Home ಬೆಂಗಳೂರು ನಾಳೆ ರಾಜಧಾನಿಯಲ್ಲಿ ಸಂಚಾರ ಮಾರ್ಗದಲ್ಲಿ ವ್ಯತ್ಯಯ – ಮೆಟ್ರೋ ವ್ಯವಸ್ಥೆಯಲ್ಲೂ ಬದಲಾವಣೆ

ನಾಳೆ ರಾಜಧಾನಿಯಲ್ಲಿ ಸಂಚಾರ ಮಾರ್ಗದಲ್ಲಿ ವ್ಯತ್ಯಯ – ಮೆಟ್ರೋ ವ್ಯವಸ್ಥೆಯಲ್ಲೂ ಬದಲಾವಣೆ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್‌ 15ರಂದು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ಆಯೋಜಿಸಲಾಗಿದೆ. ಮಧ್ಯಾಹ್ನ 12ರಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಬೆಂಗಳೂರು ಸಂಚಾರಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದು, ವಾಹನ ಸವಾರರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ?

ಆ.15ರಂದು ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಅಂಬೇಡ್ಕರ್‌ ರಸ್ತೆಯ ಮೂಲಕ ಕೆ.ಆರ್‌. ಸರ್ಕಲ್‌ ಹಾಗೂ ಶೇಷಾದ್ರಿ ರಸ್ತೆಯ ಕೆ.ಆರ್‌. ಸರ್ಕಲ್‌ನಿಂದ ಅಂಬೇಡ್ಕರ್‌ ರಸ್ತೆಯ ಮೂಲಕ ಶಿವಾಜಿನಗರ ಮತ್ತು ವಸಂತನಗರ ಕಡೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗಗಳು

ಅಂಬೇಡ್ಕರ್‌ ರಸ್ತೆಯಿಂದ ಕೆ.ಆರ್‌. ಸರ್ಕಲ್‌ ಕಡೆಗೆ ಬರುವ ವಾಹನಗಳು:

  • ಬಾಳೇಕುಂದ್ರಿ ಜಂಕ್ಷನ್‌ನಿಂದ ಕನ್ನಿಂಗ್‌ಹ್ಯಾಂ ರಸ್ತೆ ಮೂಲಕ ಚಂದ್ರಿಕಾ ಹೋಟೆಲ್‌ ಬಳಿ ಎಡಕ್ಕೆ ತಿರುಗಿ ಎಲ್‌ಆರ್‌ಡಿಇ–ಬಸವೇಶ್ವರ ಜಂಕ್ಷನ್‌, ಪ್ಯಾಲೇಸ್‌ ರಸ್ತೆ ಮೂಲಕ ಸಂಚರಿಸಬಹುದು.
  • ಬಾಳೇಕುಂದ್ರಿ ಜಂಕ್ಷನ್‌ನಿಂದ ಸಿಟಿಒ, ಕ್ಲೀನ್‌ ಜಂಕ್ಷನ್‌, ಸಿದ್ದಲಿಂಗಯ್ಯ ಜಂಕ್ಷನ್‌, ಆರ್‌ಆರ್‌ಎಂಆರ್‌ ಕಾರ್ಪೊರೇಷನ್‌ ಸರ್ಕಲ್‌ ಮೂಲಕ ತೆರಳಬಹುದು.

ಬಿಆರ್‌ವಿ ಕಡೆಯಿಂದ ಬರುವ ವಾಹನಗಳು:
ರಾಜಭವನ ರಸ್ತೆಯಿಂದ ಬಂದು ಚಾಲುಕ್ಯ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ ಪ್ಯಾಲೇಸ್‌ ರಸ್ತೆ ಮೂಲಕ ಕೆ.ಆರ್‌. ಸರ್ಕಲ್‌ ಕಡೆಗೆ ತೆರಳಬಹುದು.

