Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಹುಲಿ ಸೆರೆಗೆಂದು ಕೂಂಬಿಂಗ್ ವೇಳೆ ಯುವಕನ ಮೇಲೆ ವ್ಯಾಘ್ರ ಅಟ್ಯಾಕ್‌ ಮುಖ ಛಿದ್ರ

ಹುಲಿ ಸೆರೆಗೆಂದು ಕೂಂಬಿಂಗ್ ವೇಳೆ ಯುವಕನ ಮೇಲೆ ವ್ಯಾಘ್ರ ಅಟ್ಯಾಕ್‌ ಮುಖ ಛಿದ್ರ

ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಹುಲಿ (Tiger) ಸೆರೆಗೆಂದು ಕೂಂಬಿಂಗ್ ನಡೆಸುತ್ತಿದ್ದಾಗ ಹತ್ತಿರದಲ್ಲೇ ಹತ್ತಿ ಬಿಡಿಸುತ್ತಿದ್ದ ರೈತನ (Farmer) ಮೇಲೆ ವ್ಯಾಘ್ರ ಅಟ್ಯಾಕ್‌ ಮಾಡಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. ತೀವ್ರ ದಾಳಿಯಿಂದಾಗಿ ರೈತನ ಮುಖ ಛಿದ್ರಛಿದ್ರವಾಗಿದೆ.

ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬಡಗಲಪುರದಲ್ಲಿ ನಡೆದಿದೆ. ಮೈಸೂರು ದಸರಾದ ಜನಪ್ರಿಯ ಆನೆ ಭೀಮನನ್ನು ಬಳಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅಲ್ಲೇ ಹತ್ತಿರದ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ರೈತ ಮಾದೇಗೌಡನ ಮೇಲೆ ವ್ಯಾಘ್ರ ಎರಗಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಹತ್ತಿರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಮೈಸೂರಿಗೆ ರವಾನೆ ಮಾಡಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಕಳೆದ ವಾರದಿಂದ ಹುಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇದರಿಂದಾಗಿ ಗ್ರಾಮಸ್ಥರು ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆ 4-5 ದಿನಗಳಿಂದ ಹುಲಿ ಸೆರೆಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿತ್ತು. ಇದಲ್ಲದೆ ಬೋನ್ ಇರಿಸಿತ್ತು.

ಗುರುವಾರ ಮತ್ತೆ ಕೂಂಬಿಂಗ್ ಕಾರ್ಯಾಚರಣೆ ನಡೆಸುವಾಗ ಹುಲಿಯು ಗ್ರಾಮದ ಬೋಳೆಗೌಡನಕಟ್ಟೆ ಕೆರೆ ಬಳಿ ಅವಿತು ಕುಳಿತಿತ್ತು. ಇದನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಬಳಿ ಯಾರು ಹೋಗದಂತೆ ಎಚ್ಚರಿಕೆ ನೀಡಿದ್ದರು. ಆದರೆ ಹುಲಿ ಗಾಬರಿಗೊಂಡು ಕುಮಾರ್ ಎಂಬುವರ ತೋಟದ ಕಡೆಗೆ ಓಡಿದೆ. ನಂತರ ಅಲ್ಲಿಂದ ನುಗು ಅರಣ್ಯದ ಕಡೆಗೆ ಓಡಿ ಹೋಗಿ ಪೊದೆಯಲ್ಲಿ ಅವಿತು ಕುಳಿತಿತ್ತು.

ಹುಲಿ ಸೆರೆಗೆ ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾಗ ಹೆದರಿ ಪೊದೆಯಿಂದ ಆಚೆ ಬಂದ ಹುಲಿ ಕಾಡಿನತ್ತ ಓಡಿದೆ. ಆಗ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹದೇವ್ ಅವರ ಮೇಲೆ ದಾಳಿ ಮಾಡಿದೆ. ಮಹದೇವ್‌ ಅವರ ಮುಖ, ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ತೀವ್ರ ರಕ್ತಸ್ರಾವದಿಂದ ಅಲ್ಲೇ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

You cannot copy content of this page

Exit mobile version