ಉತ್ತರ ಪ್ರದೇಶ: ಟ್ರ್ಯಾಕ್ಟರ್‌ನ ಟ್ರಾಲಿ ಕೊಂಡಿ ಕಳಚಿಕೊಂಡು ಹೊಂಡಕ್ಕೆ ಬಿದ್ದಿರುವ ಘಟನೆ ಲಕ್ನೋ ಜಿಲ್ಲೆಯ ಇಟೌಂಜಾದ ಬಳಿ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಲಕ್ನೋ ರೇಂಜ್ ಐಜಿ ಲಕ್ಷ್ಮಿ ಸಿಂಗ್ ಅವರು, ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಟ್ಯಾಕ್ಟರ್ ಟ್ರಾಲಿಯ ಕೊಂಡಿ ಕಳಚಿ ಟ್ರಾಲಿಯು ಹೊಂಡಕ್ಕೆ ಬಿದ್ದಿದೆ. ಘಟನೆ ತಿಳಿದ ಕೂಡಲೇ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ದಾವಿಸಿದ್ದು ಹೊಂಡದಲ್ಲಿ ಬಿದ್ದಿದ್ದ ಜನರನ್ನು ಕಾಪಾಡಿದೆ. ಕಾರ್ಯಾಚರಣೆಯಲ್ಲಿ ತಂಡವು 37 ಜನರನ್ನು ಪ್ರಾಣಾಪಯಾದಿಂದ ಪಾರು ಮಾಡಿದೆ, ಆದರೆ ಕೆಲವರ ಪರಿಸ್ಥಿತಿ ಗಂಭೀರವಾದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅವರು ಬದುಕುಳಿಯಲಿಲ್ಲ ಎಂದು ಹೇಳಿದರು.
ಮಾಹಿತಿ ಪ್ರಕಾರ ಈ ಘಟನೆಯಲ್ಲಿ ಒಟ್ಟು 10 ಜನ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.