ಬೆಂಗಳೂರು : ಒಂದು ಸ್ಕ್ಯಾನ್ನಲ್ಲಿ ಮಾಹಿತಿ ಸಿಗುವಂತೆ ಡ್ರೈವಿಂಗ್ ಲೈಸೆನ್ಸ್ (Driving Licence) ಹಾಗೂ RC ಕಾರ್ಡ್ (RC Card) ವಿತರಣೆಯನ್ನ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಆರ್ಸಿ ಮತ್ತು ಡಿಎಲ್ ಕಾರ್ಡ್ ಮತ್ತಷ್ಟು ಹೈಟೆಕ್ (HighTech) ಆಗಲಿದೆ. ಒನ್ ನೇಷನ್, ಒನ್ ಕಾರ್ಡ್ (One Nation One Card) ಅಡಿಯಲ್ಲಿ ಸಾರಿಗೆ ಇಲಾಖೆಯಿಂದ (Transport Department) ಆರ್ಸಿ – ಡಿಎಲ್ ಹೊಸ ಸ್ಮಾರ್ಟ್ ಕಾರ್ಡ್ಗೆ ಚಾಲನೆ ನೀಡಲಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಹೊಸ RC ಸ್ಮಾರ್ಟ್ ಕಾರ್ಡ್ ಚಾಲನೆ ನೀಡಿದ್ದಾರೆ.
ಕಾರ್ಡ್ನಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
ಹೊಸ ಕಾರ್ಡ್ಗೆ ಚಾಲನೆ ಕೊಟ್ಟ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಅರ್ಜಿ ಸಲ್ಲಿಸದವರಿಗೆ ಹೊಸ ಅರ್ಜಿ ಸಲ್ಲಿಸದವರಿಗೆ ಹೊಸ RC ಸ್ಪಾರ್ಟ್ ಕಾರ್ಡ್ ಸಿಗಲಿದೆ. ಹೊಸ ಕಾರ್ಡ್ನಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಒಂದು ಕಾರ್ಡ್ಗೆ ₹200 ಫಿಕ್ಸ್
ಹೈಟೆಕ್ ಸ್ಪರ್ಶ ಪಡೆದಿರುವ ಕಾರ್ಡ್ಗೆ ಸಾರಿಗೆ ಇಲಾಖೆ ಒಂದು ಕಾರ್ಡ್ಗೆ 200 ರೂ ಶುಲ್ಕ ವಿಧಿಸಿದೆ. ಈ ಪೈಕಿ 135 ರೂ ಸರ್ಕಾರಕ್ಕೆ ಹೊದರೆ 64.46 ಸೇವಾದಾರರ ಪಾಲಾಗಲಿದೆ. ದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸ ಸ್ಮಾರ್ಟ್ ಕಾರ್ಡ್ ಮುದ್ರಿಸಲಾಗುತ್ತಿದ್ದು, ಒಂದು ಗಂಟೆಗೆ 500-600 ಕಾರ್ಡ್ ಪ್ರಿಂಟ್ ಮಾಡಬಹುದಾಗಿದೆ.
