಕಳು ಮತಾಂಧರ ದಾಳಿಗೆ ಅನಾಥವಾಗಿದ್ದವು.

ಘಟನೆ ೨‌.ಕೇರಳದ ಪಾಲಕ್ಕಾಡ್ ಜಿಲ್ಲೆಯ ವಲಯಾರ್.  ಡಿಸೆಂಬರ್ 17.  ರಾಮ್ ನಾರಯಣ್ ಭಯರ್ ಎಂಬ ಹಿಂದೂ ವ್ಯಕ್ತಿಯನ್ನು ಕೊಲ್ಲಲಾಗಿತ್ತು. ಕೊಲ್ಲಲು ಕಾರಣ ಮಾತ್ರ ಮತ್ತದೇ ಮುಸ್ಲಿಂ ವ್ಯಕ್ತಿ ಎಂಬುದು. ಅದು ಕೂಡ ಬಾಂಗ್ಲಾದ ಮುಸ್ಲಿಂ ವ್ಯಕ್ತಿ. ಇಲ್ಲಿಯ ಹಿಂದೂ ಮತಾಂಧರ ತಪ್ಪು ಗ್ರಹಿಕೆಯ ದಾಳಿಗೆ  ಹಿಂದೂ ಪುಟಾಣಿಗಳಾದ ಅನುಜ ಮತ್ತು ಆಕಾಶ್ ಅನಾಥರಾದರು. ಏನು ಅರಿಯದ ಮುಗ್ದ ಮಕ್ಕಳನ್ನು ಅನಾಥವಾಗಿ ಜೀವಬಿಟ್ಟ  ರಾಮ್ ನಾರಯಣ್ ಭಯರ್ ಎಂಬ ಅಮಾಯಕ ಛತ್ತಿಸ್ ಗಡದಿಂದ ಕೆಲಸ ಅರಸಿ ಕೇರಳಕ್ಕೆ ಬಂದವನು ವಾಪಸು ಹೋಗುವಾಗ ಜೀವ ಇರಲಿಲ್ಲ

ಘಟನೆ ೩:ಪರದೇಶ ಬಾಂಗ್ಲಾದೇಶದ ಮೈಮುನ್ ಸಿಂಗ್ ಜಿಲ್ಲೆಯ ಭಲೂಕದವನು.ಡಿಸೆಂಬರ್ 18. ದೀಪು ಚಂದ್ರ ದಾಸ್ ಎಂಬ ಹಿಂದೂ ಯುವಕ. ಬಾಂಗ್ಲಾದೇಶದ ಮಟ್ಟಿಗೆ ಅಲ್ಪಸಂಖ್ಯಾತ.ಅಲ್ಲಿ ಕೂಡ ಮುಸ್ಲಿಂ ಮತಾಂಧರು ದೀಪ್ ಚಂದ್ರ ದಾಸ್ ನನ್ನು ಗುಂಪಾಗಿ ಕೂಡಿ ಹತ್ಯೆ ಮಾಡಿದರು.

ಘಟನೆ ೪: ನಮ್ಮದೇ ಕರ್ನಾಟಕದ ಹುಬ್ಬಳ್ಳಿಯ ಇನಾಂ  ವೀರಾಪುರ ಗ್ರಾಮ. ಡಿಸೆಂಬರ್ 21. ಮಾನ್ಯ ಎಂಬ ಲಿಂಗಾಯತ ಸಮುದಾಯದ ಏಳು ತಿಂಗಳ ಗರ್ಭಿಣಿ.ಸ್ವತಃ ಹುಟ್ಟಿಸಿದ ತಂದೆಯೇ ಸಂಬಂಧಿಕರೊಂದಿಗೆ  ಮಗಳ ಮನೆಗೆ ನುಗ್ಗುತ್ತಾನೆ. ಮಗಳೆಂಬ ಕನಿಷ್ಠ ಪ್ರೀತಿಯೂ ಮಾಯವಾಗಿ ಕೊಡಲಿ ಕಬ್ಬಿಣದ ರಾಡ್ ನಿಂದ ಗರ್ಭಿಣಿ ಮಗಳಿಗೆ  ರಕ್ಕಸನಾಗಿ ಹಲ್ಲೆ ಮಾಡುತ್ತಾನೆ.

