Thursday, June 13, 2024

ಸತ್ಯ | ನ್ಯಾಯ |ಧರ್ಮ

ಇದು ಪ್ರಜಾಪ್ರಭುತ್ವ ಮತ್ತು ಜನರ ಹಕ್ಕುಗಳ ಮೇಲಿನ ನೇರ ದಾಳಿ: SDPI ಪ್ರತಿಕ್ರಿಯೆ

PFI ಮತ್ತು ಅದರ ಸಹ ಸಂಘಟನೆಗಳ ಮೇಲೆ ಕಾನೂನು ವಿರೋಧಿ ಚಟುವಟಿಕೆ ನಡೆಸುತ್ತಿದೆಯೆನ್ನುವ ಕಾರಣ ನೀಡಿ ಕೇಂದ್ರ ಸರಕಾರ 5 ವರ್ಷಗಳ ನಿಷೇಧ ಹೇರಿರುವ ಕುರಿತು SDPI ಪಕ್ಷವು ಪ್ರತಿಕ್ರಿಯಿಸಿದ್ದು, ಅದು ಈ ನಿಷೇಧವನ್ನು ಬಿಜೆಪಿ ಆಡಳಿತದ ಅಘೋಷಿತ ತುರ್ತು ಪರಿಸ್ಥಿತಿಯ ಭಾಗವಾಗಿದೆ ಎಂದು ಹೇಳಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸುವ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರವು ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜನರ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಜಿ ಪಕ್ಷದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಆಡಳಿತದ ತಪ್ಪು ಮತ್ತು ಜನವಿರೋಧಿ ನೀತಿಗಳ ವಿರುದ್ಧ ಯಾರು ಮಾತನಾಡುತ್ತಾರೋಅವರೆಲ್ಲರೂ ಬಂಧನ ಮತ್ತು ದಾಳಿಯ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಭಾರತೀಯ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿ ವಾಕ್ ಸ್ವಾತಂತ್ರ್ಯ, ಪ್ರತಿಭಟನೆಗಳು ಮತ್ತು ಸಂಘಟಟಿತರಾಗುವ ಹಕ್ಕುಗಳನ್ನು ಆಡಳಿತವು ನಿರ್ದಯವಾಗಿ ಹತ್ತಿಕ್ಕಿದೆ. ತನಿಖಾ ಸಂಸ್ಥೆಗಳು ಮತ್ತು ಕಾನೂನುಗಳನ್ನು ಆಡಳಿತವು ಪ್ರತಿಪಕ್ಷಗಳನ್ನು ಮೌನಗೊಳಿಸಲು ಮತ್ತು ಭಿನ್ನಾಭಿಪ್ರಾಯದ ಧ್ವನಿಯನ್ನು ವ್ಯಕ್ತಪಡಿಸದಂತೆ ಜನರನ್ನು ಹೆದರಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಎಂ.ಕೆ.ಫೈಜಿ ಹೇಳಿದರು.

ಪತ್ರಿಕಾ ಹೇಳಿಕೆಯ ಪ್ರತಿ

ಸರ್ವಾಧಿಕಾರದ ಆಡಳಿತವನ್ನು ವಿರೋಧಿಸಲು ಮತ್ತು ಭಾರತೀಯ ಸಂವಿಧಾನದ ಪ್ರಜಾಪ್ರಭುತ್ವ ಮತ್ತು ಮೌಲ್ಯಗಳನ್ನು ಉಳಿಸಲು ಎಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದ ಸಮಯ ಇದು ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

***

🔶ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಇದನ್ನೂ ನೋಡಿ: ಆಲ್ಬರ್ಟ್ ಐನ್‌ಸ್ಟಿನ್ ಮಹಾತ್ಮ ಗಾಂಧಿಯವರ ಅಭಿಮಾನಿಯಾಗಿದ್ದರು : Albert Einstein was the fan of Gandhi

E=MC² ಸೂತ್ರವನ್ನು ಕಂಡುಹಿಡಿದ ಆಲ್ಬರ್ಟ್ ಐನ್‌ಸ್ಟಿನ್ ಮಹಾತ್ಮ ಗಾಂಧಿಯವರ ಅಭಿಮಾನಿಯಾಗಿದ್ದರು ಎಂಬುದು ನಿಮಗೆ ಗೊತ್ತೆ? ಪ್ರಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ ಅವರ ಮಾತುಗಳನ್ನು ಕೇಳಿಸಿಕೊಳ್ಳಿ.

https://fb.watch/fPBGNUYrnC/

Related Articles

ಇತ್ತೀಚಿನ ಸುದ್ದಿಗಳು