Wednesday, April 30, 2025

ಸತ್ಯ | ನ್ಯಾಯ |ಧರ್ಮ

ಆಂದ್ರಪ್ರದೇಶ : ಧಾರ್ಮಿಕ ಕಾರ್ಯಕ್ರಮದಲ್ಲಿ ಘೋರ ದುರಂತ, 7 ಮಂದಿ ಸಾ*ವು

ಆಂಧ್ರಪ್ರದೇಶದ ವಿಶಾಖಪಟ್ಟಣದ ವರಮಹಾಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಚಂದನೋತ್ಸವದಲ್ಲಿ ಘೋರ ದುರಂತವೊಂದು ನಡೆದು 7 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಹಲವು ಭಕ್ತರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವರ ಉತ್ಸವದ ವೇಳೆ ಗೋಡೆ ಕುಸಿದು ಭಕ್ತರ ಸಾವಿಗೆ ಕಾರಣವಾಗಿದೆ. ಸದ್ಯ ರಕ್ಷಾಣ ಸಿಬ್ಬಂದಿಯಿಂದ ಜನರ ರಕ್ಷಣೆ ಕಾರ್ಯ ನಡೆದಿದೆ.

ವಿಶಾಖಪಟ್ಟಣಂನ ಶ್ರೀ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವ ಕಾರ್ಯಕ್ರಮ ನಡೆಯತ್ತಿತ್ತು. ಈ ಸಂದರ್ಭದಲ್ಲಿ 20 ಅಡಿ ಉದ್ದದ ಗುಮ್ಮಟ ಕುಸಿದು ಬಿದ್ದಿದಿದೆ. ಸ್ಥಳೀಯರು ಸೇರಿದಂತೆ ಉತ್ಸವಕ್ಕೆ ಬಂದಿದ್ದ ಅನೇಕ ಭಕ್ತರು ರಸ್ತೆಯ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಈ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಜನ ಆತಂಕಗೊಂಡಿದ್ದಾರೆ.

ಸ್ಥಳಕ್ಕೆ ಆಂಧ್ರ ಪ್ರದೇಶದ ರಾಜ್ಯ ವಿಪತ್ತು ರಕ್ಷಣಾ ಸಿಬ್ಬಂದಿ (SDRF) ಹಾಗೂ ರಾಷ್ಟ್ರೀಯ ನೈಸರ್ಗಿಕ ರಕ್ಷಣಾ ಸಿಬ್ಬಂದಿ ಬಂದು (NDRF) ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಸುತ್ತಿವೆ. ಘಟನೆ ತಿಳಿದ ಕೂಡಲೇ ಜಿಲ್ಲಾಧಿಕಾರಿಗಳೂ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page