ಕೆ.ಆರ್‌. ಸರ್ಕಲ್‌ನಿಂದ ಶಿವಾಜಿನಗರ/ವಸಂತನಗರ ಕಡೆಗೆ:

  • ಮಹಾರಾಣಿ ಮೇಲ್ಸೇತುವೆ ಬಳಿ ಎಡಕ್ಕೆ ತಿರುಗಿ ಪ್ಯಾಲೇಸ್‌ ರಸ್ತೆ, ಬಸವೇಶ್ವರ ಸರ್ಕಲ್‌ ಮೂಲಕ ವಸಂತನಗರ/ಶಿವಾಜಿನಗರ ಕಡೆಗೆ ತೆರಳಬಹುದು.
  • ಕೆ.ಆರ್‌. ಸರ್ಕಲ್‌ನಿಂದ ನೃಪತುಂಗ ರಸ್ತೆ, ಕಾರ್ಪೊರೇಷನ್‌ ಸರ್ಕಲ್‌, ಕೆ.ಬಿ. ರಸ್ತೆ ಮೂಲಕ ಶಿವಾಜಿನಗರ ಕಡೆಗೆ ಸಂಚರಿಸಬಹುದು.

ಮೆಟ್ರೋ ಪ್ರಯಾಣಿಕರಿಗೆ ಸೂಚನೆ

ಅಂಬೇಡ್ಕರ್‌ ಮೆಟ್ರೋ ಹಾಗೂ ವಿಧಾನಸೌಧ ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.

ಫ್ರೀಡಂ ಹಬ್ಬಕ್ಕೆ ಮೆಟ್ರೋ ಮೂಲಕ ಆಗಮಿಸುವವರು ಕಬ್ಬನ್‌ ಪಾರ್ಕ್‌ ಮೆಟ್ರೋ ಅಥವಾ ವಿಶ್ವೇಶ್ವರಯ್ಯ ಮೆಟ್ರೋ (ಸೆಂಟ್ರಲ್‌ ಕಾಲೇಜು) ನಿಲ್ದಾಣಗಳನ್ನು ಬಳಸುವಂತೆ ಸೂಚಿಸಲಾಗಿದೆ.

ವಾಹನ ನಿಲುಗಡೆಗೆ ನಿರ್ಬಂಧ

ಕ್ವೀನ್ಸ್‌ ರಸ್ತೆಯ ಎರಡೂ ಬದಿ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್‌ ವೃತ್ತದವರೆಗೆ, ಕ್ವೀನ್ಸ್‌ ವೃತ್ತದಿಂದ ಸಿಟಿಒ ಜಂಕ್ಷನ್‌, ಲೋಕಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಕಬ್ಬನ್‌ ಪಾರ್ಕ್‌ನ ಕಿಂಗ್‌ ಸರ್ಕಲ್‌ ಹಾಗೂ ಪ್ರೆಸ್‌ಕ್ಲಬ್‌ ಮುಂಭಾಗದಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ.

ಪರ್ಯಾಯ ಪಾರ್ಕಿಂಗ್‌ ಸ್ಥಳಗಳು

ಸಾರ್ವಜನಿಕರು ಕೆಳಗಿನ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಬಹುದು:

  • ಸ್ಕೌಟ್ಸ್‌–ಗೈಡ್ಸ್‌ ಪಾರ್ಕಿಂಗ್‌ ಸ್ಥಳ
  • ಫ್ರೀಡಂ ಪಾರ್ಕ್‌
  • ಎಂಎಲ್‌ಸಿಪಿ ಪಾರ್ಕಿಂಗ್‌
  • ಯುಬಿಸಿಟಿ ಪಾರ್ಕಿಂಗ್‌
  • ಕಂಠೀರವ ಕ್ರೀಡಾಂಗಣ
  • ಯೂನಿವರ್ಸಿಟಿ ಪಾರ್ಕಿಂಗ್‌ (ಜ್ಞಾನಜ್ಯೋತಿ ಆಡಿಟೋರಿಯಂ)
  • ಶಿವಾಜಿನಗರ
  • ನೆಹರೂ ತಾರಾಲಯ
  • ಸೇಂಟ್‌ ಜೋಸೆಫ್ಸ್‌ ಹೈಸ್ಕೂಲ್‌ ಮೈದಾನ
  • ಲಿಂಕ್‌ ರಸ್ತೆ
  • ಸರ್ಕಾರಿ ಕಲಾ ಕಾಲೇಜು

