Friday, August 1, 2025

ಸತ್ಯ | ನ್ಯಾಯ |ಧರ್ಮ

ಕರ್ನಾಟ ಬಲ – 1: ತ್ರಿಭಾಷಾ ನೀತಿ – ಕನ್ನಡಿಗರ ಮೇಲಿನ ಶಾಪ

“ಭಾಷೆ ಎಂದರೆ ಯಾವುದೇ ಜನರ ಸಾಂಸ್ಕೃತಿಕ ಅಸ್ತಿತ್ವ, ಅವರ ಆತ್ಮಭಾವನೆಗಳಿಗೆ ನೇರವಾಗಿ ಸಂಬಂಧ ಹೊಂದಿರುವ ಶಕ್ತಿಯ ತಾತ್ಸಾರ. ಅದನ್ನು ಹತ್ತಿಕ್ಕುವ ಪ್ರಯತ್ನವೇ ಒಂದು ಸಮೂಹದ ವ್ಯಕ್ತಿತ್ವದ ಮೇಲೆ ಬಲಾತ್ಕಾರ..” ಯುವ ಬರಹಗಾರ ಲಿಖಿತ್ ಹೊನ್ನಾಪುರ ಅವರ ಬರಹದಲ್ಲಿ

ಇತ್ತೀಚಿನ ಕಾಲದಲ್ಲಿ ಭಾರತದಲ್ಲಿ ನಡೆಯುತ್ತಿರುವ ತ್ರಿಭಾಷಾ ನೀತಿಯ ಅಮಲಿನಿಂದಾಗಿ, ವಿಶೇಷವಾಗಿ ಕರ್ನಾಟಕದ ಕನ್ನಡಿಗರ ಜೀವನ ಶೋ ಷಣೆಗೆ ಒಳಗಾಗುತ್ತಿದೆ. ಈ ನೀತಿ ಶಾಲಾ ಮಕ್ಕಳ ಶಿಕ್ಷಣದಿಂದ ಹಿಡಿದು, ಉದ್ಯ ೋಗದ ಹಂತದವರೆಗೆ ಬಹುಮಟ್ಟಿನಲ್ಲಿಹಾನಿಕಾರಕವಾಗಿದೆ.

ಭಾರತವನ್ನು ಒಗ್ಗೂಡಿಸಲು ಹಿಂದಿ ಅಥವಾ ಭಾಷೆಯ ಮೂಲಕವೇ ಅನಿವಾರ್ಯವ? ಹಾಗೆ ಮಾಡೋದೇ ಆದ್ರೆ ನಮ್ಮ ಭಾರತದಲ್ಲಿ ಹಲವಾರು ಸಾವಿರಾರು ವರ್ಷಗಳ ಹಿಂದಿನ ಭಾಷೆಗಳಿವೆ ಕನ್ನಡ,ತೆಲುಗು, ತಮಿಳು, ಭೋಜ್ಪುರಿ ಮೈಥಿಲಿ ಎಲ್ಲಾ ಹಳೆಯ ಭಾಷೆಗಳನ್ನು ಬಿಟ್ಟು ಇತ್ತೀಚೆಗೆ 150 ವರ್ಷಗಳ ಹಿಂದೆ ಕೃತಕವಾಗಿ ನಿರ್ಮಾಣವಾದ ಭಾಷೆ ಹಿಂದಿಯನ್ನ ಒಕ್ಕೂಟ ಭಾರತಕ್ಕೆ ಕೊಂಡೊಯ್ಯುವುದೇ ಮೊದಲ ತಪ್ಪು.

ಹಿಂದಿಯನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವ ಜನರು ಉತ್ತರ ಭಾರತದ ಮೇಲೆ 10ನೆ ಶತಮಾನದ ನಂತರ ಆದ ಪರಕೀಯರ ದಾಳಿಯನ್ನು ಒಪ್ಪಿಕೊಂಡಂತೆ ಅದಕ್ಕೆ ಕಾರಣ ಹಿಂದಿಯ ಮೂಲ ಇರೋದೇ ಅಲ್ಲಿ.. ಹತ್ತನೇ ಶತಮಾನ ನಂತರ ಬಂದು ಉತ್ತರ ಭಾರತ ಮೇಲೆ ಗಜಿನಿ, ಘೋರಿ, ಲೋಧಿ ಸಾಮ್ರಾಜ್ಯಗಳು, ಖಿಲ್ಜಿ, ತುಗ್ಲಕ್, ಪರ್ಷಿಯನ್ ಇನ್ಫ್ಲುಎನ್ಸರ್ ಅವರು ಬಂದ ನೆಲೆಗಳು ಕೆಲವರು ಟರ್ಕಿನಿಂದ ಬರುತ್ತಾರೆ. ಕೆಲವರು ಅಫ್ಘಾನಿಸ್ತಾನ್ ನಿಂದ ಬರ್ತಾರೆ ಇನ್ನೂ ಕೆಲವರು ಮಂಗೋಲಿಯದಿಂದ ಬರ್ತಾರೆ. ಇವರೆಲ್ಲಉತ್ತರ ಭಾರತ ಡೆಲ್ಲಿ ಸೆಂಟ್ರಿಕ್ ಮಾಡಿಕೊಂಡು ಆಡಳಿತ ಮಾಡೋ ಸಂದರ್ಭದಲ್ಲಿ. ಹೊರಗಡೆಯಿಂದ ತಂದಂತಹ ಒಂದು ಭಾಷೆ ಇನ್ಫ್ಲುಎನ್ಸರ್ ಆ ಭಾಷೆನ ಇಂಪ್ಲಿಮೆಂಟ್ ಮಾಡಿ ಆ ಭಾಷೆನ ಹಿಂದುಸ್ತಾನಿ ಎಂದು ಕರೆಯುತ್ತಾರೆ.

ಹಿಂದಿ ಎಂಬ ಭಾಷೆಯ ಹುಟ್ಟು ಭಾರತದಲ್ಲಿ ನೆಲೆಸಿರುವ ಪ್ರಾಚೀನ ಭಾಷೆಗಳಂತೆ ಸ್ವಾಭಾವಿಕವಾಗಿ ಬೆಳೆಯದೇ, ಹೊರಗಿನ ಆಕ್ರಮಣಕಾರರಿಂದ ರೂಪುಗೊಂಡದ್ದಾಗಿದೆ. ಮೊಗಲ್ ಆಡಳಿತದ ಸಮಯದಲ್ಲಿ ಪರ್ಷಿಯನ್, ಅರೇಬಿಕ್ ಮತ್ತು ಸ್ಥಳೀಯ ಭಾಷೆಗಳ ಮಿಶ್ರಣದಿಂದ ಹುಟ್ಟಿದ ‘ಹಿಂದುಸ್ತಾನಿ’ ಎಂಬ ಭಾಷೆ ಆಡಳಿತ ಭಾಷೆಯಾಗಿತ್ತು. ಅದನ್ನು ದೇವನಾಗರಿ ಲಿಪಿಯಲ್ಲಿ ಬರೆದು ‘ಹಿಂದಿ’ ಎಂದೂ, ಅರೇಬಿಕ್ ಲಿಪಿಯಲ್ಲಿ ಬರೆದು ‘ಉರ್ದು’ ಎಂದೂ ಕರೆಯಲಾಯಿತು.

ಹೀಗೆ ನಿರ್ಮಿತವಾದ ಹಿಂದಿಯನ್ನು ಭಾರತದ ರಾಷ್ಟ್ರಭಾಷೆ ಎಂದು ಒಪ್ಪಿಸುವದು ಬಹುದೊಡ್ಡ ರಾಜಕೀಯ ಹೀನಾಯತನ. ಇಂಥ ಭಾಷೆಯನ್ನು ಬಲವಂತವಾಗಿ ಎಲ್ಲರಿಗೂ ಕಲಿಸುವುದು ದೇಶದ ಇತಿಹಾಸ ಮತ್ತು ಭಾಷಿಕ ನ್ಯಾಯಕ್ಕೆ ತಲೆಬಾಗುವುದೇ ಆಗುತ್ತದೆ.