ದಲಿತ ವ್ಯಕ್ತಿಯನ್ನು ಮದುವೆಯಾದ ಒಂದೇ ಕಾರಣಕ್ಕಾಗಿ ಗರ್ಭಿಣಿ ಮಾನ್ಯ ಮತ್ತು  ಜೊತೆಗೆ ಪ್ರಪಂಚಕ್ಕೆ ಕಾಲಿಡದ ಹೊಟ್ಟೆಯಲ್ಲಿದ್ದ  ಮಗು ಇಬ್ಬರು ಪ್ರಾಣ ತ್ಯಾಗ ಮಾಡುತ್ತಾರೆ.

ಈ ಒಂದೇ ತಿಂಗಳಲ್ಲಿ ನಡೆದ   ಈ ನಾಲ್ಕು ಸುದ್ದಿಗಳಲ್ಲಿ ಸಾಮ್ಯತೆ ಇದೆ. ನಾಲ್ಕು ಕೂಡ ಮತಾಂಧರ ಆರ್ಭಟ. ಮೂರು ಭಾರತದ ಘಟನೆ ಆದರೇ ಒಂದು ಪರದೇಶದ ಬಾಂಗ್ಲಾದೇಶದ ಘಟನೆ.  ಆದರೇ ಒಮ್ಮೆ ತಾವು ಈಗಿನ ಸಾಮಾಜಿಕ ಮಾಧ್ಯಮಗಳಲ್ಲಿ , ವಾರ್ತಾ ಚಾನೆಲ್ ಗಳಲ್ಲಿ ಕಣ್ಣು ಹಾಯಿಸಿ. ದೇಶದ ಒಳಗಿನ ಮೂರು ಮತಾಂಧತೆಯ ಕೃತ್ಯಗಳು ವಿರಳವಾಗಿ ಕಣ್ಣಿಗೆ ಬೀಳುತ್ತದೆ. ಬಿಹಾರದ ಘಟನೆ ಪಕ್ಕಕ್ಕೆ ಇಡೋಣ ,ಅತ್ತ ಸತ್ತವ ಮುಸ್ಲಿಂ , ಕೊಂದವ ಸಂಘಪರಿವಾರದವರು. ಮುಂದೆ ಆರೋಪಿಗಳು ಜೈಲಿನಿಂದ ಹೊರಬರುವಾಗ ಹಾರ ತುರಾಯಿ ಸ್ವಾಗತ ಸಿಕ್ಕರೂ ಅಚ್ಚರಿ ಇಲ್ಲ. ಬದಲಾದ ಭಾರತದಲ್ಲಿ ಮುಸ್ಲಿಮರ ಜೀವ ಅಷ್ಟು ಅಗ್ಗವಾಗಿದೆ. ಆದರೇ  ಕೇರಳದಲ್ಲಿ ಹಿಂದೂ ವ್ಯಕ್ತಿಯನ್ನೆ ಸಂಘಪರಿವಾರದವರು ಕೊಂದು ಹಾಕಿದ್ದರು. ಕಣ್ಣೀರು ಸುರಿಸುವ ಧರ್ಮ ರಕ್ಷಕರು ಯಾರು ಇಲ್ಲ. ಹಿಂದೂ ನಾವೆಲ್ಲ ಒಂದು ಘೋಷಣೆ ಕೂಗುವವರು ದಲಿತ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕಾಗಿ ಕೊಲೆಯಾದ ಗರ್ಭಿಣಿಯ ಸಾವನ್ನು ಖಂಡಿಸುತ್ತಿಲ್ಲ. ಆದರೇ ಮಾಧ್ಯಮಗಳಲ್ಲಿ ಏನು ಚರ್ಚೆ ಆಗುತ್ತಿದೆ. ಕೇವಲ ಬಾಂಗ್ಲಾದೇಶದ ಯುವಕನ ಹತ್ಯೆ.

