Tuesday, January 13, 2026

ಸತ್ಯ | ನ್ಯಾಯ |ಧರ್ಮ

ನಮ್ಮ ಕುಟುಂಬಕ್ಕೆ ಕಣ್ಣೀರು ಹಾಕಿಸಿದವರಿಗೆ ಶಾಪ ತಟ್ಟೆ ತಟ್ಟುತ್ತದೆ – ಎಚ್.ಡಿ. ರೇವಣ್ಣ

ಸಕಲೇಶಪುರ: ವಿನಾಕಾರಣ ನಮ್ಮ ಅಪ್ಪಅಮ್ಮನಿಗೆ ಕಣ್ಣೀರು ಹಾಕಿಸಿದವರಿಗೆ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ ರೇವಣ್ಣ ಹೇಳಿದರು. ತಾಲೂಕು ಜೆಡಿಎಸ್ ಘಟಕ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಕುಟುಂಬದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ನಮ್ಮ ಹಿರಿಯರು ಮನಕುಗ್ಗುವಂತಗೆ ಮಾಡಿದ ಜನರಿಗೆ ಶೀಘ್ರದಲ್ಲಿ ಉತ್ತರ ದೊರಕಲಿದೆ.

ಪಕ್ಷ ಸಂಘಟನೆಯನ್ನು ಜೆಡಿಎಸ್‌ಗೆ ಯಾರು ಹೇಳಿಕೂಡಬೇಕಿಲ್ಲ. ಜೆಡಿಎಸ್ ಮುಗಿದೆ ಹೋಗಿದೆ ಎಂಬ ಭಾವನೆ ವಿರೋಧಿಗಳಲ್ಲಿ ನೆಲೆಸಿದೆ. ಆದರೆ, ಶೂನ್ಯದಿಂದ ಸಂಪಾದನೆ ಮಾಡುವುದು ನಮಗೆ ತಿಳಿದಿದೆ. ಸೋಲು ಗೆಲವು ನಮ್ಮ ಪಕ್ಷಕ್ಕೆ ಸಹಜ. 93 ನೇ ವಯಸ್ಸಿನಲ್ಲಿರುವ ದೇವೆಗೌಡರಿರಗೆ ಜಿಲ್ಲೆಯ ಆಗು ಹೋಗುಗಳ ಬಗ್ಗೆ ಅರಿವಿದೆ. ನಮ್ಮ ಪಕ್ಷ ಜಿಲ್ಲೆಯ ಅಭಿವೃದ್ದಿಗೆ ಪ್ರಮಾಣಿಕವಾಗಿ ಶ್ರಮಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮಗ್ರಾಮಗಳಲ್ಲಿ ತಮ್ಮ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ತಿಳಿಸುವ ಕೆಲಸ ಮಾಡಬೇಕಿದೆ.ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಿದ್ದಾರೆ, ವಿಶೇಷವಾಗಿ ಜಿಲ್ಲೆಯಲ್ಲಿ ಹತ್ತಾರು ಮಹತ್ಕಾರ್ಯಗಳನ್ನು ಮಾಡಿದ್ದಾರೆ.

ಹಿಂದೆ ಮಂತ್ರಿಗಳಾಗಿ ತಾಲೂಕಿನ ಅಭಿವೃದ್ದಿಗೆ ನಾನು ನೀಡಿರುವ ಕೊಡುಗೆ ತಾಲೂಕಿನ ಪ್ರತಿ ಜನತೆಗೂ ತಿಳಿದಿದೆ. ಶೈಕ್ಷಣಿಕ,ಆರೋಗ್ಯ, ಇಂಧನ ಹಾಗೂ ಲೋಕಪಯೋಗಿ ಇಲಾಖೆಯಲ್ಲಿ ಹಿಂದೆ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿವೆ. ಇಂತಹ ಅಭಿವೃದ್ದಿ ಕಾರ್ಯವನ್ನು ಜನರಿಗೆ ತಿಳಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು.ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತ ಬಂದಿದೆ. ಏನು ಕೆಲಸವಾಗಿದೆ. ರಾಜ್ಯವನ್ನು ಲೂಟಿ ಮಾಡಲಾಗುತ್ತಿದೆ. ನಮ್ಮ ರಾಜಕೀಯ ಮುಗಿದಿಲ್ಲ ಬನ್ನಿ 2028 ರ ಚುನಾವಣೆಗೆ ನಮ್ಮ ಶಕ್ತಿ ತೋರಿಸುತ್ತೇವೆ. ಮುಂದೆ ನಡೆಯಲಿರುವ ಪಂಚಾಯತ್ ಚುನಾವಣೆಗಳಲ್ಲಿ ನಿಮಗೆ ನಮ್ಮ ತಾಕತ್ತು ತೋರಲಿದ್ದೆವೆ. ನನ್ನ ಮೇಲೆ ನೂರು ಕೇಸು ಹಾಕಿದರು ಹೆದರುವುದಿಲ್ಲ ನಾನು ಏನೇಂದು ತೋರಿಸುತ್ತೇನೆ.ಕನಿಷ್ಠ ವಾರದಲ್ಲಿ ನಾಲ್ಕುದಿನಗಳ ಕಾಲ ಕ್ಷೇತ್ರದಲ್ಲಿ ಕುಮಾರಸ್ವಾಮಿ ಇರಬೇಕು. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಅನ್ಯಾಯವಾಗಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೂಮ್ಮೆ ಕ್ಷೇತ್ರಕ್ಕೆ ಆಗಮಿಸಲಿದ್ದೇನೆ ಎಂದರು.