ಹಿಂದಿ ಅನ್ನುವಂತಹ ಭಾಷೆಯನ್ನು ಈ ರೀತಿಯಾಗಿ ಸೃಷ್ಟಿ ಮಾಡುತ್ತಾರೆ. ಉತ್ತರ ಭಾರತದಲ್ಲಿ ನೂರಾರು ಭಾಷೆಗಳಿವೆ. ಆದರೆ ಮೊಗಲರ ಆಡಳಿತ ಸಮಯದಲ್ಲಿಅಫೀಶಿಯಲ್ ಸ್ಟೇಟಸ್ ಪಡೆದುಕೊಳ್ಳುತ್ತದೆ ನಿಧಾನವಾಗಿ ಬೇರೆ ಬೇರೆ ಭಾಷೆಗಳನ್ನ ನುಂಗಲಿಕೆ ಶುರು ಮಾಡುತ್ತೆ.

ಒಕ್ಕೂಟ ಭಾರತದಲ್ಲಿ ಹಿಂದೆ ಮೊಗಲರು ಆಡಳಿತ ಮಾಡಿದ ಭಾಷೆಯನ್ನೇ ಯೂನಿಫಿಕೇಶನ್ ಮಾಡ್ತೀವಿ ಅಂದದ್ದು ದೊಡ್ಡತಪ್ಪು. ನೀನು ನಿಜವಾಗಲೂ ದೇಶಭಕ್ತನಾಗಿದ್ರೆ ನಿನ್ನ ದೇಶದ ಮೇಲೆ ಆಕ್ರಮಣ ಮಾಡಿದವರ ಭಾಷೆಯನ್ನ ಬಳಸಲಿಕ್ಕೆ ಇಷ್ಟ ಪಡ್ತಿರಾ, ಇದು ಗುಲಾಮಗಿರಿ ಸಂಕೇತ.

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದೇಶವನ್ನು ಒಗ್ಗೂಡಿಸಲು ಹಿಂದಿಯನ್ನು ಕೇಂದ್ರ ಭಾಷೆ ಮಾಡೋಣ ಎಂಬ ಅಭಿಪ್ರಾಯ ಗಾಂಧೀಜಿಯವರಿಂದ ಮುನ್ನಡೆಸಲಾಯಿತು. ಅವರ ನಿಸ್ವಾರ್ಥ ಚಿಂತನೆ ಒಗ್ಗೂಡಿಕೆಗೆ ದಾರಿ ನೀಡಿದರೂ, ಭಾಷಾ ವಿವಿಧತೆಯ ಬಗ್ಗೆ ಅಲ್ಲಿ ಎಚ್ಚರಿತೆಂಬುದರ ಸಾಕ್ಷ್ಯವಿಲ್ಲ. ತಮಿಳುನಾಡಿನಲ್ಲಿ ಈ ನೀತಿಯ ವಿರುದ್ಧ ಜನತೆ ಎದ್ದರು, ಭಾಷಾ ಹಕ್ಕಿಗಾಗಿ ಹೋರಾಟವಾಯಿತು. ಹಲವರು ಪ್ರಾಣತ್ಯಾಗ ಮಾಡಿದರು. ಆದರೆ ಕರ್ನಾಟಕದಲ್ಲಿ ಅಂತಹ ಸಂಘಟಿತ ಭಾಷಾ ಚಳುವಳಿ ಆಗದ ಕಾರಣ, ಹಿಂದಿಯ ಹೇರಿಕೆ ಸುಲಭವಾಗಿ ನಡೆಯಿತು. ಈ ನಿಭಾಯಿಸದ ವಿರುದ್ಧತೆ ಇಂದಿನ ದಿನಗಳಲ್ಲಿಮಕ್ಕಳ ಭವಿಷ್ಯವನ್ನೇ ನಾಶ ಮಾಡುತ್ತಿದೆ.