ಕ್ಯಾಬ್‌ ಪಿಕ್‌ಅಪ್‌ ಮತ್ತು ಡ್ರಾಪ್‌ ಸ್ಥಳಗಳು

  • ಲೋಕಭವನ–ಸಿಟಿಒ ಜಂಕ್ಷನ್‌
  • ಶೇಷಾದ್ರಿ ರಸ್ತೆ–ಕೆ.ಆರ್‌. ಸರ್ಕಲ್‌

ಬಿಎಂಟಿಸಿ ಬಸ್‌ಗಳ ಮಾರ್ಗ ಬದಲಾವಣೆ

ಎಂ.ಎಸ್‌. ಬಿಲ್ಡಿಂಗ್‌ ಒಳಭಾಗದಲ್ಲಿ ನಿಲ್ಲುವ ಬಸ್‌ಗಳು:
ಕೆ.ಆರ್‌. ಸರ್ಕಲ್‌, ಟೌನ್‌ಹಾಲ್‌, ಸಿಟಿ ಮಾರ್ಕೆಟ್‌, ಮೈಸೂರು ರಸ್ತೆ, ಸ್ಯಾಟಲೈಟ್‌, ಸಿಐಡಿ, ಬಸವೇಶ್ವರ ಸರ್ಕಲ್‌, ರೇಸ್‌ಕೋರ್ಸ್‌ ರಸ್ತೆ, ಶೇಷಾದ್ರಿಪುರಂ, ಲುಲು ಮಾಲ್‌, ಮಾಗಡಿ ರಸ್ತೆ, ಸುಮನಹಳ್ಳಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ.

ನ್‌ ರಸ್ತೆ, ಡಬಲ್‌ ರಸ್ತೆ, ಶಾಂತಿನಗರ, ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ, ಲಾಲ್‌ಬಾಗ್‌ ರಸ್ತೆ, ಬನಶಂಕರಿ ರಸ್ತೆ, ಶೇಷಾದ್ರಿಪುರಂ, ಮಲ್ಲೇಶ್ವರಂ, ನವರಂಗ್‌, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಬಸವೇಶ್ವರನಗರ ಹಾಗೂ ಶಂಕರಮಠ ಮಾರ್ಗಗಳಲ್ಲೂ ಬಸ್‌ ಸೇವೆ ಮುಂದುವರಿಯಲಿದೆ.

ಸಿಟಿಒ ಜಂಕ್ಷನ್‌ನಲ್ಲಿ ನಿಲ್ಲುವ ಬಸ್‌ಗಳು:
ಮಣಿಪಾಲ್‌ ಸೆಂಟರ್‌, ಹಳೆ ಮದ್ರಾಸ್‌ ರಸ್ತೆ, ಕೆ.ಆರ್‌.ಪುರ, ಟ್ರಿನಿಟಿ ಜಂಕ್ಷನ್‌, ಓಲ್ಡ್‌ ಏರ್‌ಪೋರ್ಟ್‌ ರಸ್ತೆ, ಮಾರತ್‌ಹಳ್ಳಿ, ವೈಟ್‌ಫೀಲ್ಡ್‌, ಕನ್ನಿಂಗ್‌ಹ್ಯಾಂ ರಸ್ತೆ, ಓಲ್ಡ್‌ ಉದಯ ಟಿವಿ ಸರ್ಕಲ್‌, ಕಂಟೋನ್ಮೆಂಟ್‌, ಟ್ಯಾನರಿ ರಸ್ತೆ ಹಾಗೂ ನಾಗವಾರ ಮಾರ್ಗಗಳಲ್ಲಿ ಸಂಚರಿಸಲಿವೆ.

You cannot copy content of this page

Exit mobile version