Wednesday, March 26, 2025

ಸತ್ಯ | ನ್ಯಾಯ |ಧರ್ಮ

ನಕಲಿ ಸುದ್ದಿಗಳ ಕೇರಾಫ್‌ ಅಡ್ರಸ್ಸೇ ಬಿಜೆಪಿ: ನಕಲಿ ಸುದ್ದಿ ಹರಡುತ್ತಿರುವ ಟಾಪ್ 10 ಭಾರತೀಯ ಪ್ರಭಾವಿಗಳ ಪಟ್ಟಿ ನೀಡಿದ ಗ್ರೋಕ್‌ AI

ಜಾಗತಿಕ ಬಿಲಿಯನೇರ್ ಎಲೋನ್ ಮಸ್ಕ್ ಅವರ AI ಚಾಟ್‌ಬಾಟ್ ‘ಗ್ರೋಕ್’ ಬಹಿರಂಗಪಡಿಸುತ್ತಿರುವ ಸತ್ಯಗಳು ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರ ಬೆವರಿಳಿಸುತ್ತಿವೆ.

ಬಿಜೆಪಿ ಪರಿವಾರವು ಬಹಳ ದಿನಗಳಿಂದ ಹರಡುತ್ತಿದ್ದ ಸುಳ್ಳುಗಳನ್ನು ಈ ಚಾಟ್‌ಬಾಟ್ ಪುರಾವೆಗಳ ಸಮೇತ ಸುಳ್ಳೆಂದು ಸಾಬೀತುಪಡಿಸುತ್ತಿದೆ. ಈ ಸಂದರ್ಭದಲ್ಲಿ, ಅಖಿಲೇಶ್ ಮೌರ್ಯ ಎಂಬ ನೆಟಿಜನ್ ‘X’ ವೇದಿಕೆಯಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಟಾಪ್ 10 ಭಾರತೀಯ ಪ್ರಭಾವಿಗಳ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ‘ಗ್ರೋಕ್’ ಅನ್ನು ಕೇಳಿಕೊಂಡರು.

‘ಫ್ಯಾಕ್ಟ್-ಚೆಕಿಂಗ್ ಡೇಟಾ ಮಾರ್ಚ್-2025’ ಪ್ರಕಾರ, ಗ್ರೋಕ್ ಬಿಡುಗಡೆ ಮಾಡಿದ ಈ ಪಟ್ಟಿಯಲ್ಲಿರುವ ಬಹುತೇಕ ಎಲ್ಲರೂ ಬಿಜೆಪಿ ನಾಯಕರು ಅಥವಾ ಆ ಪಕ್ಷದ ಬೆಂಬಲಿಗರಾಗಿದ್ದಾರೆ ಎಂಬುದು ಗಮನಾರ್ಹ.

ನೂಪುರ್ ಶರ್ಮಾ

ಹಿಂದೆ ಬಿಜೆಪಿ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು. ಟಿವಿ ಚಾನೆಲ್ ಒಂದರ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದರು. ಪರಿಣಾಮವಾಗಿ, ಬಿಜೆಪಿ ಅವರನ್ನು ಪಕ್ಷದಿಂದ ಹೊರಹಾಕಿತು. ಅವರು ಇನ್ನೂ ಬಿಜೆಪಿ ಬೆಂಬಲಿಗರಾಗಿ ಉಳಿದಿದ್ದಾರೆ.

ರಾಹುಲ್ ರೋಷನ್

ಒಪಿಇಂಡಿಯಾ ವೆಬ್‌ಸೈಟ್‌ನ ಸಹ-ಸಂಸ್ಥಾಪಕ. ಈ ವೆಬ್‌ಸೈಟ್ ಬಿಜೆಪಿ ಪರವಾಗಿ ಸುದ್ದಿಗಳನ್ನು ಪ್ರಕಟಿಸುತ್ತದೆ ಎಂಬ ಆರೋಪಗಳಿವೆ. 2020 ರ ದೆಹಲಿ ಗಲಭೆ ಮತ್ತು ಕೋವಿಡ್ ಹರಡುವಿಕೆಗೆ ಸಂಬಂಧಿಸಿದಂತೆ ರಾಹುಲ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿರುವ‌ ಪೋಸ್ಟ್‌ಗಳು ವಿವಾದಕ್ಕೆ ಕಾರಣವಾಗಿವೆ.

ಅಮಿತ್ ಮಾಳವೀಯ

ಬಿಜೆಪಿ ಐಟಿ ಸೆಲ್‌ನ ಉಸ್ತುವಾರಿ. 2020ರ ಕರಾಳ ಕಾನೂನುಗಳ ವಿರುದ್ಧದ ರೈತರ ಚಳವಳಿಯನ್ನು ದುರ್ಬಲಗೊಳಿಸಲು ನಕಲಿ ಸುದ್ದಿಗಳನ್ನು ಹರಡಿದ್ದರು ಎಂಬ ಆರೋಪಗಳಿವೆ. ರೈತರ ಆಂದೋಲನವನ್ನು ದಾರಿತಪ್ಪಿಸಲು ವೀಡಿಯೊಗಳನ್ನು ಮಾರ್ಫ್ ಮಾಡಲಾಗಿತ್ತು ಎಂಬ ವರದಿಗಳಿವೆ.

ಅರ್ನಬ್ ಗೋಸ್ವಾಮಿ

ಅರ್ನಬ್ ಗೋಸ್ವಾಮಿ ರಿಪಬ್ಲಿಕ್ ಟಿವಿಯ ಎಂಡಿ. ಅವರ ಚರ್ಚೆಗಳು ಸಾಮಾನ್ಯವಾಗಿ ಬಿಜೆಪಿ ಪರವಾಗಿಯೇ ಇರುತ್ತವೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸುಳ್ಳು ಕಥೆಗಳನ್ನು ಹರಡಲಾಗಿತ್ತು ಎಂಬ ಆರೋಪಗಳಿವೆ.

ಕಂಗನಾ ಎಂಡ್‌ ಟೀಮ್

ಕಂಗನಾ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ. 2020-21ರ ರೈತ ಚಳವಳಿ, 2024ರ ಬಾಂಗ್ಲಾದೇಶ ಗಲಭೆಗಳು, ಕೋವಿಡ್ -19 ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಆರೋಪಗಳಿವೆ.‌

ವಿವೇಕ್ ಅಗ್ನಿಹೋತ್ರಿ

ನಿರ್ದೇಶಕ. ಬಿಜೆಪಿ ಬೆಂಬಲಿಗ. ಕಾಶ್ಮೀರದ ಕುರಿತಾದ ಬಿಬಿಸಿ ಸಮೀಕ್ಷೆಯನ್ನು ತಿರುಚಿದ ಆರೋಪ ಇವರ ಮೇಲಿದೆ. ಅಲ್ಲದೆ ತನ್ನನ್ನು ಸುಳ್ಳುಸುದ್ದಿಕೋರ ಎಂದು ಕರೆದಿದ್ದಕ್ಕೆ ಗ್ರೋಕ್‌ ತನ್ನ ಬಳಿ ಕ್ಷಮೆ ಯಾಚಿಸಿದೆ ಎಂದು ವಿವೇಕ್‌ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಂದು ಗ್ರೋಕ್‌ ಹೇಳಿದೆ.


ಶಹಜಾದ್

ಇವರು ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಹೆಚ್ಚಿಸಲು ಅಮೆರಿಕ 21 ಮಿಲಿಯನ್ ಡಾಲರ್ ಖರ್ಚು ಮಾಡಿದೆ ಎಂದು ಸುಳ್ಳು ಸುದ್ದಿ ಹರಡಿದ್ದರು.

ಕಪಿಲ್ ಶರ್ಮಾ

ದೆಹಲಿ ಬಿಜೆಪಿ ಸಚಿವ. ಇವರ ಮೇಲೆ 2020ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಆರೋಪಗಳಿವೆ. 2020 ರ ದೆಹಲಿ ವಿಧಾನಸಭಾ ಚುನಾವಣೆಯನ್ನು ‘ಭಾರತ vs. ಪಾಕಿಸ್ತಾನ’ ಎಂದು ಬಣ್ಣಿಸುವ ಮೂಲಕ ಎಎಪಿಯನ್ನು ಗುರಿಯಾಗಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಸುರೇಶ್ ಚವಾಂಕೆ

ಬಿಜೆಪಿ ಸ್ನೇಹಿ ಮಾಧ್ಯಮ ಸುದರ್ಶನ್ ಟಿವಿಯ ಸಿಎಂಡಿ. 2020 ರಲ್ಲಿ, ‘ಯುಪಿಎಸ್‌ಸಿ ಜಿಹಾದ್’ ಹೆಸರಿನಲ್ಲಿ ಒಂದು ಗುಂಪನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು. ಇದು ವಿವಾದಾತ್ಮಕವಾಗಿತ್ತು. ಈ ವಾಹಿನಿ ಅನೇಕ ಸುಳ್ಳು ಸುದ್ದಿಗಳು ಹರಡಿದೆ ಎಂಬ ಆರೋಪಗಳಿವೆ.

ಪುಷ್ಪೇಂದ್ರಕುಮ್

ಇವರು ಕ್ರಿಪ್ಟೋ ಪ್ರಚಾರಕ. ಬಿಟ್‌ಕಾಯಿನ್ ಕುರಿತು ಸುಳ್ಳು ಸುದ್ದಿ ಹರಡುತ್ತಿರುವ ಆರೋಪಗಳಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page