Home ಅಪರಾಧ Instagramನಲ್ಲಿ ಲವ್ ಮಾಡುವವರೇ ಹುಷಾರ್ – Divorce ಕೊಡಿಸಿ ಸಾವಿಗೆ ಕಾರಣನಾಗಿದ್ದ ಪ್ರಿಯತಮ ಅರೆಸ್ಟ್

Instagramನಲ್ಲಿ ಲವ್ ಮಾಡುವವರೇ ಹುಷಾರ್ – Divorce ಕೊಡಿಸಿ ಸಾವಿಗೆ ಕಾರಣನಾಗಿದ್ದ ಪ್ರಿಯತಮ ಅರೆಸ್ಟ್

ಧಾರವಾಡ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಕೆಲವರು ತಮ್ಮ ಜೀವನ ಹಾಗೂ ಜೀವವನ್ನೇ ಬಲಿ ಕೊಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಜನ, ವ್ಯಕ್ತಿಗಳನ್ನು ನಂಬಿ ಹಿಂದೆ ಹೋದ ಅದೆಷ್ಟೋ ಜನ ಜೀವನದಲ್ಲಿ ಅತಂತ್ರ ಆಗ್ತಿದ್ದಾರೆ. ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ಇನ್ಸ್ಟಾಗ್ರಾಂನಲ್ಲಿ ಪ್ರೀತಿ ಮಾಡಿ ಪ್ರಿಯಕರನನ್ನು ನಂಬಿ ಬಂದಿದ್ದಕ್ಕೆ ಮಸಣದ ದಾರಿ ಹಿಡಿದಿದ್ದಳು.

ಇನ್ಸ್ಟಾಗ್ರಾಂ ಲವ್​​ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಗೃಹಿಣಿಯ ಪ್ರಿಯಕರನನ್ನು ಧಾರವಾಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಧಾರವಾಡದ ಶಿವಳ್ಳಿ ಗ್ರಾಮದ ವಿಜಯ್ ನಾಯ್ಕರ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಶ್ವೇತಾ ಡಿವೋರ್ಸ್​ಗೆ ಕಾರಣನಾಗಿದ್ದ. ಶ್ವೇತಾ ಪತಿಯನ್ನು ಬಿಟ್ಟು ಬಂದು ಧಾರವಾಡದ ಶ್ರೀನಗರದಲ್ಲಿ ರೂಮ್ ಮಾಡಿಕೊಂಡಿದ್ದಳು. ಕಳೆದ ಎರಡು ದಿನಗಳ ಹಿಂದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಶ್ವೇತಾ ನೇಣಿಗೆ ಶರಣಾಗುವ ಮುನ್ನ, ನನ್ನ ಸಾವಿಗೆ ನಾನೇ ಕಾರಣ ಎಂದು ಕೈಯಲ್ಲಿ ಬರೆದುಕೊಂಡಿದ್ದಳು. ಆಕೆಯನ್ನು ಆರೋಪಿ ವಿಜಯ್ ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ವಿಜಯ್ ಕುಟುಂಬ ಒಪ್ಪದ ಕಾರಣ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಶ್ವೇತಾ ಕುಟುಂಬದವರು ಧಾರವಾಡ ಉಪನಗರ ಠಾಣೆಯಲ್ಲಿ ವಿಜಯ್ ನಾಯ್ಕರ್ ವಿರುದ್ಧ ದೂರು ದಾಖಲಿಸಿದ್ದರು

You cannot copy content of this page

Exit mobile version