Thursday, July 3, 2025

ಸತ್ಯ | ನ್ಯಾಯ |ಧರ್ಮ

ಸ್ವಾಮಿಗಳು ರಾಜಕೀಯ ನಡೆಸುವುದಾದರೆ ಅವರ ಸ್ಥಾನಗಳಿಗೂ ಚುನಾವಣೆ ನಡೆಸಬೇಕು:‌ ಸಂಗೀತ ನಿರ್ದೇಶಕ ಗುರುಕಿರಣ್

ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಸ್ಥಾನಗಳ ಕುರಿತಾದ ಚರ್ಚೆಗೆ ರಾಜಕೀಯೇತರ ವಲಯದ ಪ್ರತಿಕ್ರಿಯೆಗಳು ಕುತೂಹಲ ಹುಟ್ಟಿಸುವಂತಿದೆ.

ಕಾಂಗ್ರೆಸ್‌ ಪಕ್ಷದ ನಾಯಕರು ಉಪ ಮುಖ್ಯಮಂತ್ರಿ ಸ್ಥಾನವನ್ನು ಹೆಚ್ಚಿಸುವಂತೆ ಬೇಡಿಕೆ ಇಡುತ್ತಿರುವ ಹೊತ್ತಿನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಸ್ಥಾನವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಬಿಟ್ಟುಕೊಡಬೇಕು ಎನ್ನುವ ಚರ್ಚೆಯೂ ಮುನ್ನೆಲೆಗೆ ಬಂದಿದೆ.

ಈ ಕುರಿತು ಒಕ್ಕಲಿಗರ ಮಠದ ಮಠಾಧೀಶರಾದ ಚಂದ್ರಶೇಖರ ಸ್ವಾಮಿ ಸಿದ್ಧರಾಮಯ್ಯನವರು ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು ಎಂದು ಹೇಳಿಕೆ ನೀಡಿದ್ದರು.

ಇದರ ನಂತರ ಕೆ ಎನ್‌ ರಾಜಣ್ಣ ಸ್ವಾಮಿಯೂ ತನ್ನ ಸ್ಥಾನವನ್ನು ನನಗೆ ಬಿಟ್ಟು ಕೊಡಲಿ ಎಂದು ಟಾಂಗ್‌ ಕೊಟ್ಟಿದ್ದರು. ಈಗ ಚರ್ಚೆ ಮುಂದುವರೆದಿದ್ದು ಚರ್ಚೆಗೆ ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್‌ ಧುಮುಕಿದ್ದಾರೆ.

ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಅವರು “ಸ್ವಾಮೀಜಿಗಳು ರಾಜಕೀಯ ಮಾಡುವುದಾದರೆ, ಆ ಸ್ವಾಮೀಜಿ ಪಟ್ಟಕ್ಕೂ election ನಡೆಸುವುದು ಒಳಿತಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page