Thursday, May 8, 2025

ಸತ್ಯ | ನ್ಯಾಯ |ಧರ್ಮ

ಆಪರೇಷನ್ ಸಿಂಧೂರ್ ಬಗ್ಗೆ “SHAMELESS” ಎಂದು ಪ್ರತಿಕ್ರಿಯಿಸಿದ ನರೇಂದ್ರ ಮೋದಿ ಆಪ್ತ ಡೊನಾಲ್ಡ್ ಟ್ರಂಪ್

ಆಪರೇಷನ್ ಸಿಂಧೂರ್ ಕುರಿತಾಗಿ ವಿಶ್ವದ ಅನೇಕ ನಾಯಕರು ಪ್ರತಿಕ್ರಿಯಿಸಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಪ್ತಮಿತ್ರ ಡೊನಾಲ್ಡ್ ಟ್ರಂಪ್ ಭಾರತೀಯ ಸೇನೆಯ ನಡೆಯನ್ನು “Shameless” ಎಂದು ಪ್ರತಿಕ್ರಿಯಿಸಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ, ನಾವು ಈಗಷ್ಟೇ ಅದರ ಬಗ್ಗೆ ಕೇಳಿದ್ದೇವೆ ಹಿಂದಿನ ಕೆಲವು ಘಟನೆಗಳನ್ನು ಆಧರಿಸಿ, ಏನಾದರೂ ಸಂಭವಿಸಲಿದೆ ಎಂದು ಜನರಿಗೆ ತಿಳಿದಿತ್ತು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತನ್ನ ಆಪ್ತಮಿತ್ರ ಎನ್ನುತ್ತಿದ್ದ ನರೇಂದ್ರ ಮೋದಿಗೆ ಡೊನಾಲ್ಡ್ ಟ್ರಂಪ್ ಈಗ ತನ್ನ ಅಸಲಿ ಮುಖ ಹೊರಹಾಕಿದ್ದಾರೆ. ಪ್ರಧಾನಿ ಮೋದಿಗೆ ಫ್ರೆಂಡ್, ಒಳ್ಳೆಯ ಫ್ರೆಂಡ್ ಎಂದು ಹೇಳುತ್ತಾ ಬೆನ್ನು ತಟ್ಟುತ್ತಿರುವ ಟ್ರಂಪ್ ಈಗ ಪಾಕ್ ಪರ ನಿಂತಿದ್ದಾರೆ.

ಜೊತೆಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಎರಡು ಪರಮಾಣು ಹೊಂದಿರುವ ನೆರೆಹೊರೆಯ ದೇಶಗಳು ಶಾಂತಿಯುತ ಪರಿಹಾರ ಕೈಗೊಳ್ಳುವುದನ್ನು ಅಮೆರಿಕಾ ಬಯಸುತ್ತದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.

ಪರಮಾಣು ಹೊಂದಿರುವ ನೆರೆಹೊರೆಯ ರಾಷ್ಟ್ರಗಳು ಸಂಯಮದಿಂದ ವರ್ತಿಸಬೇಕು, ಯಾವುದೇ ಸಂದರ್ಭದಲ್ಲೂ ತನ್ನ ಸಂಯಮ ಮೀರಿದಾಗ ಯುದ್ಧದ ಪರಿಣಾಮ ಸೇನೆಗಳಿಗಿಂತ ರಾಷ್ಟ್ರದ ಜನತೆಯ ಮೇಲೆ ಬೀಳಬಹುದು ಎಂದು ಚೀನಾ ಹೇಳಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಶಾಂತಿ ಮತ್ತು ಸ್ಥಿರತೆಗೆ ಆದ್ಯತೆ ನೀಡಬೇಕು, ಶಾಂತ ಮತ್ತು ಸಂಯಮದಿಂದಿರಬೇಕು ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಲು ಮುಂದಾಗಬಾರದು ಎಂದು ಬೀಜಿಂಗ್ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಆದರೆ ಭಾರತದ ಆಪರೇಷನ್ ಸಿಂಧೂರ್ ಬಗ್ಗೆ ಇಸ್ರೇಲ್, ಭಾರತದ ಆತ್ಮರಕ್ಷಣೆಯ ಹಕ್ಕನ್ನು ಪ್ರತಿಪಾದಿಸಿದೆ. ಭಾರತದ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಟ್ವಿಟ್‌ ಮಾಡಿ, ಇಸ್ರೇಲ್ ಭಾರತದ ಆತ್ಮರಕ್ಷಣೆಯ ಹಕ್ಕನ್ನು ಬೆಂಬಲಿಸುತ್ತದೆ, ಭಯೋತ್ಪಾದಕರು ಅಮಾಯಕರ ವಿರುದ್ಧ ಘೋರ ಅಪರಾಧ ನಡೆಸಿದ ನಂತರ ಅಡಗಿಕೊಳ್ಳಲು ಸ್ಥಳವಿಲ್ಲ ಎಂಬುದನ್ನು ತಿಳಿದಿರಬೇಕು ಎಂದು ಹೇಳಿದ್ದಾರೆ.

ಇತ್ತ ಅರಬ್ ರಾಷ್ಟ್ರ, ಭಾರತದ ಈ ಪ್ರತಿದಾಳಿಗೆ ಪ್ರತಾಕ್ರಿಯಿಸಿ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಶಾಂತಿಗೆ ಧಕ್ಕೆ ತರುವಂತಹ ಕೆಲಸವನ್ನು ತಪ್ಪಿಸಿ, ಭಾರತ ಮತ್ತು ಪಾಕಿಸ್ತಾನಕ್ಕೆ ಸಂಯಮದಿಂದ ವರ್ತಿಸಿ ಎಂದು ಯುಎಇ ವಿದೇಶಾಂಗ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎರಡು ದೇಶಗಳ ನಡುವೆ ರಾಜತಾಂತ್ರಿಕತೆ ಮತ್ತು ಸಂವಾದವು ಬಿಕ್ಕಟ್ಟುಗಳನ್ನು ಶಾಂತಿಯುತವಾಗಿ ಪರಿಹರಿಸಲು ಮತ್ತು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ರಾಷ್ಟ್ರಗಳ ಆಕಾಂಕ್ಷೆಗಳನ್ನು ಸಾಧಿಸಲು ಅತ್ಯಂತ ಪರಿಣಾಮಕಾರಿ ಸಾಧನ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page