Home ರಾಜ್ಯ ದಕ್ಷಿಣ ಕನ್ನಡ ಕೊನೆಗೂ ಸುರತ್ಕಲ್‌ ಟೋಲ್‌ ಅಧಿಕೃತವಾಗಿ ತೆರವು

ಕೊನೆಗೂ ಸುರತ್ಕಲ್‌ ಟೋಲ್‌ ಅಧಿಕೃತವಾಗಿ ತೆರವು

0

ಮಂಗಳೂರು: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರ ಹೋರಾಟಕ್ಕೆ ಕೊನೆಗೂ ಜಯ ದೊರಕಿದ್ದು, ತಡರಾತ್ರಿ ಹನ್ನೆರಡು ಗಂಟೆಯಿಂದ ಸುಂಕ ವಸೂಲಿ ನಿಲ್ಲಿಸಲಾಗಿದೆ.

ಕರಾವಳಿ ಜಿಲ್ಲೆಯ ಜನರ ಹಲವು ವರ್ಷಗಳ ಆಗ್ರಹವೊಂದು ಕಡೆಗೂ ಈಡೇರಿದಂತಾಗಿದೆ ಮತ್ತು ಸುಮಾರು ವರ್ಷಗಳ ಹೋರಾಟವೊಂದಕ್ಕೆ ಈ ಮೂಲಕ ಒಂದು ತಾರ್ಕಿಕ ಅಂತ್ಯ ಕಂಡಂತಾಗಿದೆ. ಈ ಮೊದಲು ಸರ್ಕಾರ ಸುರತ್ಕಲ್‌ ಟೋಲ್‌ನ ಸುಂಕವನ್ನು ಹೆಜಮಾಡಿಯಲ್ಲಿ ವಸೂಲಿ ಮಾಡಲು ಯೋಜಿಸಿತ್ತಾದರೂ ಆ ರಸ್ತೆಯ ಮಾಲಕ ಸಂಸ್ಥೆ ನವಯುಗ ಅದಕ್ಕೆ ಒಪ್ಪಿಗೆ ನೀಡದ ಕಾರಣ ಸದ್ಯಕ್ಕೆ ಹೆಜಮಾಡಿಯಲ್ಲಿ ಹೆಚ್ಚುವರಿ ಸುಂಕ ವಸೂಲಿ ಮಾಡಲಾಗುತ್ತಿಲ್ಲ.

ನವಯುಗ ಸಂಸ್ಥೆಯೊಡನೆ ಸರಕಾರದ ಚೌಕಾಶಿ ಮುಂದುವರೆದಿದೆಯಾದರೂ ಈಗಾಗಲೇ ಜನರ ಕಣ್ಣಲ್ಲಿ ವಿಲನ್‌ ಆಗಿರುವ ಸಂಸ್ಥೆ ಹೆಚ್ಚುವರಿ ಸುಂಕ ವಸೂಲಿ ಮಾಡುವ ಮೂಲಕ ಇನ್ನಷ್ಟು ಜನಾಕ್ರೋಶಕ್ಕೆ ಈಡಾಗಲು ಹೆದರುತ್ತಿದೆ ಎನ್ನುವುದು ಮೂಲಗಳ ಅಭಿಪ್ರಾಯ.

ಎನ್‌ಐಟಿಕೆ ಬಳಿಯ ಟೋಲ್ ಮುಚ್ಚುವುದರಿಂದ ಸರಕಾರಕ್ಕೆ ನಷ್ಟವಾಗಲಿದೆಯೆನ್ನುವುದು ಸದ್ಯದ ಸರಕಾರದ ದೂರು. ಇಲ್ಲಿನ ದರವನ್ನು ಹೆಜಮಾಡಿ ಟೋಲ್‌ನಲ್ಲಿ ಪಡೆಯುವುದು ಸರಕಾರದ ಉದ್ದೇಶವಾಗಿತ್ತು. ಆದರೆ ಅದರ ಬದಲಾಗಿ ಎನ್ಐ‌ಟಿಕೆ ಟೋಲ್‌ನ ಮತ್ತೊಂದು ಟೋಲ್‌ ಬಹ್ಮರಕೂಟ್ಲು, ತಲಪಾಡಿ, ಮತ್ತು ಹೆಜಮಾಡಿ ಸುಂಕದಕಟ್ಟೆಗಳಲ್ಲಿ ದರಗಳನ್ನು ವಿಭಜಿಸಿ ಪಡೆದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಹೆಜಮಾಡಿ ಟೋಲ್‌ನಲ್ಲಿ ಹೆಚ್ಚುವರಿಯಾಗಿ 60 ರೂ. ಪಡೆಯುವ ಬದಲು ಈ ಮೂರು ಟೋಲ್‌ಗಳಲ್ಲಿ ತಲಾ 10 ರೂ. ಹೆಚ್ಚುವರಿಯಾಗಿ ಪಡೆದರೆ ಜನರಿಗೆ ಅನುಕೂಲವಾಗುತ್ತದೆಯೆನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

ನಿನ್ನೆ ಟೋಲ್‌ಗೇಟ್‌ ವಿರೋಧಿ ಸಮಿತಿ ತಡರಾತ್ರಿ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ನೂರಾರು ಜನರು ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದರು. ಮೇಲಿನಿಂದ ಕೆಳಗಿನವರೆಗೂ ಆಡಳಿತ ಪಕ್ಷದವರೇ ಇದ್ದೂ ಸ್ಥಳೀಯ ರಾಜಕಾರಣಿಗಳಿಗೆ ಇದೊಂದು ಟೋಲ್‌ ತೆರೆಸಲು ಜನರು ಒತ್ತಡ ಹೇರಬೇಕಾಗಿ ಬಂದಿದ್ದು ನಿಜಕ್ಕೂ ವಿಪರ್ಯಾಸ ಎಂದು ಹಿರಿಯ ಹೋರಾಟಗಾರರೊಬ್ಬರು ಅಭಿಪ್ರಾಯಪಟ್ಟರು.

You cannot copy content of this page

Exit mobile version