Wednesday, July 16, 2025

ಸತ್ಯ | ನ್ಯಾಯ |ಧರ್ಮ

ಇಸ್ಲಾಮಿಕ್ ಶಿಕ್ಷಣ ಕಲಿಸುವುದರಲ್ಲಿ ಯಾವುದೇ ತಪ್ಪಿಲ್ಲ, ವೇದಗಳು ಮತ್ತು ಉಪನಿಷತ್ತುಗಳನ್ನು ಕಲಿಸುವುದನ್ನು ಸಹ ವಿರೋಧಿಸುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ಎಂಐಎಂ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಅದು ಎತ್ತಿಹಿಡಿದಿದೆ. ತಿರುಪತಿ ನರಸಿಂಹ ಮುರಾರಿ ಎಂಬ ವ್ಯಕ್ತಿಯ ಪರವಾಗಿ ಸಲ್ಲಿಸಲಾದ ಅರ್ಜಿಯನ್ನು ಮಂಗಳವಾರ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರವಾಗಿ ವಾದಗಳನ್ನು ಮಂಡಿಸಿದ ವಕೀಲ ವಿಷ್ಣು ಶಂಕರ್ ಜೈನ್, ಎಂಐಎಂ ಪಕ್ಷವು ಮುಸ್ಲಿಮರಲ್ಲಿ ಇಸ್ಲಾಮಿಕ್ ಶಿಕ್ಷಣವನ್ನು ಉತ್ತೇಜಿಸುತ್ತದೆ ಮತ್ತು ಶರಿಯಾ ಕಾನೂನಿನ ಅರಿವು ಹೆಚ್ಚಿಸುತ್ತದೆ ಎಂದು ಹೇಳಿಕೊಳ್ಳುತ್ತದೆ ಎಂದು ಆಕ್ಷೇಪಿಸಿದರು.

ಇದಕ್ಕೆ ಪೀಠವು ಪ್ರತಿಕ್ರಿಯಿಸಿ ‘ಇದರಲ್ಲಿ ತಪ್ಪೇನಿದೆ? ಇಸ್ಲಾಮಿಕ್ ಶಿಕ್ಷಣವನ್ನು ಕಲಿಸುವುದು ತಪ್ಪಲ್ಲ. ಅಂತಹ ಶಿಕ್ಷಣ ಸಂಸ್ಥೆಗಳನ್ನು ಇನ್ನಷ್ಟು ರಾಜಕೀಯ ಪಕ್ಷಗಳು ಸ್ಥಾಪಿಸಿದರೂ ನಾವದನ್ನು ಸ್ವಾಗತಿಸುತ್ತೇವೆʼ ಎಂದಿತು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ʼನಾನು ವೇದಗಳು, ಉಪನಿಷತ್ತುಗಳು ಮತ್ತು ಪುರಾಣಗಳನ್ನು ಕಲಿಸಲು ಹಿಂದೂ ಧರ್ಮದ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ರಚಿಸಿದರೆ, ಚುನಾವಣಾ ಆಯೋಗವು ಅದನ್ನು ಸ್ವೀಕರಿಸುವುದಿಲ್ಲ, ಏಕೆಂದರೆ ಇದು ತಾರತಮ್ಯವಾಗುತ್ತದೆ.

ಪೀಠವು ‘ವೇದಗಳು ಮತ್ತು ಉಪನಿಷತ್ತುಗಳನ್ನು ಕಲಿಸಲು ಚುನಾವಣಾ ಆಯೋಗವು ಆಕ್ಷೇಪಿಸಿದರೆ, ಸಂಬಂಧಿತ ವೇದಿಕೆಗಳಿಗೆ ದೂರು ನೀಡಿ. ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.’

ಯಾವುದೇ ರಾಜಕೀಯ ಪಕ್ಷವು ಆ ಧಾರ್ಮಿಕ ಕಾನೂನನ್ನು ಕಲಿಸುವುದಾಗಿ ಹೇಳಿದರೆ, ಯಾವುದೇ ಆಕ್ಷೇಪಣೆಗಳು ಇರಬಾರದು. ಇದಲ್ಲದೆ, ಸಂವಿಧಾನವು ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗೆ ಕೆಲವು ರಕ್ಷಣೆಗಳನ್ನು ಒದಗಿಸಿದೆ ಮತ್ತು ಆ ರಕ್ಷಣೆಗಳ ಅನುಷ್ಠಾನಕ್ಕೆ ಕೆಲಸ ಮಾಡುತ್ತದೆ ಎಂದು ಎಂಐಎಂ ಹೇಳಿದೆ.

ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡುವ ಭರವಸೆಯ ಹೊರತಾಗಿಯೂ, ಸಮಾಜದಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಕೆಲಸಗಳನ್ನು ಮಾಡಬಹುದಾದ ಪಕ್ಷಗಳು ಮತ್ತು ಅಭ್ಯರ್ಥಿಗಳು ಇದ್ದಾರೆ ಎಂದು ಪೀಠ ಹೇಳಿದೆ. ಕೆಲವು ಪಕ್ಷಗಳು ಜಾತಿ ಆಧಾರಿತ ರಾಜಕೀಯವನ್ನು ಮಾಡುತ್ತಿವೆ, ಇದು ಸಮಾಜಕ್ಕೆ ಅಪಾಯಕಾರಿ ಎಂದು ಅದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page