Tuesday, January 27, 2026

ಸತ್ಯ | ನ್ಯಾಯ |ಧರ್ಮ

ತುಷಾರ್ ಗಾಂಧಿ ಬಂಧನ, ಬಿಡುಗಡೆ : ಬಂಧನದ ಬಗ್ಗೆ ಹೆಮ್ಮೆ ಇದೆ ಎಂದ ಗಾಂಧೀಜಿ ಮೊಮ್ಮಗ

ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಅವರನ್ನು ಮುಂಬೈನಲ್ಲಿ ಕ್ವಿಟ್ ಇಂಡಿಯಾ ದಿನದ ಸ್ಮರಣಾರ್ಥ ಕಾರ್ಯಕ್ರಮಕ್ಕೆ ತೆರಳುವ ಕೆಲವೇ ಕ್ಷಣಗಳ ಮೊದಲು ಪೊಲೀಸರು ಒಂದೆರಡು ಗಂಟೆಗಳ ಕಾಲ ಬಂಧಿಸಿದ್ದ ಘಟನೆ ನಡೆದಿದೆ.

ಈ ಬಗ್ಗೆ ಟ್ವಿಟರ್​​ನಲ್ಲಿ ಬರೆದಿರುವ ತುಷಾರ್ ಗಾಂಧಿ,​​”ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ನಾನು ಆಗಸ್ಟ್ 9ರಂದು ನಡೆದ ಕ್ವಿಟ್ ಇಂಡಿಯಾ ದಿನದ ನೆನಪಿಗಾಗಿ ಕ್ರಾಂತಿ ಮೈದಾನ ಮನೆಯಿಂದ ಹೊರಟಾಗ ಸಾಂತಾಕ್ರೂಜ್ ಪೊಲೀಸ್ ಬಂಧಿಸಿದ್ದಾರೆ. ಈ ದಿನದಂದೇ ನನ್ನನ್ನೂ ಬಂಧಿಸಿರುವುದು ನನಗೆ ಹೆಮ್ಮೆ ಇದೆ” ಎಂದು ಟ್ವೀಟ್​​ ಮಾಡಿದ್ದಾರೆ.

ಅಷ್ಟೆ ಅಲ್ಲದೆ “ಪೊಲೀಸ್ ಠಾಣೆಯಿಂದ ಹೊರಹೋಗಲು ನನಗೆ ಅನುಮತಿ ದೊರೆತ ತಕ್ಷಣ ನಾನು ಆಗಸ್ಟ್ ಕ್ರಾಂತಿ ಮೈದಾನಕ್ಕೆ ಹೋಗುತ್ತೇನೆ. ಖಂಡಿತವಾಗಿಯೂ ಕ್ರಾಂತಿ ದಿನವನ್ನು ಸ್ಮರಿಸುತ್ತೇನೆ” ಎಂದು ತುಷಾರ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ನನ್ನನ್ನು ಈಗ ಬಿಡುಗಡೆ ಮಾಡಲಾಗಿದೆ. ಕ್ರಾಂತಿ ಮೈದಾನಕ್ಕೆ ತೆರಳಲು ಅವಕಾಶ ನೀಡಲಾಗಿದೆ. ಇನ್ ಕ್ವಿಲಾಬ್ ಜಿಂದಾಬಾದ್ ಎಂದು ತುಷಾರ್ ಗಾಂಧಿ ಬರೆದುಕೊಂಡಿದ್ದಾರೆ. ಈ ಭ್ರಷ್ಟ ಸರ್ಕಾರ ನಮ್ಮ ಶಾಂತಿ ಮತ್ತು ಅಹಿಂಸೆಗೆ ಭಯ ಪಡುತ್ತಿರುವುದು ಏಕೆ? ಎಂದು ಸರ್ಕಾರದ ವಿರುದ್ಧ ತುಷಾರ್ ಗಾಂಧಿ ಕಿಡಿ ಕಾರಿದ್ದಾರೆ.

ಪೊಲೀಸ ವರದಿ ಪ್ರಕಾರ ಕ್ರಾಂತಿ ಮೈದಾನದಲ್ಲಿ ಮೌನ ಮೆರವಣಿಗೆ ಮಾಡಲು ಅವಕಾಶ ಇಲ್ಲ, ಆದರೆ ಈ ಯೋಜನೆಯನ್ನು ಅವರು ಹಾಕಿಕೊಂಡಿದ್ದಾರೆ. ಇದು ‘ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆ ಎಂದು ಹೇಳಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page