Wednesday, July 16, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುವವರ ಲಿಸ್ಟ್ ಇದೆ – ಜಿಲ್ಲಾ ಮಂತ್ರಿ ಕೆ.ಎನ್. ರಾಜಣ್ಣ ಹೇಳಿಕೆ


ಹಾಸನ : ಕಾಂಗ್ರೆಸ್ ಶಾಸಕರ ಲಿಸ್ಟ್ ರೆಡಿ ಇದೆ ಎಂದು ಹೇಳಿರುವವರನ್ನ ಕರೆದುಕೊಂಡು ಹೋಗಿ ಮೆಂಟಲ್ ಆಸ್ಪತ್ರೆಗೆ ಸೇರಿಸಿ, ಯಾರಾದರೂ ಹೇಳಲಿ ಕರ್ಕೊಂಡು ಹೋಗಿ ಮೆಂಟಲ್ ಆಸ್ಪತ್ರೆಗೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಯಾವುದೇ ಪಟ್ಟಿ ಇಲ್ಲ. ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುವವರ ಲಿಸ್ಟ್ ಇದೆ ಆದರೇ ಈಗಲೆ ಕೊಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಗೊಂದಲದ ಹೇಳಿಕೆ ನೀಡಿದರುನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಕಾಂಗ್ರೆಸ್ ಶಾಸಕರ ಲಿಸ್ಟ್ ರೆಡಿ ಇದೆ ಎಂಬ ವಿಚಾರಕ್ಕೆ ಉತ್ತರಿಸಿ, ಯಾರು ಹೇಳಿರೋರು, ಅವರನ್ನು ಕರೆದುಕೊಂಡು ಹೋಗಿ ಮೆಂಟಲ್ ಆಸ್ಪತ್ರೆಗೆ ಸೇರಿಸಿ. ಯಾರಾದರೂ ಹೇಳಲಿ ಕರ್ಕೊಂಡು ಹೋಗಿ ಮೆಂಟಲ್ ಆಸ್ಪತ್ರೆಗೆ ಸೇರಿಸಲಿ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಯಾವುದೇ ಪಟ್ಟಿ ಇಲ್ಲ. ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರುವವರ ಲಿಸ್ಟ್ ಎಂ.ಬಿ. ಪಾಟೀಲ್‌ಗೆ ಕೊಟ್ಟವ್ರೆ, ಆ ಲಿಸ್ಟ್ ಕೊಡ್ಲಾ! ಲಿಸ್ಟ್ ಇದೆ ಈಗಲೇ ಕೊಡಲ್ಲ ಸೇರ್ಕಂಡ ಮೇಲೆ ಹೇಳ್ತಿನಿ ಎಂದು ಗೊಂದಲವಾಗಿ ಹೇಳಿಕೆ ನೀಡಿದರು. ಸೆಪ್ಟೆಂಬರ್ ನಲ್ಲಿ ಕ್ರಾಂತಿ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಸೆಪ್ಟೆಂಬರ್ ಕ್ರಾಂತಿ ಈವಾಗಲೇ ಹೇಳಲ್ಲ. ಮುಖ್ಯಮಂತ್ರಿಗಳಿಗೆ ಗೊತ್ತಿತಲ್ವಾ ಐದು ವರ್ಷ ನಾನೇ ಸಿಎಂ ಅಂಥ ಗೊತ್ತಿತ್ತಲ್ಲ ಮೊದಲೇ ಯಾಕೆ ಹೇಳಲಿಲ್ಲ ಅವರು, ನಾನು ಅವರನ್ನು ಪ್ರಶ್ನೆ ಮಾಡಿದೆ. ಯಾವುದನ್ನ ಯಾವ ಸಂದರ್ಭ ಹೇಳಬೇಕು ಆಗಲೇ ಹೇಳಬೇಕು. ಯಾವುದೋ ಸಂದರ್ಭದಲ್ಲಿ ಯಾವುದನ್ನು ಮಾತನಾಡಬಾರದು ಅಂಥ ಈ ಸಂದರ್ಭದಲ್ಲಿ ಹೇಳಿದ್ದಾರೆ. ನಾನು ಹಾಗೇ ಸೆಪ್ಟೆಂಬರ್ ಕ್ರಾಂತಿನಾ ಸೆಪ್ಟೆಂಬರ್‌ನಲ್ಲಿ ಹೇಳ್ತಿನಿ! ಯಾವ ಗೊಂದಲ ಏನು ಇಲ್ಲ. ನೀವು ಸೃಷ್ಟಿ ಮಾಡುತ್ತಿದ್ದೀರಾ. ಗೊಂದಲ ಇರುವುದು ಬಿಜೆಪಿ ಪಾರ್ಟಿಯಲ್ಲಿ, ಅವರ ಗೊಂದಲ ಸರಿಪಡಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು. ಸಿಗಂಧೂರು ಸೇತುವೆ ವಿಚಾರವಾಗಿ ಸಿಎಂ ಅಸಮಾಧಾನ ವಿಚಾರಕ್ಕೆ ಉತ್ತರಿಸಿ, ನಮ್ಮ ದೇಶದಲ್ಲಿ ಸಂವಿಧಾನ ಬದ್ದವಾಗಿ ಆಡಳಿತ ಇದೆ.