ಬಾಂಗ್ಲಾದೇಶದ ಯುವಕನ ಜೀವ ಕೂಡ ಕೇರಳದಲ್ಲಿ ಹತ್ಯೆಯಾದ ರಾಮ್ ನಯಾರ್ ಭಯರ್ ಜೀವ ಎರಡು ಒಂದೇ. ಅಷ್ಟೇ ಏಕೆ ತುಂಬು ಗರ್ಭಿಣಿ ಮಾನ್ಯಳ ಜೀವವೂ ಒಂದೇ. ಆದರೇ ದೂರದ ಬಾಂಗ್ಲಾದೇಶದ ಯುವಕನ ಮೇಲಿನ ಪ್ರೀತಿ ಈ ಎರಡು ಹಿಂದೂಗಳ ಮೇಲೆ ಯಾಕಿಲ್ಲ?.

ನಾಲ್ಕು ಘಟನೆಗಳಲ್ಲಿ  ಮೂರು ಭಾರತದಲ್ಲಿ ನಡೆದಿರುವುದು. ಎರಡರಲ್ಲಿ ಹಿಂದೂಗಳೇ ಸಂತ್ರಸ್ತರು.ಒಂದು   ಪರದೇಶದ ಘಟನೆಯಲ್ಲಿ ಅಲ್ಲಿಯ ಮುಸ್ಲಿಮರ ಕೈವಾಡವಿದೆ. ಆದರೇ ಭಾರತದ ಮುಸ್ಲಿಮರನ್ನು ಈ ವಿಷಯದಲ್ಲಿ ಉದ್ದೇಶ ಪೂರ್ವಕವಾಗಿ ಬೊಟ್ಟು ಮಾಡಿ   ಮಾತು ಕೃತಿಗಳು ಯತೆಚ್ಚವಾಗಿ ಹರಿದಾಡುತ್ತದೆ. ನಾಲ್ಕರಲ್ಕಿ  ಮೂರು ಘಟನೆಗಳಲ್ಲಿ   ಹಿಂದೂ ಮೂಲಭೂತ ಅಭ್ಬರಿಸುತ್ತಿದ್ದರೂ ಆ ಬಗ್ಗೆ  ಇಡೀ ಸಮಾಜವೇ ಮಲಗಿದಂತೆ ಬಾಷವಾಗುತ್ತಿದೆ ಮಾತ್ರವಲ್ಲ ಪರದೇಶ ಘಟನೆಯನ್ನೆ ನೆಪವಾಗಿಸಿಕೊಂಡು ಭಾರತದ ಮುಸ್ಲಿಂ ಸಮಾಜವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಶತಾಯ ಗತಾಯ ಹೆಣಗಾಡಲಾಗುತ್ತಿದೆ

ಅಷ್ಟಕ್ಕೂ ಬಾಂಗ್ಲಾದ ಘಟನೆಯ ಇನ್ನೊಂದು ಆಯಾಮವನ್ನು ಮುಚ್ಚಿಟ್ಟು ಮುಸ್ಲಿಂ ದ್ಬೇ಼ಷಕ್ಕಾಗಿ ಅದನ್ನು ಬಳಸಲಾಗುತ್ತದೆ. ಹಾಗೆ ನೋಡಿದರೇ ಹಿಂದೂ ಯುವಕ ದೀಪ್ ಚಂದ್ರ ದಾಸ್ ಕೊಲೆಯಾದ ಸಮಯದಲ್ಲೆ ಅಲ್ಲಿಯ ವಿಧ್ಯಾರ್ಥಿ ನಾಯಕ ಶರೀಪ್ ಒಸ್ಮಾನ್ ಹಾದಿ ಹತ್ಯೆಯೂ ನಡೆಯುತ್ತದೆ. ಶೇಖ್ ಹಸೀನಾ ಪದಚ್ಯುತಗೊಳಿಸಲು ಹೋರಾಟದ ಮುಂಚೂಣಿಯ ವಿಧ್ಯಾರ್ಥಿ ನಾಯಕ ಈ ಓಸ್ಮಾನ್ ಹಾದಿ. ಶೇಖ್ ಹಸೀಮಾ ಭಾರತದಲ್ಲಿ ಆಶ್ರಯ ಪಡೆದಿರುವುದು ಅಲ್ಲಿನ ಈಗೀನ ಸರಕಾರದ ಮತ್ತು ಮತೀಯವಾದಿಗಳ ಕಣ್ಣು ಕೆಂಪಾಗಿಸಿದೆ‌. ಜೊತೆಗೆ ಅನಾಮಿಕ ವ್ಯಕ್ತಿಗಳಿಂದ  ವಿಧ್ಯಾರ್ಥಿ ನಾಯಕನ ಹತ್ಯೆಯಾಗುತ್ತಿದ್ದಂತೆ ಭಾರತ ವಿರೋಧಿ ಘೋಷಣೆ ಬಾಂಗ್ಲಾದೇಶದಲ್ಲಿ ಮೊಳಗಿದೆ. ಅದೇ ಸಮಯದಲ್ಲಿ ಹಿಂದೂ ಯುವಕ ದೀಪಕ್ ರಾವ್ ಮೇಲೆ ಪ್ರವಾದಿಗಳ ಅವಮಾನದ ಆರೋಪ ಹೊರಸಿ ಕೊಲೆ ಮಾಡಲಾಗಿದೆ. ಇದಕ್ಕೆ ಇನ್ನೊಂದು ಅಮಾಯವೂ ಕೂಡ ಇದ್ದು ದೀಪ್ ಚಂದ್ರ ದಾಸ್ ಕೆಲಸ ಮಾಡುವ ಪ್ಯಾಕ್ಟರಿಯ ಸಹಧ್ಯೋಗಿಗಳ ನಡುವಿನ ಜಗಳ ಅಥವಾ ಪದೋನ್ನತಿಗಾಗಿ ನಡೆದ ಸಮರ ಅಂತಲೂ ಅನುಮಾನಗಳು ವ್ಯಕ್ತವಾಗಿದೆ.

