ಹುಬ್ಬಳ್ಳಿ : ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಇಂದು ಎಐಎಂಐಎಂ ಪಕ್ಷದಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತಿದ್ದರು. ಇದನ್ನು ಖಂಡಿಸಿ, ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಕಾರ್ಯಕರ್ತರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದಕ್ಕಾಗಿ ಎಐಎಂಐಎಂ ಹಾಗೂ ಕೆಲವು ದಲಿತ ಸಂಘಟನೆಗಳಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ಕೇಳಿದ್ದು, ಇದರ ಬಗ್ಗೆ ಸುದೀರ್ಘ ಸಭೆ ನಡೆಸಿದ ಪಾಲಿಕೆ, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿದಂತೆ ಎಲ್ಲಾ ಮಹನೀಯರ ಜಯಂತಿ ಆಚರಣೆಗೆ ಪಾಲಿಕೆ ಅನುಮತಿ ನೀಡಿತ್ತು.
ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ್ದು, ʼ ಐಎಂಐಎಂ ಒಂದು ದೇಶದ್ರೋಹಿ ಪಕ್ಷ. ಇಂತ ಪಕ್ಷಕ್ಕೆ ಮನ್ನಣೆ ಕೊಡುತ್ತೀರಿ ಎಂದರೆ ಯಾವ ಮಟ್ಟಕ್ಕೆ ಬಂದಿದ್ದೀರಿ, ಇದನ್ನು ಕನ್ನಡ ದ್ರೋಹಿ, ಮತಾಂಧ, ದೇವಸ್ಥಾನ ದ್ವಂಸ ಮಾಡಿದ ಟಿಪ್ಪು ಸುಲ್ತಾನ್ ಜಯಂತಿ ಅನುಮತಿ ನೀಡಿರುವುದಕ್ಕೆ ಕನ್ನಡಿಗರು ಕ್ಷಮೆ ಮಾಡಲು ಸಾಧ್ಯವಿಲ್ಲ. ನೀವು ಅನುಮತಿ ಕೊಟ್ಟು ಬಹಳ ದೊಡ್ಡ ತಪ್ಪು ಮಾಡಿದ್ದೀರಿ, ಕನ್ನಡಿಗರು ತಮಗೆ ಎಂದು ಕ್ಷಮೆ ಮಾಡಲ್ಲ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಈದ್ಗಾ ಮೈದಾನದಲ್ಲಿ ಆಚರಿಸುತ್ತಿದ್ದ ಟಿಪ್ಪು ಜಯಂತಿಯ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಟಿಪ್ಪು ಜಯಂತಿ ಆಚರಿಸುವದನ್ನು ಬಿಜೆಪಿ ತಡೆಯಬಹುದಿತ್ತು. ಆದರೆ ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ತಂತ್ರಗಾರಿಕೆ ಮಾಡುತ್ತಿದ್ದಾರೆ. ಎಐಎಂಐಎಂ ದೇಶದ್ರೋಹಿ ಪಕ್ಷವಾಗಿದ್ದು, ಭಯೋತ್ಪಾದನೆಯನ್ನು ಉಂಟು ಮಾಡುತ್ತದೆ. ಇದು ಸರಿಯಲ್ಲ. ಟಿಪ್ಪು ಜಯಂತಿಯನ್ನು ರಾಜ್ಯದ ಎಲ್ಲಿಯೂ ಆಚರಣೆ ಮಾಡಬಾರದು. ಟಿಪ್ಪು ಜಯಂತಿಗೆ ಅನುಮತಿ ಕೊಟ್ಟರೆ ಹೈಕೋರ್ಟ್‌ಗೆ ಪಿಐಎಲ್ ಹಾಕುತ್ತೇನೆ ಎಂದು ಕಿಡಿಕಾರಿದ್ದಾರೆ.