Home ದೇಶ ತಿರುಪತಿ| ಕಲಬೆರಕೆ ತುಪ್ಪ ಪ್ರಕರಣ: ತಮಿಳುನಾಡು ಮೂಲದ ಕಂಪನಿಗೆ ಕೇಂದ್ರದಿಂದ ಶೋಕಾಸ್ ನೋಟಿಸ್..!

ತಿರುಪತಿ| ಕಲಬೆರಕೆ ತುಪ್ಪ ಪ್ರಕರಣ: ತಮಿಳುನಾಡು ಮೂಲದ ಕಂಪನಿಗೆ ಕೇಂದ್ರದಿಂದ ಶೋಕಾಸ್ ನೋಟಿಸ್..!

0

ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ತುಪ್ಪ ಪೂರೈಸಿದ ಕಂಪನಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ನೋಟಿಸ್ ಜಾರಿ ಮಾಡಿದೆ.

ದೇವಸ್ಥಾನಕ್ಕೆ ಸರಬರಾಜಾಗುವ ತುಪ್ಪ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಶೋಕಾಸ್ ನೋಟಿಸ್ ಕಳುಹಿಸಲಾಗಿದೆ. ಕೇಂದ್ರವು ನಾಲ್ಕು ಕಂಪನಿಗಳಿಂದ ತುಪ್ಪದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ. ಇದರಲ್ಲಿ ಕಂಪನಿಯೊಂದು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಾರಣಕ್ಕೆ ನೋಟಿಸ್ ನೀಡಿದೆ.

ತಮಿಳುನಾಡಿನ ಎಆರ್ ಡೈರಿಗೆ ನೋಟಿಸ್ ಜಾರಿ ಮಾಡಲಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಸದ್ಯ ತಿರುಮಲ ದೇವಸ್ಥಾನದ ಲಾಡು ಪ್ರಸಾದದಲ್ಲಿ ಕಲಬೆರಕೆ ತುಪ್ಪವನ್ನು ಬಳಸುತ್ತಿರುವ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರುವುದನ್ನು ಲ್ಯಾಬ್ ವರದಿಯಲ್ಲಿ ತೋರಿಸಿರುವುದನ್ನು ಸಿಎಂ ಚಂದ್ರಬಾಬು ನಾಯ್ಡು ಮೊದಲ ಬಾರಿಗೆ ಬಹಿರಂಗಪಡಿಸಿದ್ದರು.

ಆಂಧ್ರದ ಆಡಳಿತಾರೂಢ ಮೈತ್ರಿ ಸರ್ಕಾರ ಮತ್ತು ಪ್ರತಿಪಕ್ಷ ವೈಎಸ್‌ಆರ್ ಕಾಂಗ್ರೆಸ್ ನಡುವೆ ಈ ವಿಚಾರದಲ್ಲಿ ಮಾತಿನ ಚಕಮಕಿ ನಡೆಯುತ್ತಿದೆ. ಈ ನಡುವೆ ಕಲಬೆರಕೆ ತುಪ್ಪದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುತ್ತಿರುವುದಾಗಿ ಸಿಎಂ ಚಂದ್ರಬಾಬು ಘೋಷಿಸಿದರು.

ಐಜಿಪಿ ಮತ್ತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಎಸ್‌ಐಟಿ ರಚಿಸಲಾಗುವುದು ಎಂದು ಅವರು ಹೇಳಿದರು. ಆ ಬಳಿಕ ಸರಕಾರಕ್ಕೆ ಎಸ್‌ಐಟಿ ವರದಿ ಸಲ್ಲಿಸಲಿದ್ದು, ಹಿಂದಿನ ತಪ್ಪುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

You cannot copy content of this page

Exit mobile version