ಅದೇನೆ ಇರಲಿ ಪ್ರವಾದಿಯ ಅವಮಾನ ಆಗಿದ್ದಕ್ಕೆ ಈ ಕೊಲೆ ನಡೆದಿದ್ದಲ್ಲಿ ಸ್ವತಃ ಪ್ರವಾದಿಯೂ ಇವರನ್ನು ಸಹಿಸಲಾರರು ಎಂಬುದು ಸತ್ಯ.

ಆದರೇ ಇವೆಲ್ಲವನ್ನೂ ಮುಚ್ವಿಟ್ಟು ಭಾರತದಲ್ಲಿ ಕೇವಲ‌ ಮುಸ್ಲಿಂ ದ್ವೇಷವನ್ನು ಹೆಚ್ಚೆಚ್ಚು ಹರಡಿ  ಹುಲುಸಾದ ರಾಜಕೀಯ ಫಸಲಿಗೆ ಭೂಮಿಕೆಯನ್ನು ಸಿದ್ದಪಡಿಸಲಾಗುತ್ತದೆ.

ಹೀಗೆ ಮುಖಪುಟದಲ್ಲಿ ಪಕ್ಕದ ಪಾಪಿ ಪಾಕಿಸ್ತಾನದ ವಿಡಿಯೋ ಒಂದು ಕಣ್ಣಿಗೆ ಬಿತ್ತು.. ಪಾಕಿಸ್ತಾನ ಹಿಂದೂಸ್ ಎಂಬ ಪೇಜಲ್ಲಿ   ಒರ್ವ ಹಿಂದೂ  ಯುವಕ ಹಾಕಿದ  ವಿಡಿಯೋ ಒಂದನ್ನು ನೋಡಿದೆ. ಸಡಗರದ ನವರಾತ್ರಿ ಯ ಸಂಭ್ರಮ ಜೊತೆಗೆ ನಾವು ಪಾಕಿಸ್ತಾನದ ಸುರಕ್ಷಿತ ಎಂಬ ಸಂದೇಶದೊಂದಿಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ. ಯಾಕೋ ನಾಚಿಕೆ ಅನಿಸಿತು.

ಅವರು ನಮ್ಮ ಏಳಿಗೆ ಕಂಡು ನಮ್ಮನ್ನು ಅನುಸರಿಸಲು ಹೊರಟಿದ್ದಾರೆ‌. ನಾವು ಹಗಲು ಕಂಡ ರಾತ್ರಿ ಬಿದ್ದ ಹಾಗೆ ಪಾಪಿಗಳಾಗಿ ಹೆಣಗುತ್ತಿದ್ದೆವೆ ಅನಿಸಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page