ಭಾರತದ ಸಂಬಂಧ ಉಳಿಸಿಕೊಳ್ಳಲು ಪಾಕ್ ಜೊತೆಗಿನ ನಂಟು ಕಳೆದುಕೊಳ್ಳಲು ಆಗುವುದಿಲ್ಲ: ಅಮೇರಿಕ

ಭಯೋತ್ಪಾದನೆ ಮಟ್ಟ ಹಾಕಲು ಪಾಕಿಸ್ತಾನದ ಸಹಕಾರ ಅತಿ ಮುಖ್ಯ. ಹೀಗಾಗಿ ಪಾಕಿಸ್ತಾನದ ಜೊತೆಗೆ ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಮುಂದೆ ಹೆಜ್ಜೆ ಇರಿಸಲಿದ್ದೇವೆ. ಹಾಗೆಂದು ಭಾರತದ ಜೊತೆ ನಂಟು ಉಳಿಸಿಕೊಳ್ಳಲು ಪಾಕ್ ಜೊತೆಗಿನ ನಂಟು ಕಳೆದುಕೊಳ್ಳಲು ಆಗುವುದಿಲ್ಲ ಎಂದು ಅಮೇರಿಕಾ ಹೇಳಿದೆ.

ಈ ಬಗ್ಗೆ ಅಮೆರಿಕ ಸಂಸತ್ತಿನ ಸಶಸ್ತ್ರ ಪಡೆಗಳ ಸಮಿತಿ ಮುಂದೆ ಹಾಜರಾಗಿ ಮಾತನಾಡಿದ ಅಮೆರಿಕ ಸೇನೆಯ ಕೇಂದ್ರ ಕಮಾಂಡ್‌ನ ಮುಖ್ಯಸ್ಥ ಮೈಕೆಲ್‌ ಕುರಿಲ್ಲಾ,’ ನಾವಿಬ್ಬರು ಉಗ್ರವಾದದ ವಿರುದ್ಧ ಜಂಟಿಯಾಗಿ ಹೋರಾಡುತ್ತಿದ್ದೇವೆ. ಅದಕ್ಕಾಗಿ ನಮ್ಮ ಗುಪ್ತಚರ ಮಾಹಿತಿ ಪಾಕ್‌ ಬಳಿ ಹಂಚಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

‘ಭಯೋತ್ಪಾದನೆ ನಿಗ್ರಹಿಸಲು ಪಾಕಿಸ್ತಾನ ನಮಗೆ ಅತ್ಯಾಪ್ತ ರಾಷ್ಟ್ರವಾಗಿದೆ. ಹೀಗಾಗಿ ಭಾರತದ ಜೊತೆ ಸಂಬಂಧ ಹೊಂದುವ ಸಲುವಾಗಿ ಪಾಕಿಸ್ತಾನವನ್ನು ದೂರ ಇಡಲಾಗದು’   ಎಂದು ಅಮೇರಿಕಾ ಸೇನೆಯ ಕೇಂದ್ರ ಕಮಾಂಡ್‌ನ ಮುಖ್ಯಸ್ಥ ಮೈಕೆಲ್‌ ಕುರಿಲ್ಲಾ ಹೇಳಿದ್ದಾರೆ.

ಈ ಬೆಳವಣಿಗೆ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ತಿರುಗಿ ಬೀಳುವಂತಾಗಿದೆ. ಅಮೆರಿಕದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ಜೈರಾಂ ರಮೇಶ್‌, ಇದು ಮೋದಿ ರಾಜತಾಂತ್ರಿಕತೆಗೆ ಆದ ಹಿನ್ನಡೆ ಎಂದು ಬಣ್ಣಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು