Home ದೇಶ ಫೆಬ್ರವರಿ 1ರಿಂದ ತಂಬಾಕು ಮತ್ತು ಪಾನ್ ಮಸಾಲಾ ಬೆಲೆ ಭಾರೀ ಏರಿಕೆ: ಶೇ. 40ರಷ್ಟು ಜಿಎಸ್‌ಟಿ...

ಫೆಬ್ರವರಿ 1ರಿಂದ ತಂಬಾಕು ಮತ್ತು ಪಾನ್ ಮಸಾಲಾ ಬೆಲೆ ಭಾರೀ ಏರಿಕೆ: ಶೇ. 40ರಷ್ಟು ಜಿಎಸ್‌ಟಿ ವಿಧಿಸಲು ಕೇಂದ್ರದ ನಿರ್ಧಾರ

0

ಹೊಸ ವರ್ಷದ ಆರಂಭದಲ್ಲೇ ಕೇಂದ್ರ ಸರ್ಕಾರವು ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಹೊಸ ತೆರಿಗೆ ನೀತಿಯನ್ನು ಪ್ರಕಟಿಸಿದ್ದು, ಇದು ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಹೊಸ ನಿಯಮದ ಪ್ರಕಾರ ಈ ಹಾನಿಕಾರಕ ಉತ್ಪನ್ನಗಳ ಮೇಲೆ ಈಗಿರುವ ಜಿಎಸ್‌ಟಿ ದರಗಳ ಜೊತೆಗೆ ಹೆಚ್ಚುವರಿ ಎಕ್ಸೈಸ್ ಸುಂಕ ಮತ್ತು ಆರೋಗ್ಯ ಸೆಸ್ ಅನ್ನು ವಿಧಿಸಲಾಗುತ್ತಿದೆ.

ಈ ಹಿಂದೆ ಜಾರಿಯಲ್ಲಿದ್ದ ನಷ್ಟ ಪರಿಹಾರ ಸೆಸ್ (Compensation Cess) ಬದಲಿಗೆ ಈ ಹೊಸ ತೆರಿಗೆ ವ್ಯವಸ್ಥೆಯು ಅಸ್ತಿತ್ವಕ್ಕೆ ಬರಲಿದ್ದು, ಇದರಿಂದಾಗಿ ಸಿಗರೇಟ್ ಮತ್ತು ಪಾನ್ ಮಸಾಲಾ ಬೆಲೆಗಳು ಗಣನೀಯವಾಗಿ ಏರಿಕೆಯಾಗಲಿವೆ.

ಸರ್ಕಾರ ಬಿಡುಗಡೆ ಮಾಡಿರುವ ಅಧಿಸೂಚನೆಯ ಪ್ರಕಾರ ಪಾನ್ ಮಸಾಲಾ, ಸಿಗರೇಟ್ ಮತ್ತು ತಂಬಾಕು ಸಂಬಂಧಿತ ಉತ್ಪನ್ನಗಳ ಮೇಲೆ ಜಿಎಸ್‌ಟಿ ಅಡಿಯಲ್ಲಿ ಶೇ. 40 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ ಬೀಡಿಗಳ ಮೇಲೆ ಶೇ. 18 ರಷ್ಟು ಜಿಎಸ್‌ಟಿ ಮುಂದುವರಿಯಲಿದೆ.

ಈ ನಿಗದಿತ ಜಿಎಸ್‌ಟಿ ದರಗಳ ಹೊರತಾಗಿ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಎಕ್ಸೈಸ್ ಸುಂಕ ಹಾಗೂ ಪಾನ್ ಮಸಾಲಾದ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಅನ್ನು ಪ್ರತ್ಯೇಕವಾಗಿ ವಿಧಿಸಲು ನಿರ್ಧರಿಸಲಾಗಿದೆ.

ಕೇಂದ್ರದ ಈ ಕಠಿಣ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ತಂಬಾಕು ಉತ್ಪನ್ನಗಳ ಬೆಲೆ ದುಬಾರಿಯಾಗಲಿದ್ದು, ಸೇವನೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಇದು ಹೊಂದಿದೆ ಎಂದು ವಿಶ್ಲೇಷಿಸಲಾಗಿದೆ.

You cannot copy content of this page

Exit mobile version