Saturday, June 15, 2024

ಸತ್ಯ | ನ್ಯಾಯ |ಧರ್ಮ

ಶಾಲೆಯ ಮಕ್ಕಳಿಂದಲೇ ಶೌಚಾಲಯ ತೊಳೆಸಿದ ಪ್ರಕರಣ : ಮುಖ್ಯ ಶಿಕ್ಷಕಿ ಅಮಾನತು

ಬೆಂಗಳೂರಿನ ಪೀಣ್ಯ ಬಳಿಯ ಆಂದ್ರಹಳ್ಳಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಇದೀಗ ಶಿಕ್ಷಣ ಇಲಾಖೆಯಿಂದ ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಇತ್ತೀಚೆಗೆ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪರಿಶೀಲನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಉತ್ತರ ತಾಲೂಕಿನ ಬಿಇಓ ಕೆ.ಜಿ ಆಂಜನಪ್ಪ ಶಾಲೆಗೆ ಭೇಟಿ ನೀಡಿದ್ದರು.

ಬಿಇಒ ಭೇಟಿ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮಿ ದೇವಮ್ಮ ವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯ ಕ್ಲೀನ್ ಮಾಡಿಸಿದ್ದು ಖಚಿತಗೊಂಡಿತ್ತು. ಅಷ್ಟೆ ಅಲ್ಲದೆ ಮಕ್ಕಳಿಗೆ ಯಾವುದೇ ಸ್ವಚ್ಛತಾ ಪರಿಕರಗಳಿಲ್ಲದೇ (ಗ್ಲೌಸ್, ಮಾಸ್ಕ್, ಚಪ್ಪಲಿ) ಪೆನಾಯಿಲ್ ಕೊಟ್ಟು ಶೌಚಾಲಯ ತೊಳೆಸಿದ್ದನ್ನು ಮಕ್ಕಳು ಒಪ್ಪಿಕೊಂಡಿದ್ದಾರೆ. ಇದರ ಪರಿಣಾಮ ಹಲವು ದಿನಗಳಿಂದ ಮಕ್ಕಳ ಕೈ ಉರಿಯುತ್ತಿರುವುದಾಗಿ ಮಕ್ಕಳೇ ಹೇಳಿಕೊಂಡಿದ್ದಾರೆ.

ಈ ಹಿನ್ನಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಈ ಮೂಲಕ ಶಾಲಾ ವಿದ್ಯಾರ್ಥಿಗಳಿಂದ ಶೌಚಾಲಯ ಕ್ಲೀನ್ ಮಾಡಿಸಿದಂತ ಮುಖ್ಯ ಶಿಕ್ಷಕಿಗೆ ಅಮಾನತು ಶಿಕ್ಷೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು