Thursday, June 20, 2024

ಸತ್ಯ | ನ್ಯಾಯ |ಧರ್ಮ

ಟ್ರಾಕ್ಟರ್‌ ಟ್ರಾಲಿ ಉರುಳಿದ ಭೀಕರ ದುರಂತ: 22ಕ್ಕೇರಿದ ಮೃತರ ಸಂಖ್ಯೆ

ಉತ್ತರ ಪ್ರದೇಶ : ದೇವಸ್ಥಾನದಿಂದ  ಮನೆಗೆ ತೆರಳುವಾಗ ಸುಮಾರು 50  ಜನರು ಪ್ರಯಾಣಿಸುತ್ತಿದ್ದ ಟ್ರಾಕ್ಟರ್‌ ಟ್ರಾಲಿ ಕೊಳಕ್ಕೆ ಉರುಳಿದ್ದು 22 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಶನಿವಾರದಂದು ಕಾನ್ಪುರ ಜಿಲ್ಲೆಯ ಕೊರ್ತಾ ಗ್ರಾಮದ ಸುಮಾರು 50 ಜನರು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಮುಡಿ ಕೊಡುವ ಕಾರ್ಯಕ್ರಮವನ್ನು ಮುಗಿಸಿ ರಾತ್ರಿ ಟ್ರಾಕ್ಟರ್‌ನಲ್ಲಿ ಮನೆಗೆ ತೆರಳುವಾಗ ಟ್ರಾಲಿಯು ರಸ್ತೆ ಬದಿಯಲ್ಲಿದ್ದ ಕೊಳಕ್ಕೆ ಮಗುಚಿ ಉರುಳಿ ಬಿದ್ದಿರುವ ಭೀಕರ ದುರಂತ ನಡೆದಿದೆ. ಈ ಘಟನೆಯಲ್ಲಿ ಇಲ್ಲಿಯವರೆಗೆ 22 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿನ ಪೋಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಭೀಕರ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್‌ ಸಂತಾಪ ಸೂಚಿಸಿದ್ದಾರೆ. ಮೃತ ಪಟ್ಟ ಸಂತ್ರಸ್ತ ಕುಟುಂಬಗಳಿಗೆ ಪ್ರಧಾನಿ ಮೋದಿಯವರು ಪರಿಹಾರ ಧನ  ಘೋಷಿಸಿದ್ದು,  ಸಾವೀಗೀಡಾಗಿರುವ ವ್ಯಕ್ತಿಯ ಕುಟುಂಬಕ್ಕೆ ಎರಡು ಲಕ್ಷ ರೂ ಮತ್ತು ಗಾಯಾಗೊಂಡವರಿಗಾಗಿ 50000 ರೂ ನೆರವು ನೀಡುವುದಾಗಿ ಹೇಳಿದ್ದಾರೆ.

ಪರಿಹಾರಕ್ಕೆ ಸಂಬಂಧಪಟ್ಟಂತೆ ಮೇಲ್ವಿಚಾರಣಾ ಕಾರ್ಯಾಚರಣೆಗೆಂದು ಯೋಗಿ ಆದಿತ್ಯನಾಥ್‌ ಅವರು ಘಟನಾ ಸ್ಥಳಕ್ಕೆ ಅಲ್ಲಿನ ಸಚಿವರಾದ ರಾಕೇಶ್‌ ಸಾಚನ್‌ ಮತ್ತು ಅಜಿತ್‌ ಪಾಲ್‌ ಅವರನ್ನು ಕಳುಹಿಸಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ಮಹಾತ್ಮ ಗಾಂಧೀಜಿ ರವರ ಜನ್ಮದಿನದ ಪ್ರಯುಕ್ತ ಅವರಿಗೊಂದು ಗೀತ ನಮನ

ರಚನೆ : ಗುರುರಾಜ ಬೆಣಕಲ್
ಗಾಯನ : ನವ್ಯಾಮೃತ ಶೆಟ್ಟಿ

https://fb.watch/fUWJVkbL5C/

peepal/ಪೀಪಲ್ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಲು ಮನವಿ

Related Articles

ಇತ್ತೀಚಿನ ಸುದ್ದಿಗಳು