Sunday, June 23, 2024

ಸತ್ಯ | ನ್ಯಾಯ |ಧರ್ಮ

ಮಣಿಪುರ ಹಿಂಸಾಚಾರ: ಮೂವರು ಯುವಕರ ಶವಗಳು ಪತ್ತೆ!

ಇಂಫಾಲ್: ಜನಾಂಗೀಯ ಹಿಂಸಾಚಾರ ಹೆಚ್ಚುತ್ತಿರುವ ಮಣಿಪುರದ ಉಖ್ರುಲ್ ಜಿಲ್ಲೆಯ ಕುಕಿ ಥೋವೈ ಗ್ರಾಮದಲ್ಲಿ ಅಗಸ್ಟ್‌ 18, ಶುಕ್ರವಾರದಂದು ನಡೆದ ಭಾರೀ ಗುಂಡಿನ ದಾಳಿಯ ನಂತರ ಮೂವರು ಯುವಕರ ಶವಗಳು ಪತ್ತೆಯಾಗಿವೆ.

ಲಿಟನ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಮುಂಜಾನೆ ಭಾರೀ ಗುಂಡಿನ ಸದ್ದು ಕೇಳಿಬಂದ ಹಿನ್ನಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರು 24 ರಿಂದ 35 ವರ್ಷದೊಳಗಿನ ಮೂವರು ಯುವಕರ ಶವಗಳು ಪತ್ತೆಮಾಡಿದ್ದಾರೆ.

ಮೂವರ ಯುವಕರ ದೇಹಗಳಲ್ಲಿ ಹರಿತವಾದ ಚಾಕುಗಳನ್ನು ಬಳಸಿ ಮಾಡಿದ ಗಾಯಗಳಿದ್ದವು ಹಾಗೂ ಅವರ ಕೈಕಾಲುಗಳನ್ನು ಸಹ ಕತ್ತರಿಸಲಾಗಿತ್ತು.

ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾಗಿತ್ತು. ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೆಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಿ ಗುಡ್ಡಗಾಡು ಜಿಲ್ಲೆಗಳಲ್ಲಿ ಇತರ ಬುಡಕಟ್ಟು ಸಮುದಾಯಗಳು ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ (Tribal Solidarity March’ ಆಯೋಜಿಸಿದ್ದವು.

ಮಣಿಪುರದ ಜನಸಂಖ್ಯೆಯಲ್ಲಿ ಸುಮಾರು ಶೇಕಡಾ 53 ರಷ್ಟಿರುವ ಮೈತೆಯಿ ಇಂಫಾಲ್ ಕಣಿವೆಯ ಪ್ರಬಲ ಸಮುದಾಯ. ಬೆಟ್ಟಗಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಾದ ನಾಗಾ ಮತ್ತು ಕುಕಿಗಳು ಒಟ್ಟು ಜನಸಂಖ್ಯೆಯ ಶೇಕಡಾ 40 ಇದ್ದಾರೆ.

Related Articles

ಇತ್ತೀಚಿನ ಸುದ್ದಿಗಳು