Wednesday, September 25, 2024

ಸತ್ಯ | ನ್ಯಾಯ |ಧರ್ಮ

ಹಾಸನಾಂಬೆ ದರ್ಶನಕ್ಕೆ ಈ ಬಾರಿ ಹೊಸ ವ್ಯವಸ್ಥೆ ; ಭಕ್ತರಿಗೆ ಇನ್ನಷ್ಟು ಸುಲಭವಾಗಲಿದೆ ದರ್ಶನ

ವರ್ಷಕ್ಕೊಮ್ಮೆ ಮಾತ್ರ ತನ್ನ ಅಪಾರ ಭಕ್ತವೃಂಧಕ್ಕೆ ದರ್ಶನ ಕೊಡಲಿರುವ ಹಾಸನಾಂಬೆಯ ದರ್ಶನ ಈ ಬಾರಿ ಇನ್ನಷ್ಟು ಸುಲಭವಾಗಲಿದೆ. ಇತಿಹಾಸ ಪ್ರಸಿದ್ದ ಹಾಸನಾಂಬೆ ದರ್ಶನಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿರುವ ಸರ್ಕಾರ ಮತ್ತು ಜಿಲ್ಲಾಡಳಿತ ಈ ಬಾರಿ ಇನ್ನಷ್ಟು ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿಸಲು ತಯಾರಿ ನಡೆಸಿದೆ.

ಅದರಂತೆ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಗೊಂದಲ ಹಾಗೂ ತೊಂದರೆಯಾಗದಂತೆ ಹಾಸನಾಂಬಾ ಆ್ಯಪ್​ನ್ನು ಮಾಡಲಾಗಿದ್ದು, ಈ ಆಫ್ ನಲ್ಲಿ ದೇವಸ್ಥಾನದ ರೂಟ್ ಮ್ಯಾಪ್, ಪೂಜಾ ವಿವರ, ವಸತಿ ಮತ್ತು ಊಟದ ವ್ಯವಸ್ಥೆಯ ಸಂಪೂರ್ಣ ವಿವರದ ಮಾಹಿತಿ ನೀಡಲಾಗಿದೆ. ಈ ಮೂಲಕ ಭಕ್ತರು ಹೆಚ್ಚು ಗೊಂದಲಕ್ಕೆ ಬೀಳದಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ಒಟ್ಟು 11 ದಿನಗಳ ಕಾಲ ದೇಗುಲದ ಬಾಗಿಲು ತೆರೆಯಲಿದೆ. ದರ್ಶನಕ್ಕೆ ಬರುವ ಭಕ್ತರಿಗೆ ನೀಡುತ್ತಿದ್ದ ಲಡ್ಡು ವಿತರಣೆಯಲ್ಲಿ ಈ ಬಾರಿ ದೊಡ್ಡ ಮಾರ್ಪಾಡು ಮಾಡಲಾಗಿದ್ದು, ಇಸ್ಕಾನ್ ಸಂಸ್ಥೆಯು ತಯಾರಿಸುವ ಲಡ್ಡು ವಿತರಣೆಗೆ ಮುಂದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page