ನಮ್ಮ ಇತಿಮಿತಿಯಲ್ಲಿ ಕೆಲಸ ಮಾಡಬೇ ಕೇಂದ್ರ ಸರ್ಕಾರದವರು ಮುಖ್ಯಮಂತ್ರಿ ಕರಿಯಬಾರದು ಎಂದು ಉದ್ದೇಶಪೂರ್ವಕವಾಗಿ ಮಾಡಿದ್ರೆ ಅದು ಖಂಡನಾರ್ಹ. ಮಾಹಿತಿ ಕೊರತೆಯಿಂದ ಕೆಲವೊಮ್ಮೆ ಮುಖ್ಯಮಂತ್ರಿ ಹೋಗದೆ ಇರಬಹುದು. ಇವತ್ತು ಬಿಜಾಪುರದಲ್ಲಿ 2000 ಕೋಟಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆ ಕಾರ್ಯಕ್ರಮ ಬಿಟ್ಟು ಹೋಗಲು ಆಗಲ್ಲ, ಇನ್ನೊಂದಿನ ಮಾಡಬಹುದಿತ್ತು. ಹೆಚ್ಚು ಒತ್ತು ಕೊಟ್ಟು ಚರ್ಚೆ ಮಾಡುವುದು ಬೇಡ ಎಂದರು. ಗಡ್ಕರಿ ಅವರ ಬಗ್ಗೆ ನನಗೆ ವೈಯುಕ್ತಿಕವಾಗಿ ವಿಶೇಷವಾದ ಅಭಿಮಾನ ಇದೆ. ದೇಶಗಳಲ್ಲಿ ರಸ್ತೆಗಳು ಆಗುತ್ತಿದೆಯೆಲ್ಲಾ, ಅವರು ಯಾವುದೇ ಪಕ್ಷ, ಯಾವುದೇ ರಾಜ್ಯ ಎಂದು ತಾರತಮ್ಯ ಮಾಡುವ ವ್ಯಕ್ತಿಯಲ್ಲ. ಇವರು ಪೂನಾದವರು, ಆರ್‌ಎಸ್‌ಎಸ್‌ನಿಂದ ಬಂದವರು ಕಟ್ಟರ್ ಹಿಂದೂವಾದಿ ಅನ್ಕೊಂಡಿದ್ದೆವೆ. ಅವರ ಇಂಟರ್‌ವ್ಯೂ ನೋಡಿದ ಮೇಲೆ, ಕಾರ್ಯವೈಖರಿ ನೋಡಿದ ಮೇಲೆ ನಿಜಕ್ಕೂ ಕೂಡ ಅಭಿವೃದ್ಧಿ ಪರ ಇದ್ದಾರೆ ಅಂಥ ನನಗೆ ಅನ್ನಿಸುತ್ತದೆ. ರಾಷ್ಟçದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡುವುದನ್ನು ನೋಡಿದರೆ ನಿಜಕ್ಕೂ ಅಭಿವೃದ್ಧಿ ಪರ ಇರುವಂತಹ ರಾಜಕಾರಣಿ ಅಂಥ ಒಪ್ಪುತ್ತೇನೆ ಎಂದು ಶ್ಲಾಘನೆ ಮಾತನಾಡಿದರು.


Related Articles

ಇತ್ತೀಚಿನ ಸುದ್ದಿಗಳು

You cannot copy content of this page