Wednesday, June 19, 2024

ಸತ್ಯ | ನ್ಯಾಯ |ಧರ್ಮ

ತೃತೀಯ ಲಿಂಗಿಗಳಿಗೆ ರೂಪಿಸಿದ ಯೋಜನೆ ಯಾವುದು?: ಕಾಂಗ್ರೆಸ್

ಬೆಂಗಳೂರು : ಜೋಗಪ್ಪ ಸಮುದಾಯ ಹಾಗೂ ತೃತೀಯ ಲಿಂಗಿಗಳ ಉನ್ನತ ಶಿಕ್ಷಣಕ್ಕೆ ವಿಶೇಷ ವಿದ್ಯಾರ್ಥಿ ವೇತನ ನೀಡುತ್ತೇವೆ ಎಂದು ಬಿಜೆಪಿ ಹೇಳಿತ್ತು. ಆದರೆ ಅದ್ಯಾವುದೂ ಇನ್ನು ಕಾರ್ಯರೂಪಕ್ಕೆ ಬರದೆ ಕೇವಲ ಮಾತುಗಳಲ್ಲೆ ಮುಚ್ಚಿಹೋಗಿದ್ದು, ಕಾಂಗ್ರೆಸ್‌ ಈ ಕುರಿತು ಬಿಜೆಪಿಗೆ ಪ್ರಶ್ನಿಸಿದೆ.

ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿರುವುದರಿಂದ, ಶಿಕ್ಷಣ ಇಲಾಖೆಯು ಶಾಲಾ ಮಕ್ಕಳ ಪೋಷಕರಿಂದ ತಿಂಗಳಿಗೆ 100 ರೂಪಾಯಿ ಪಡೆಯುವ ಹಂತಕ್ಕೆ ತಲುಪಿದೆ. ಈ ರೀತಿ ಶಾಲಾ ಮಕ್ಕಳಿಂದಲೇ ಹಣ ತೆಗೆದುಕೊಳ್ಳುವವರ ಕೆಳ ಮಟ್ಟದಲ್ಲಿರುವ ಸಮುದಾಯದವರ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಕೊಡ್ತಾರಾ? ಎನ್ನುವ ರೀತಿಯಲ್ಲಿ ರಾಜ್ಯ ಕಾಂಗ್ರೆಸ್‌ ಬಿಜೆಪಿ ಯ ವಿರುದ್ದ ಕಿಡಿಕಾರಿದೆ.

ಸಮಾಜದ ಕೆಲವು ಸಮುದಾಯಗಳಲ್ಲಿ ಈಗಲೂ ಲೈಂಗಿಕ ಕಾರ್ಯಕರ್ತೆಯರಾಗಿ ವೃತ್ತಿ ಮಾಡಿ ಜೀವನ ಸಾಗಿಸುತ್ತಿರುವವರು ಬಹಳಷ್ಟು ಜನ ಇದ್ದಾರೆ. ಅಂತಹ ಸಮುದಾಯದವರನ್ನು ಸಮಾಜದ ಜನರು ಅತ್ಯಂತ ಹೀನಾಯವಾಗಿ ಪರಿಗಣಿಸಿ ಕೇವಲವಾಗಿ ನೋಡುತ್ತಿದ್ದಾರೆ. ಅವರಿಗೆ ಯಾವುದೇ ಶಿಕ್ಷಣ ಉದ್ಯೋಗ ಅವಕಾಶಗಳಂತೂ ಇಲ್ಲವೇ ಇಲ್ಲ ಎನ್ನುವ ಪರಿಸ್ಥಿತಿ ಕೆಲವು ಸಮುದಾಯಗಳಿವೆ.

ಈ ಕುರಿತು ಟ್ವೀಟ್‌ ಮಾಡಿರುವ  ಕಾಂಗ್ರೆಸ್‌, ʼಜೋಗಪ್ಪ ಸಮುದಾಯ ಹಾಗೂ ತೃತೀಯ ಲಿಂಗಿಗಳ ಉನ್ನತ ಶಿಕ್ಷಣಕ್ಕೆ ವಿಶೇಷ ವಿದ್ಯಾರ್ಥಿ ವೇತನ ನೀಡುತ್ತೇವೆ ಎಂದಿತ್ತು ಬಿಜೆಪಿ. ತೃತೀಯ ಲಿಂಗಿಗಳಿಗೆ ರೂಪಿಸಿದ ಯೋಜನೆ ಯಾವುದು? ಎಲ್ಲಿ ವಿದ್ಯಾರ್ಥಿ ವೇತನ? ವಿದ್ಯಾರ್ಥಿಗಳಿಂದಲೇ 100 ರೂಪಾಯಿ ಭಿಕ್ಷೆ ಬೇಡುವ ಸರ್ಕಾರಕ್ಕೆ ವಿದ್ಯಾರ್ಥಿ ವೇತನ ನೀಡುವ ಯೋಗ್ಯತೆ ಇದೆಯೇ?ʼ ಎಂದು ಪ್ರಶ್ನೆ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು