Saturday, June 15, 2024

ಸತ್ಯ | ನ್ಯಾಯ |ಧರ್ಮ

ಪರ್ತಕರ್ತರಿಗೆ ಜೀವ ಬೆದರಿಕೆ: ರಕ್ಷಣೆ ಕೋರಿ ತಹಶೀಲ್ದಾರರಿಗೆ ಮನವಿ

ಮುದ್ದೇಬಿಹಾಳ: ಮತಕ್ಷೇತ್ರದ ಶಾಸಕ ಎ.ಎಸ್‌.ಪಾಟೀಲ ಎಂಬಾತ ಪತ್ರಿಕಾ ವರದಿಯೊಂದನ್ನು ಆಧರಿಸಿ ಪತ್ರಕರ್ತರೊಬ್ಬರಿಗೆ ಅವಾಚ್ಯಾ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

ತಾಲ್ಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಾದ ತಂಗಡಗಿ, ಕುಂಚಗನೂರು, ಕಮಲದಿನ್ನಿ, ಗಂಗೂರು ಸೇರಿದಂತೆ ಇತರೇ ಗ್ರಾಮಗಳಲ್ಲಿ ಭಾರೀ ಮಳೆಯಾಗಿರುವ ಹಿನ್ನಲೆಯಲ್ಲಿ ಗ್ರಾಮಗಳಿಗೆ ನೀರುನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿದ್ದು, ನೆರೆಹಾವಳಿಯಿಂದಾಗಿ ರಸ್ತೆಗಳು ಹಾಳಾಗಿವೆ.

ಈ ಕುರಿತು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದನ್ನು ಸ್ವತಃ ಅಲ್ಲಿನ ಜನರೇ ಮಾಧ್ಯಮಕ್ಕೆ ವರದಿ ನೀಡಿದ್ದಾರೆ. ಈ ವೇಳೆ ಪತ್ರಕರ್ತರಾದ ನಾರಾಯಣ ಮಾಯಾಚಾರಿ ಅವರು ಕ್ಷೇತ್ರದ ಜನರ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ವರದಿ ಮಾಡಿದ್ದರು. ವರದಿಯನ್ನು ಯಾಕೇ ಮಾಡಿದ್ದೀರಾ? ಎಂದು ಶಾಸಕರು ಪ್ರಶ್ನಿಸಿ ಧಮಕಿ ಹಾಕಿದಲ್ಲದೆ, ಜೀವ ಬೇದರಿಕೆ ಹಾಕಿದ್ದಾರೆ.

ಈ ಹಿನ್ನಲೆಯಲ್ಲಿ ತಾಲ್ಲೂಕಿನ ಪತ್ರಕರ್ತರಿಗೆ ರಕ್ಷೆಣೆ ನೀಡಬೇಕು ಹಾಗೂ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಅನುವು ಮಾಡಿಕೊಡಬೇಕು ಮತ್ತು ದಬ್ಬಾಳಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಪತ್ರಕರ್ತರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು