Tuesday, October 1, 2024

ಸತ್ಯ | ನ್ಯಾಯ |ಧರ್ಮ

ಈ ದಿನ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನ!

ನಮ್ಮಲ್ಲಿ ಎಷ್ಟೊ ಜನಕ್ಕೆ ಇಂತದ್ದೊಂದು ದಿನ ಬೇರೆ ಇದ್ಯಾ? ಅಂತ ಅನಿಸೋದರಲ್ಲಿ ಅತಿಶಯೋಕ್ತಿ ಏನಿಲ್ಲ ಅಂತ ಗೊತ್ತು. ನನಗೆ, ಇವತ್ತು ಅನೇಕ ಬಾರಿ ಪ್ರಾಯೋಜಿತ ಕಾರ‍್ಯಕ್ರಮಗಳು ಪ್ರತೀ ವ್ಯಾಪ್ತಿಯಲ್ಲೂ ನಡೆಯುತ್ತೆ. ವಯಸ್ಸಾದವರಿಗೆ ಶಾಲು, ಬಾಳೆಹಣ್ಣು, ಜ್ಯೂಸ್ ಪ್ಯಾಕೆಟ್ ಕೊಟ್ಟು ಕಳಿಸ್ತಾರೆ, ಬಹುತೇಕ ಸರ್ಕರಿ ಕೆಲಸಗಳಲ್ಲಿ, ಸೇನೆಗಳಲ್ಲಿ ಇದ್ದು ನಿವೃತ್ತಿ ಪಡೆದವರನ್ನ ಮಾತ್ರ ಹಿರಿಯರು ಅಂತಲೂ ಗುರುತಿಸ್ತಾರೆ‌. ಆದರೆ ಯಾರೂನೂ ಈ ದೇಶವನ್ನ ಕಟ್ಟಿ ಬೆಳೆಸಿದ , ಇನ್ನೂ ಬೆಳೆಸುತ್ತಿರುವ ಅಸಂಘಟಿತ ಕ್ಷೇತ್ರದಲ್ಲಿ ೪೦-೫ ವರ್ಷಗಳಿಂದ ದುಡಿದ ಹಿರಿಯ ಕಾರ್ಮಿಕ ವರ್ಗವನ್ನು ಗಣನೆಗೂ ತಗೊಳಲ್ಲ. ಮುಂದುವರೆದು ಈ ಜನ ನಗರದ ರಸ್ತೆ, ಬ್ರಿಡ್ಜು, ಪಾರ್ಕು, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ್ದಾರೆ ಇನ್ನೂ ಕಟ್ತಾನೂ ಇದಾರೆ ಇವರಿಗೆ ನಿವೃತ್ತಿಯ ವಯಸ್ಸೇ ಇಲ್ಲ. ಸರ‍್ಕಾರಿ ಕೆಲಸದಿಂದ ನಿವೃತ್ತಿ ಆದೋರಿಗೆ ಅವರ ಕಡೆಯ ಸಂಬಳದ ಅರ್ಧದಷ್ಟು ಪಿಂಚಣಿ, ಸಾಮಾಜಿಕ ಗೌರವ ಬಳುವಳಿಯಾಗಿ ಸಿಕ್ಕರೆ ಈ ಕಾರ್ಮಿಕರಿಗೆ ನಿವೃತ್ತಿಯ ವಯಸ್ಸಲ್ಲಿ ಬಡ್ತಿ ಸಿಗುತ್ತೆ ಇನ್ನೂ ಹತ್ತಾರು ವರ್ಷ ದುಡಿಯಲೇಬೇಕು ಅನ್ನೋ ಬಡ್ತೀ.!!? ನಗರದ ಅಭಿವೃದ್ದಿ ಅನ್ನೋ ಉಳುಮೆಗೆ ನೊಗ ಕೊಟ್ಟು ದುಡಿದ ಎತ್ತುಗಳು ಇವರು, ಇವತ್ತೂ ೧೨೦೦ ರೂ ಪಿಂಚಣಿಗೋಸ್ಕರ ಗಂಟೆಗಟ್ಲೇ ಪೋಸ್ಟ್ ಆಫೀಸಿನ ಮುಂದೆ ನಿಂತ್ಕೊತಾರೇ..

ಭಾರತದಲ್ಲಿ ಸಂಪೂರ್ಣ ಕೆಲಸ ಮಾಡುವ ವರ್ಗದಲ್ಲಿ ೯೭% ಜನ ಅಸಂಘಟಿತ ವಲಯದಲ್ಲಿದ್ದಾರೆ ಮತ್ತವರು ಇವತ್ತಿಗೂ ಕನಿಷ್ಟ ಕೂಲಿಯನ್ನ ಹೆಚ್ಚಿಸಿಕೊಳ್ಳಲಾಗದೇ ಹೋರಾಡ್ತಾ ಇದಾರೆ, ಈ ಅಸಂಘಟಿತ ವಲಯದ ನಿವೃತ್ತ ಕಾರ್ಮಿಕರೀ ನಡೆದಾಡಲೂ ಕಷ್ಟ ಆಗುವ ಈ ವಯಸ್ಸಿನಲ್ಲಿ ಕನಿಷ್ಟ ಕೂಲಿಯ ಅರ್ಧದಷ್ಟು ಪಿಂಚಣಿಗಾಗಿ ಹೋರಾಡ್ತಾ ಇದಾರೆ!!!

ಭಾರತೀಯ ಸಂವಿಧಾನವು ಪ್ರತಿಯೊಂದು ಮನುಷ್ಯರಿಗೂ “ಘನತೆಯ ಹಕ್ಕು” ಬದುಕುವ ಹಕ್ಕು” ಮತ್ತು ಸಾಮಾಜಿಕ ಭದ್ರತೆಯ ಹಕ್ಕನ್ನು ಒದಗಿಸಿದೆ, ಇದು ಕೇವಲ ಉಳ್ಳವರ ಸ್ವತ್ತಲ್ಲ ಈ ನಾಡನ್ನು ಕಟ್ಟಿ ಬೆಳೆಸಿದವರ ಸ್ವತ್ತೂ ಕೂಡ.. !

ಇಂತ ಅಸಂಘಟಿತ ವಲಯದ ಹಿರಿಯ ನಾಗರೀಕರೇ ಕಟ್ಟಿ ಬೆಳೆಸಿದ ಯೂನಿಯನ್ನೇ “ಅಖಿಲ ಕರ್ನಾಟಕ ವಯೋವೃದ್ದರ ಒಕ್ಕೂಟ” (ಐಕ್ಯತಾ) . ಇಂದು ” ಯೋಗ್ಯ ಪಿಂಚಣಿ, ಮಧ್ಯಾಹ್ನದ ಬಿಸಿಯೂಟ , ಮತ್ತು ಸಾಮಾಜಿಕ ಭದ್ರತೆ” ಯ ಹಕ್ಕೊತ್ತಾಯದೊಂದಿಗೆ ಈ ದಿನವನ್ನು ನೆನಪಿಸ್ತಾ ಇದಾರೆ, ಆಗ್ರಹಿಸ್ತಾ ಇದಾರೆ.. ಅವರಿಗೆ ಬೆಂಬಲಿಸ ಬೇಕಾದ ತುರ್ತು ಇದೆ. ಬನ್ನಿ ಬೆಂಬಲಿಸೋಣ!! ಇವತ್ತು ಇವರು, ನಾಳೆ ನಾವು..!

ಹಿರಿಯರ ಜವಾಬ್ದಾರಿ ಸಾಮಾಜಿಕ ಜವಾಬ್ದಾರಿ.!
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಯೋವೃದ್ದರ ಒಕ್ಕೂಟವು (ಐಕ್ಯಾತ-ರಿ) ೦೧-೧೦-೨೦೨೪ ರಂದು ಮಂಗಳವಾರ. ಅಕ್ಟೋಬರ್ ೧ ರ ‘ಅಂತರಾಷ್ಟಿçÃಯ ಹಿರಿಯ ನಾಗರೀಕರ ದಿನದ ಸಂದರ್ಭದಲ್ಲಿ, ಹಿರಿಯ ನಾಗರೀಕರು ಮತ್ತು ಅವರು ಸಮಾಜಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಗೌರವಿಸಲು ಮತ್ತು ಅವರ ಅಮೂಲ್ಯವಾದ ಜೀವನವನ್ನು ರಕ್ಷಿಸಲು ಅಭಿಯಾನವನ್ನು ಪ್ರಾರಂಭಿಸುತ್ತಿದೆ.
ಇದು ನಿಮ್ಮ ಮಾಹಿತಿಗಾಗಿ…,
ಹಿರಿಯ ನಾಗರೀಕರ ಹಕ್ಕೊತ್ತಾಯಗಳು
ಯೋಗ್ಯ ಪಿಂಚಣಿ: ಪ್ರತಿಯೊಬ್ಬ ನಿವೃತ್ತ ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಟ ವೇತನದ ಅರ್ಧದಷ್ಟು ಪಿಂಚಣಿ ನೀಡಬೇಕು.
ಪೌಷ್ಟಿಕ ಆಹಾರ: ಸರ್ಕಾರವು ಕಾರ್ಮಿಕರಿಗೆ ಉಚಿತ ಪೌಷ್ಟಿಕಾಂಶದ ಆಹಾರವನ್ನು (ಮಧ್ಯಹ್ನದ ಬಿಸಿ ಊಟ) ಖಾತ್ರಿಪಡಿಸಬೇಕು.
ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಪ್ರವೇಶ: ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯಕೀಯ ನೆರವು ಮತ್ತು ಔಷಧಿಗಳನ್ನು ಉಚಿತವಾಗಿ ನೀಡಬೇಕು.

ಈ ಬೇಡಿಕೆಗಳನ್ನು ಮಂಡಿಸಲು ಸಹಿ ಅಭಿಯಾನವನ್ನು ಆಯೋಜಿಸುತ್ತಿದ್ದೇವೆ.

೨೦೨೪ ರ ಅಂತರಾಷ್ಟ್ರೀಯ ಹಿರಿಯ ನಾಗರೀಕರ ದಿನದ ಘೋಷವಾಕ್ಯ “ಗೌರವದಿಂದ ವಯಸ್ಸಾಗುವುದು: ವಿಶ್ವದಾದ್ಯಂತ ವಯಸ್ಸಾದ ವ್ಯಕ್ತಿಗಳಿಗೆ ಕಾಳಜಿ ಮತ್ತು ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸುವ ಪ್ರಾಮುಖ್ಯತೆ”

ಆತ್ಮೀಯ ಕಾರ್ಮಿಕರೇ,
ಭಾರತ ದೇಶವು ಒಂದು ಬೃಹತ್ ಅಸುರಕ್ಷಿತ ಕಾರ್ಮಿಕರ ದೇಶವಾಗಿದ್ದು, ಮುಖ್ಯವಾಗಿ ಮನೆಗೆಲಸ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಪೌರಕಾರ್ಮಿಕರು ಮತ್ತು ಅಸುರಕ್ಷಿತ ವಲಯದ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು ಇನ್ನೂ ಮುಂತಾದ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಈ ದೇಶವನ್ನು ಸದೃಢವಾಗಿ ಕಟ್ಟುತ್ತಾ ಬರುತ್ತಿದ್ದಾರೆ.

ಈ ನೆಲದ ವೃದ್ಧ ಅಸುರಕ್ಷಿತ ಕಾರ್ಮಿಕರು ಸಮಾಜದ ಅಭಿವೃದ್ಧಿಗೆ ೧೫ನೇ ವಯಸ್ಸಿನಿಂದ ಕನಿಷ್ಟ ೧೨ ಗಂಟೆಗಳು ವಾರದಲ್ಲಿ ೭ ದಿನಗಳು ೫೦ ವರ್ಷಕ್ಕೂ ಹೆಚ್ಚಿನ ಅವಧಿಯ ಉತ್ಪಾದಕ ದುಡಿಮೆ ನೀಡಿರುತ್ತಾರೆ. ತಮ್ಮ ಬೆವರಿನ ದುಡಿಮೆಯಿಂದ ನಗರದ ನಾಲೆ, ಡ್ಯಾಂ, ಸೇತುವೆಗಳನ್ನು ಕಟ್ಟಿ ಕೃಷಿ-ಕೈಗಾರಿಕಾ ಸೇವಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ, ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಗಣನೀಯ ಕೊಡುಗೆ ಲಕ್ಷ ಕೋಟಿಗಳನ್ನು ಮೀರುವಂತೆ ನೀಡಲಾಗಿದೆ. ಇವರ ದುಡಿಮೆಯಿಲ್ಲದೆ ಸಮಾಜದ ಚಕ್ರಗಳು ತಿರುಗಲೂ ಸಾಧ್ಯವಿಲ್ಲ ಎಂಬುವುದು ಕಟು ಸತ್ಯ. ಅಸುರಕ್ಷಿತ ವಲಯದಲ್ಲಿ ಯಾವುದೇ ಕಾನೂನಿನ ರಕ್ಷಣೆ ಅಥವಾ ನಿಯಂತ್ರಣ ಇಲ್ಲದಿರುವ ಪರಿಣಾಮವಾಗಿ ತಮ್ಮ ಆರೋಗ್ಯ ಹದಗೆಟ್ಟು ಇವರಿಗೆ ಹೆಚ್ಚಿನ ಆಯಸ್ಸು ಸಿಗೋದು ಕಷ್ಟ ಸಾಧ್ಯವಾಗಿದೆ. ಸಮಾಜದಲ್ಲಿ ಕೋಟಿಗಟ್ಟಲೆ ಮೌಲ್ಯ ಉತ್ಪಾದಿಸಿದ ಈ ಅಸುರಕ್ಷಿತ ವಲಯದ ಕಾರ್ಮಿಕರು ನೀಡಿದ ಕೊಡುಗೆಯನ್ನು ಕೊಂಡಾಡಲು ಅಕ್ಟೋಬರ್ ೧ನ್ನು ವಿಶ್ವ ಹಿರಿಯರ ದಿನ ಎಂದು ಆಚರಿಸಲಾಗುತ್ತಿದೆ. ಉಳಿದಂತೆ ತಮ್ಮ ಇಡೀ ಬದುಕನ್ನು ಸವೆಸಿದ ಹಿರಿಯರಿಗೆ ಸರ್ಕಾರವು ಕೇವಲ ಒಂದೇ ಒಂದು ಯೋಜನೆಯಾದ ವೃದ್ಧಾಪ್ಯ ವೇತನ ನೀಡುತ್ತಿದ್ದು ಅದೂ ಕೂಡ ಸರಿಯಾದ ಸಮಯಕ್ಕೆ ದೊರೆಯುತ್ತಿಲ್ಲ. ಇನ್ನೂ ಕೆಲವಂತು ಸರಿಯಾದ ದಾಖಲಾತಿಗಳನ್ನು ಒದಗಿಸಲಾಗದೇ ಯಾವುದೇ ಸೌಲಭ್ಯಗಳನ್ನು ಪಡೆಯಲು ಆಗುತ್ತಿಲ್ಲ. ಕಳೆದ ವರ್ಷ ಸರ್ಕಾರದ ವತಿಯಿಂದ ನೆಪ ಮಾತ್ರಕ್ಕೆ ಹಿರಿಯರ ದಿನವನ್ನು ಸಂಭ್ರಮಿಸಿ ಉಸಿ ಬರವಸೆಗಳನ್ನು ಘೋಷಣೆ ಮಾಡಿ ಆ ಕಾರ್ಯಕ್ರಮದಲ್ಲೆ ಕೊನೆಗೊಳಿಸಿದೆ.

ಇಂತಹ ಅಮೂಲ್ಯ ಜೀವಗಳು ತಮ್ಮ ನಿವೃತ್ತ ಜೀವನದಲ್ಲಿ ಕುಟುಂಬದ ಆಶ್ರಯವೂ ಸಿಗದೆ ಅನಾರೋಗ್ಯಕ್ಕೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ. ಹಾಗಿದ್ದಲ್ಲಿ ಇದರ ಜವಾಬ್ದಾರಿ ಯಾರದು? ಇವರಿಗಿರುವ ಕಾನೂನಾತ್ಮಕ ಹಕ್ಕುಗಳು ಯಾವುವು? ಇವರ ಸಮಸ್ಯೆಗಳಿಗೆ ಪರಿಹಾರ ಯಾವುವು? ಹಾಗಿದ್ದರೆ ಸರ್ಕಾರವು ಹಿರಿಯರನ್ನು ಕಡೆಗಣಿಸಿರುವುದರ ವಿರುದ್ದ ನಾವೆಲ್ಲರು ಜೊತೆ ಗೂಡಿ ಹೆಚ್ಚಿರಿಸಬೇಕಲ್ಲವೆ.

ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮೊಂದಿಗೆ ಸೇರಿ ಕೈ ಜೋಡಿಸಿ. ಹಿರಿಯರ ಬೇಡಿಕೆಗಳನ್ನು ಸರ್ಕಾರ ಜಾರಿಗೊಳಿಸಲು ಒತ್ತಾಯಿಸೋಣ. ದೇಶವನ್ನು ಕಟ್ಟಿದ ಈ ನೆಲದ ಹಿರಿಯ ನಾಗರಿಕರನ್ನು ರಕ್ಷಿಸೋಣ.

. . ಹಿರಿಯ ಕಾರ್ಮಿಕರ ರಕ್ಷಣೆ ನಮ್ಮೆಲ್ಲರ ಹೊಣೆ . . .
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
ಶಾಂತ ವಿ
ಕೆಂಚಪ್ಪ
ಧನಲಕ್ಷ್ಮಿ

ಮೊಬೈಲ್‌ ಸಂಖ್ಯೆ : 9972359644 , 7204443809

Related Articles

ಇತ್ತೀಚಿನ ಸುದ್ದಿಗಳು

You cannot copy content of this page