Home ದೇಶ ಶಾಂತಿ ಮಾತುಕತೆಯಲ್ಲಿ ವ್ಯಾಪಾರದ ಪ್ರಸ್ತಾಪ ಬಂದಿರಲಿಲ್ಲ: ಟ್ರಂಪ್‌ ಹೇಳಿಕೆ ನಿರಾಕರಿಸಿದ ಭಾರತ

ಶಾಂತಿ ಮಾತುಕತೆಯಲ್ಲಿ ವ್ಯಾಪಾರದ ಪ್ರಸ್ತಾಪ ಬಂದಿರಲಿಲ್ಲ: ಟ್ರಂಪ್‌ ಹೇಳಿಕೆ ನಿರಾಕರಿಸಿದ ಭಾರತ

0

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆಯಾಗದಿದ್ದರೆ ವ್ಯಾಪಾರ ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎನ್ನುವ ಟ್ರಂಪ್ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ

‘ಆಪರೇಷನ್ ಸಿಂಧೂರ್’ ನಡೆಯುತ್ತಿರುವ ಸಮಯದಲ್ಲಿ ಭಾರತೀಯ ಪ್ರತಿನಿಧಿಗಳು ವಿವಿಧ ಸಂದರ್ಭಗಳಲ್ಲಿ ಅಮೆರಿಕದ ಪ್ರತಿನಿಧಿಗಳೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು, ಆದರೆ ಎಲ್ಲಿಯೂ ವ್ಯಾಪಾರದ ಬಗ್ಗೆ ಉಲ್ಲೇಖ ಬಂದಿರಲಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

“ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮೇ 9ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮೇ 8 ಮತ್ತು 10 ರಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದರು.

ಅದೇ ರೀತಿ, ಮೇ 10 ರಂದು ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತನಾಡಿದರು. ಯಾವುದೇ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರದ ವಿಷಯ ಮಾತುಕತೆಯಲ್ಲಿ ಬಂದಿಲ್ಲ. ಕದನ ವಿರಾಮಕ್ಕೂ ವ್ಯಾಪಾರಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಅಧಿಕೃತ ಮೂಲಗಳು ತಿಳಿಸಿವೆ.

You cannot copy content of this page

Exit mobile version