Wednesday, November 20, 2024

ಸತ್ಯ | ನ್ಯಾಯ |ಧರ್ಮ

“ಇದನ್ನು ಎನ್ಕೌಂಟರ್ ಎನ್ನಲಾಗದು.. ಇದೊಂದು ಹತ್ಯೆ” : ಚಿಂತಕ ಬಂಜಗೆರೆ ಜಯಪ್ರಕಾಶ್

ಉಡುಪಿ ವ್ಯಾಪ್ತಿಯಲ್ಲಿ ಶಂಕಿತ ನಕ್ಸಲ್ ನಾಯಕನ ಎನ್ಕೌಂಟರ್ ನಂತರ ಈಗ ಆ ಕಾರ್ಯಾಚರಣೆ ಬಗ್ಗೆ ಹಲವಷ್ಟು ಅನುಮಾನ ಮೂಡಿಸಿದೆ. ಮೂಲದಿಂದ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ವಿಕ್ರಮ್ ಗೌಡ ಎನ್ಕೌಂಟರ್ ಬಗೆಗಿನ ಅನುಮಾನಗಳ ನಂತರ ಈಗ “ಕೇವಲ ಹೇಳಿಕೆ ಆದರಿಸಿ ಹತ್ಯೆ ಮಾಡಿರುವುದು ಖಂಡನೀಯ” ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ.

“ಈ ಚಳವಳಿಯಲ್ಲಿ ತೊಡಗಿರುವವರು ಇತರ ಅಪರಾಧಿಗಳಂತಲ್ಲ. ಇವರನ್ನು ರಾಜಕೀಯ ಹೋರಾಟಗಾರರು ಎಂದೇ ಪರಿಗಣಿಸಬೇಕಾಗುತ್ತದೆ. ಆದರೆ ಹೋರಾಟಕ್ಕೆ ಅವರು ಆಯ್ಕೆ ಮಾಡಿಕೊಂಡ ಹಾದಿ ಒಪ್ಪತಕ್ಕದ್ದಲ್ಲ. ಹಾಗೆಂದು ಅವರನ್ನು ಈ ರೀತಿ ಕೊಲ್ಲುವ ಕ್ರಮ ಸರಿಯಲ್ಲ. ಸರ್ಕಾರ ತಕ್ಷಣವೇ ಇಂತಹ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು” ಎಂದಿದ್ದಾರೆ.

ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯ ಮಟ್ಟದ ಸಮಿತಿಯ ಸದಸ್ಯರು ಆದ ಬಂಜಗೆರೆ ಜಯಪ್ರಕಾಶ್ ಅವರು ಇದನ್ನು ನಾವು ಹತ್ಯೆ ಎಂದೇ ಪರಿಗಣಿಸಬೇಕಾಗಿದೆ. ನಮ್ಮ ಸಮಿತಿಯಲ್ಲಿರುವ ಸದಸ್ಯರೊಂದಿಗೆ ಹತ್ಯೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಈ ದುರ್ಘಟನೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದ ಸಮಿತಿ ರಚಿಸಿ ತನಿಖೆಗೆ ಆಗ್ರಹಿಸುತ್ತೇವೆ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.

ನಿಮ್ಮ ಹೋರಾಟ ಮತ್ತು ಬೇಡಿಕೆಗಳ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದರೆ ಸಶಸ್ತ್ರ ಹೋರಾಟ ಸಂವಿಧಾನ ಬಾಹಿರ. ಅದನ್ನು ಬಿಟ್ಟು, ಶರಣಾಗಿ. ನಿಮಗೆ ತೊಂದರೆಯಾಗದಂತೆ ನಾವು ಎಚ್ಚರಿಕೆ ವಹಿಸುತ್ತೇವೆ. ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ನಿಮ್ಮ ಹೋರಾಟ ಮುಂದುವರೆಸಿ ಎಂದು ಅಲ್ಲಿ ಉಳಿದಿರುವವರಿಗೆ ತಿಳಿ ಹೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page