ಕಳೆದ ಮೂವತ್ತು ವರ್ಷದ ರಾಜಕೀಯದಲ್ಲಿ ಅಲ್ಪಸಂಖ್ಯಾತರಿಗೆ ನಮ್ಮ ಪಕ್ಷದಿಂದ ಯಾವುದೇ ಹಾನಿಯಾಗಿಲ್ಲ.ಅಲ್ಪಸಂಖ್ಯಾತರ ಅಭಿವೃದ್ದಿ ಸಾಕಷ್ಟು ಕೊಡುಗೆಯನ್ನು ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ನೀಡಿದ್ದೇವೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನು ಮಾಡಿದೆ.ಜಾತಿ, ಧರ್ಮದ ತಾರತಮ್ಯವಿಲ್ಲದೆ ನಮ್ಮ ಪಕ್ಷ ಅಧಿಕಾರವನ್ನು ನೀಡಿದೆ. ದೇವೆಗೌಡರ ಮಾತು ಕೇಳದೆ ಅರಸೀಕೆರೆಯಲ್ಲಿ ವ್ಯಕ್ತಿಯೊಬ್ಬರನ್ನು ಶಾಸಕರನ್ನಾಗಿ ಮಾಡಿದ್ದು ಇದರ ಫಲವನ್ನು ಈಗ ಉಣ್ಣುತಿದ್ದೇವೆ. ಅದಕ್ಕೆ ಹೇಳುವುದು ಹಿರಿಯರ ಮಾತು ಕೇಳಬೇಕು ಎಂದು ಎಂದರು.ಜನವರಿ ತಿಂಗಳ 24 ರಂದು ನಡೆಯುವ ಸಮಾವೇಶಕ್ಕೆ ಕನಿಷ್ಠ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ಕರೆತರುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸ ಬೇಕು ಎಂದರು.

ಮಾಜಿ ಸಚಿವ ಹಾಗೂ ಸಚಿವ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಜನವರಿ 24 ರ ಕಾರ್ಯಕ್ರಮದ ಅಂಗವಾಗಿ ಇದು ಪೂರ್ವಭಾವಿ ಸಭೆಯಾಗಿದೆ. ಬೇಕು ಅಂತಲೇ ಕಾಂಗ್ರೆಸ್ ನವರು ಹಾಸನದಲ್ಲಿ ಸಮಾವೇಶ ಮಾಡಿದ್ದಾರೆ. ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಏನು ಅಭಿವೃದ್ದಿ ಮಾಡಿದೆ. ಕಚೇರಿಗಳು ದಲ್ಲಾಳಿಗಳ ಅಡ್ಡೇಯಾಗಿದೆ. ಅಧಿಕಾರಿಗಳು ಜನರ ಮಾತು ಕೇಳುತ್ತಿಲ್ಲ, ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ, ಮೊದಲ ಎರಡು ಸ್ಥಾನದಲ್ಲಿ ಜೆಡಿಎಸ್ ಬಿಜೆಪಿ ಇದೆ. ದೇಶದಲ್ಲಿ ರಾಜ್ಯದಲ್ಲಿ ನಿಜವಾದ ಅಹಿಂದ ನಾಯಕರು ದೇವೇಗೌಡರು, ಶಿಕ್ಷಣ , ಆರೋಗ್ಯ, ಉದ್ಯೋಗದಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ.

ತಾಲೂಕಿನಲ್ಲಿ 145 ಬೂತ್ ಗಳಿದ್ದು 278 ಗ್ರಾಮಗಳಿದೆ. ಪ್ರತಿ ಗ್ರಾಮದಿಂದ ಕಾರ್ಯಕರ್ತರನ್ನು ಸಮಾವೇಶಕ್ಕೆ ಹೊರಡಿಸೋಣ, ಎಂದರು.

ಈ ಸಂಧರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಲ್ ಸೋಮಶೇಖರ್, ಮಾಜಿ ಜಿ.ಪಂ ಸದಸ್ಯರಾದ ಸುಪ್ರದೀಪ್ತ ಯಜಮಾನ್, ಚಂಚಲಾ ಕುಮಾರಸ್ವಾಮಿ, ಉಜ್ಮಾ ರುಜ್ವಿ, ಪಕ್ಷದ ಮುಖಂಡರುಗಳಾದ ಸಚ್ಚಿನ್ ಪ್ರಸಾದ್, ಸ.ಬಾ ಭಾಸ್ಕರ್, ಬೆಕ್ಕನಹಳ್ಳಿ ನಾಗರಾಜ್, ಕುಮಾರಸ್ವಾಮಿ, ಜಾತಹಳ್ಳಿ ಪುಟ್ಟಸ್ವಾಮಿ ಗೌಡ, ಸಂತಹಳ್ಳಿ ತಮ್ಮೇಗೌಡ, ಮುಕೇಶ್ ಜೈನ್, ಪ್ರಜ್ವಲ್, ಕವನ್, ಇಬ್ರಾಹಿಂ, ಜಾಕೀರ್, ಅಲ್ತಾಫ್, ಅಸ್ಲಾಂ, ಮುಂತಾದವರು ಹಾಜರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page