ತ್ರಿಭಾಷಾ ನೀತಿಯ ಹೆಸರಿನಲ್ಲಿ ಕನ್ನಡದ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಜೊತೆಗೆ ಹಿಂದಿಯನ್ನೂ ಕಲಿಯುವ ಕಡ್ಡಾಯವಿದೆ. ಆದರೆ ಉತ್ತರ ಭಾರತದಲ್ಲಿ ಧ್ವಿಭಾಷಾ ನೀತಿಯಂತೆ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಕಲಿಸುತ್ತಾರೆ. ಇಲ್ಲಿ ದಕ್ಷಿಣ ಭಾರತೀಯ ಭಾಷೆಗಳಿಗೆ ಯಾವುದೇ ಸ್ಥಾನವಿಲ್ಲ. ಇದು ಸಾಫಾಗಿ ಭಾಷಾ ಅಸಮಾನತೆ. ಕನ್ನಡದ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಒತ್ತಡ, ಹೆಚ್ಚು ಪಠ್ಯಭಾರ, ಮತ್ತುಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಹಿಂದುಳಿಯುವ ಸ್ಥಿತಿ ನಿರ್ಮಾಣವಾಗಿದೆ.

ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯ ಅಂಕಿ ಅಂಶವನ್ನೇ ನೋಡಿ ಸುಮಾರು 1,41,000 ಕನ್ನಡದ ಮಕ್ಕಳು ಹಿಂದಿ ವಿಷಯದಲ್ಲಿ ಫೇಲ್ ಆಗಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 91,000. ಇದು ಚಿಂತಾಜನಕ ಅಂಶ. ಈ ಮಕ್ಕಳ ಪೈಕಿ ಹಲವರು ಇತರ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೂ, ಹಿಂದಿಯ ಕಾರಣದಿಂದ ತಮ್ಮ ವಿದ್ಯಾ ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ತಮಿಳುನಾಡಿನಲ್ಲಿ ಪಾಸಿಂಗ್ ಪರ್ಸೆಂಟೇಜ್ 94% ಇರ್ತದೆ, ಆದರೆ ಕರ್ನಾಟಕದಲ್ಲಿ ಕೇವಲ 64%. ಇದೊಂದು ಉಗ್ರವಾದ ಭಾಷಾ ದೌರ್ಜನ್ಯವಲ್ಲದೆ ಬೇರೆ ಏನು?

ಇನ್ನೊಂದು ಗಂಭೀರ ಪರಿಣಾಮ ಎಂದರೆ ವಲಸೆ. ತಮಿಳುನಾಡಿಗೆ ವಲಸೆ ಹೋಗುವವರು ಭಾಷಾ ಅಡಚಣೆಯಿಂದ ಅಂಜುತ್ತಾರೆ. ಆದರೆ ಕರ್ನಾಟಕದಲ್ಲಿ ಜನತೆ ಹಿಂದಿಯಲ್ಲಿ ಮಾತನಾಡುವ ಸಹಜತನವನ್ನು ತೋರಿಸುತ್ತಾರೆ. ಈ ಕಾರಣದಿಂದ ಉತ್ತರ ಭಾರತೀಯರು ಇಲ್ಲಿಗೆ ಸುಲಭವಾಗಿ ವಲಸೆ ಆಗುತ್ತಾರೆ. ಇದರಿಂದ ಕನ್ನಡ ಭಾಷೆಯ ವ್ಯವಹಾರಿಕ ಬಳಕೆ, ಸ್ಥಳೀಯ ಉದ್ಯೋಗ ಅವಕಾಶಗಳು ಎಲ್ಲವೂ ಕಮ್ಮಿಯಾಗುತ್ತವೆ. ಉದ್ಯೋಗ ಕ್ಷೇತ್ರಗಳು ಹಿಂದಿ ಅಧೀನವಾಗುತ್ತವೆ. ಸರ್ಕಾರದ ಕಚೇರಿಗಳು, ಖಾಸಗಿ ಸಂಸ್ಥೆಗಳು ಹಿಂದಿಯನ್ನೇ ಮೂಲ ಭಾಷೆಯಂತೆ ಬಳಸುತ್ತಿವೆ.

