Wednesday, June 19, 2024

ಸತ್ಯ | ನ್ಯಾಯ |ಧರ್ಮ

ರಾಜ್ಯಸಭೆಯಿಂದ ತೃಣಮೂಲ ಸಂಸದ ಡೆರಿಕ್ ಒ’ಬ್ರೇನ್ ಅಮಾನತು

ಡೆರೆಕ್ ಒ’ಬ್ರಿಯಾನ್ | ತೃಣಮೂಲ ಕಾಂಗ್ರೆಸ್ ಸಂಸದ (Trinamool MP) ಡೆರೆಕ್ ಒಬ್ರಿಯನ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

ಬುಧವಾರ ಲೋಕಸಭೆಯಲ್ಲಿ ಭದ್ರತಾ ಲೋಪದ ಘಟನೆಗೆ ಸಂಬಂಧಿಸಿದಂತೆ ಇಂದು ರಾಜ್ಯಸಭೆಯಲ್ಲಿ ಗೊಂದಲ ಉಂಟಾಗಿತ್ತು. ಹೊಗೆ ಬಾಂಬ್ ದಾಳಿ ಘಟನೆಯ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿದವು. ಈ ವೇಳೆ ಸಂಸದ ಡೆರಿಕ್ ಒಬ್ರೇನ್ (Derek OBrien) ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರೊಂದಿಗೆ ವಾಗ್ವಾದ ನಡೆಸಿದರು. ಅವರು ಕುರ್ಚಿಯ ಮುಂದೆ ನಿಂತು ಕೈ ಬೀಸಿದರು. ಇದರೊಂದಿಗೆ ಸಭಾಪತಿ ಒಬ್ರೇನ್ ಅವರ ವರ್ತನೆ ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒ’ಬ್ರೇನ್ ಅವರು ಸದನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು. ನಂತರ ಅವರನ್ನು ಸದನದಿಂದ ಅಮಾನತುಗೊಳಿಸಲಾಗುತ್ತಿದೆ ಎಂದು ಪ್ರಕಟಿಸಿದರು.

ಬುಧವಾರ ಲೋಕಸಭೆಯಲ್ಲಿ ಹೊಗೆ ಬಾಂಬ್ ದಾಳಿ ಘಟನೆಯ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿದವು. ಆಗ ಸಭಾಪತಿ ಜಗದೀಪ್ ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿದರು. ವಿಪಕ್ಷ ಸದಸ್ಯರು ಸಲ್ಲಿಸಿದ್ದ 28 ನೋಟಿಸ್‌ಗಳನ್ನು ಸಭಾಪತಿ ತಿರಸ್ಕರಿಸಿದರು. ಇದರಿಂದ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಒʼಬ್ರೇನ್ ಹಾಗೂ ಸಭಾಪತಿ ನಡುವೆ ವಾಗ್ವಾದ ನಡೆದಿದೆ. ಒ’ಬ್ರೇನ್ ಅವರ ನಡವಳಿಕೆ ಸರಿಯಾಗಿಲ್ಲ ಎಂದು ಸಭಾಪತಿ ಆಕ್ರೋಶ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು