Wednesday, August 14, 2024

ಸತ್ಯ | ನ್ಯಾಯ |ಧರ್ಮ

ಅಯೋಧ್ಯೆಯ ರಾಮಪಥದಲ್ಲಿ ಅಳವಡಿಸಿದ್ದ ವಿದ್ಯುತ್‌ ದೀಪಗಳ ಕಳವು

ಅಯೋಧ್ಯೆ: ಉತ್ತರ ಪ್ರದೇಶದ ಆಯೋಧ್ಯೆಯ ರಾಮಪಥ ಮತ್ತು ಭಕ್ತಿಪಥ ಮಾರ್ಗಗಳಲ್ಲಿ ಇತ್ತೀಚೆಗಷ್ಟೇ ಅಳವಡಿಸಲಾಗಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ದೀಪಗಳು ಕಳ್ಳತನವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

50 ಲಕ್ಷ ರೂ. ಮೌಲ್ಯದ 36 ಪ್ರೊಜೆಕ್ಟರ್ ಲೈಟ್ ಹಾಗೂ 3,800 ವಿವಿಧ ಪ್ರಕಾರ ದೀಪಗಳು ಕಳ್ಳತನವಾಗಿದೆ. ಬೀದಿ ದೀಪಗಳನ್ನು ಅಳವಡಿಸಲು ಅಯೋಧ್ಯೆ ಅಭಿವೃದ್ದಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದುಕೊಂಡಿರುವ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣ ಅಟೋಮೊಬೈಲ್ಸ್ ನೀಡಿರುವ ದೂರಿನ ಮೇರೆಗೆ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

6,400 ವಿವಿಧ ಪ್ರಕಾರಗಳ ದೀಪಗಳು ಮತ್ತು 96 ಪ್ರೊಜೆಕ್ಟರ್ ಲೈಟ್‌ಗಳನ್ನು ಅಳವಡಿಸಲಾಗಿತ್ತು. ಮಾರ್ಚ್ 19ರವರೆಗೆ ಅವುಗಳು ಅಲ್ಲೆ ಇದ್ದವು. . ಆದರೆ, ಮೇ 9ರಂದು ಪರಿಶೀಲನೆ ನಡೆಸಿದಾಗ, ಅನೇಕ ದೀಪಗಳು ಕಾಣೆಯಾಗಿರುವುದು ಗೊತ್ತಾಗಿದೆ. ಇದುವರೆಗೆ 3,800 ವಿವಿಧ ಪ್ರಕಾರಗಳ ದೀಪಗಳು ಮತ್ತು 36 ಪ್ರೊಜೆಕ್ಟರ್ ಲೈಟ್‌ಗಳು ಕಳವಾಗಿರುವುದು ಗೊತ್ತಾಗಿದೆ ಎಂದು ಗುತ್ತಿಗೆದಾರರು ಎಫ್‌ಐರ್‌ ನಲ್ಲಿ ದಾಖಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page