ಇದು ಕನ್ನಡಿಗರ ಹಕ್ಕಿಗೆ ವಿರೋಧವಾಗಿ ನಡೆಯುವ ದೌರ್ಜನ್ಯವಾಗಿದೆ. ಇದನ್ನೆಲ್ಲಾ ಬದಲಾಯಿಸಲು ಇಂದಿಗೂ ಸಾಧ್ಯ. ದ್ವಿಭಾಷಾ ನೀತಿ. ಕನ್ನಡ ಮತ್ತು ಇಂಗ್ಲಿಷ್ ಎನ್ನುವುದು ಇಂದಿನ ತುರ್ತು. ಹಿಂದಿಯನ್ನು ಕಡ್ಡಾಯ ಮಾಡುವುದು ಶೈಕ್ಷಣಿಕ ಮೋಸವಷ್ಟೇ ಅಲ್ಲ, ಸಾಮಾಜಿಕ ಅನ್ಯಾಯವೂ ಆಗಿದೆ. ಈ ತ್ರಿಭಾಷಾ ನೀತಿ ಸಾವಿರಾರು ಮಕ್ಕಳ ಭವಿಷ್ಯವನ್ನು ನಾಶಮಾಡುತ್ತಿದೆ. ಒತ್ತಡ, ಅರ್ಥವಿಲ್ಲದ ಪಠ್ಯಭಾರ, ಮೌಲ್ಯಮಾಪನದ ವೈಷಮ್ಯ ಎಲ್ಲವೂ ಕನ್ನಡಿಗರ ಮೇಲೆ ಆವೃತ್ತಿಯಾಗುತ್ತಿದೆ.

ಇದಕ್ಕೆ ಪರಿಹಾರವೆಂದರೆ ಡಾ. ಸರೋ ಜಿನಿ ಮಹಿಷಿ ವರದಿಯನ್ನು ತಕ್ಷಣ ಜಾರಿಗೊ ಳಿಸಬೇಕು. ರಾಜ್ಯದಲ್ಲಿಸರ್ಕಾರಿ, ಖಾಸಗಿ, ಬ್ಯಾಂಕ್ ಮತ್ತು ಕೇಂದ್ರ ಕಚೇರಿಗಳಲ್ಲಿಶಕಡ್ಡಾಯವಾಗಿ ಕನ್ನಡ ಬಳಸುವ ವ್ಯವಸ್ಥೆ ಕಲ್ಪಿಸಬೇಕು. 2022ರಲ್ಲಿ ಅಂಗೀಕರಿಸಲಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಕೂಡಲೇ ಜಾರಿಗೆ ತರಬೇಕು.

ಈ ನಿಯಮಗಳು ಅನುಷ್ಟಾನಗೊಂಡಾಗ ಮಾತ್ರ ಕನ್ನಡಿಗರು ತಮ್ಮ ನೆಲದಲ್ಲಿ ತಾವು ಭದ್ರತೆಯಿಂದ ಬದುಕಬಹುದು. ಇಲ್ಲವೇ ತ್ರಿಭಾಷಾ ನೀತಿಯ ಹೆಸರಿನಲ್ಲಿ ಹಿಂದಿಯಲ್ಲಿ ಸೋಲುತ್ತಿರುವ ಲಕ್ಷಾಂತರ ಮಕ್ಕಳ ದುಃಖದ ಕಥೆ ಮುಂದೆಯೂ ಮುಂದುವರಿಯುತ್ತದೆ. ಕನ್ನಡವೇ ನಮ್ಮ ಅಸ್ತಿತ್ವದ ಶಕ್ತಿ, ಅದರ ಮೇಲೆ ಬಲಾತ್ಕಾರ ನಡೆಯುವುದನ್ನು ತಡೆಗಟ್ಟಲು ಪ್ರತಿಯೊಬ್ಬ ಕನ್ನಡಿಗನು ಎಚ್ಚರಿಕೆಯಿಂದ ಹೋರಾಡಬೇಕು.

ಕನ್ನಡವೇ ಕರ್ನಾಟಕದ ಗುರುತು, ದ್ವಿಭಾಷಾ ನೀತಿಯೇ ಇಂದಿನ ತುರ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page