Saturday, March 15, 2025

ಸತ್ಯ | ನ್ಯಾಯ |ಧರ್ಮ

ಕೆನಡಾದಲ್ಲಿ ತರಬೇತಿ ವಿಮಾನ ಪತನ: ಇಬ್ಬರು ಭಾರತೀಯ ಟ್ರೈನಿ ಪೈಲಟ್‌ಗಳು ಸೇರಿದಂತೆ ಮೂವರು ಸಾವು

Canada Plane Crash : ಕೆನಡಾದಲ್ಲಿ ವಿಮಾನ ಅಪಘಾತ ಸಂಭವಿಸಿದೆ. ತರಬೇತಿ ವಿಮಾನ ಪತನಗೊಂಡು ಭಾರತದ ಇಬ್ಬರು ಟ್ರೈನಿ ಪೈಲಟ್‌ಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಮುಂಬೈ ಮೂಲದ ಟ್ರೈನಿ ಪೈಲಟ್‌ಗಳಾದ ಅಭಯ್ ಗದ್ರು ಮತ್ತು ಆಶ್ ರಾಮುಗಡೆ ಅವರು ಶನಿವಾರ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಇವರಿಬ್ಬರೂ ಒಂದೇ ಕುಟುಂಬದವರು ಎಂಬುದು ಗಮನಾರ್ಹ. ಅವಳಿ-ಎಂಜಿನ್ ಹೊಂದಿದ್ದ ಹಗುರ ವಿಮಾನ, ಪೈಪರ್ ಪಿಎ -34 ಸೆನೆಕಾ, ಚಿಲ್ಲಿವಾಕ್ ಸಿಟಿ ಬಳಿಯ ಮೋಟೆಲ್‌ನ ಹಿಂದಿನ ಮರಗಳು ಮತ್ತು ಪೊದೆಗಳಿಗೆ ಇದ್ದಕ್ಕಿದ್ದಂತೆ ಅಪ್ಪಳಿಸಿತು.

ಈ ಅಪಘಾತಕ್ಕೆ ಕಾರಣಗಳು ತಿಳಿದುಬಂದಿಲ್ಲ. ಅಪಘಾತದಲ್ಲಿ ಮತ್ತೊಬ್ಬ ಪೈಲಟ್ ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿಯು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page